ETV Bharat / sports

ಕೊಹ್ಲಿ 'ಮಾಡರ್ನ್​ ಡೇ ಹೀರೋ': ಆಸೀಸ್ ಲೆಜೆಂಡ್ ಸ್ಟೀವ್ ವಾ ಪ್ರಶಂಸೆ - ಭಾರತದಲ್ಲಿ ಕ್ರಿಕೆಟ್​

'ಕ್ಯಾಪ್ಚರಿಂಗ್ ಕ್ರಿಕೆಟ್- ಸ್ವೀಟ್ ವಾ ಇನ್ ಇಂಡಿಯಾ' ಎಂಬ 60 ನಿಮಿಷಗಳ ಡಾಕ್ಯುಮೆಂಟರಿಯಲ್ಲಿ ಆಸ್ಟ್ರೇಲಿಯಾದ ನಾಯಕ ವಿರಾಟ್ ಕೊಹ್ಲಿ ಎದುರಾಳಿಗಳಿಗೆ ಹೆದರದಿರುವ ಅವರ ಮನೋಭಾವವೇ ಇಂದು ಲಕ್ಷಾಂತರ ಅಭಿಮಾನಿಗಳು ಅವರನ್ನು ಪ್ರೀತಿಸಲು ಕಾರಣವಾಗಿದೆ ಎಂದಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By

Published : Mar 1, 2021, 10:15 PM IST

ನವದೆಹಲಿ: ವಿರಾಟ್​ ಕೊಹ್ಲಿ ತನ್ನ ಮನೋಭಾವದಿಂದ ಭಾರತ ಕ್ರಿಕೆಟ್​ ತಂಡವನ್ನೇ ಬದಲಾಯಿಸಿದ್ದಾರೆ. ಅವರು ಭಾರತೀಯ ಆಟಗಾರರಲ್ಲಿ ಎದುರಾಳಿಗೆ ಹೆದರದೇ ಎಲ್ಲ ಅಡಚಣೆಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವವನ್ನು ಬೆಳೆಸಿದ್ದಾರೆ ಎಂದು ವಾ ಹೇಳಿದ್ದಾರೆ.

'ಕ್ಯಾಪ್ಚರಿಂಗ್ ಕ್ರಿಕೆಟ್- ಸ್ವೀಟ್ ವಾ ಇನ್ ಇಂಡಿಯಾ' ಎಂಬ 60 ನಿಮಿಷಗಳ ಡಾಕ್ಯುಮೆಂಟರಿಯಲ್ಲಿ ಆಸ್ಟ್ರೇಲಿಯಾದ ನಾಯಕ ವಿರಾಟ್ ಕೊಹ್ಲಿ ಎದುರಾಳಿಗಳಿಗೆ ಹೆದರದಿರುವ ಅವರ ಮನೋಭಾವವೇ ಇಂದು ಲಕ್ಷಾಂತರ ಅಭಿಮಾನಿಗಳು ಅವರನ್ನು ಪ್ರೀತಿಸಲು ಕಾರಣವಾಗಿದೆ ಎಂದಿದ್ದಾರೆ.

ಕೊಹ್ಲಿ ಮಾಡರ್ನ್​ ಡೇ ಹೀರೋ
ಸ್ಟೀವ್​ ವಾ

"ಅಭಿಮಾನಿಗಳಿಗೆ ಕೊಹ್ಲಿಯಲ್ಲಿ ಇಷ್ಟಪಡುವ ಸಂಗತಿಯೆಂದರೆ, ಅವರು ಭಾರತ ತಂಡದಲ್ಲಿ ಸೃಷ್ಟಿಸಿರುವ ಹೊಸ ಮನೋಭಾವ. (ಆಟದಲ್ಲಿ) ನೀವು ಏನೆಂದುಕೊಳ್ಳುತ್ತೀರೋ ಅದನ್ನು ಬೆದರದೇ ಮಾಡಿ. ನಿಮ್ಮ ಸಾಮರ್ಥ್ಯವನ್ನು ಬಳಸಿಕೊಂಡರೆ ಎಲ್ಲವನ್ನು ಸಾಧಿಸಬಹುದು ಮತ್ತು ಅದು ಸಾಧ್ಯವಿದೆ ಎಂಬುದಾಗಿದೆ. ಆದರೆ ನನ್ನ ಪ್ರಕಾರ ಕೊಹ್ಲಿ ಆಧುನಿಕ ದಿನದ ನಾಯಕ (ಮಾರ್ಡನ್​ ಡೇ ಹೀರೋ)" ಎಂದು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ ನಂತರ ಮಾಧ್ಯಮ ಪ್ರಕಟಣೆಯಲ್ಲಿ ವಾ ತಿಳಿಸಿದ್ದಾರೆ.

ಭಾರತದಲ್ಲಿ ಕ್ರಿಕೆಟ್​ ಬಗ್ಗೆ ಜನರಿಗಿರುವ ಉತ್ಸಾಹಕ್ಕೆ ತಾವೂ ಆಕರ್ಷಿತರಾಗಿರುವುದಾಗಿ ಸ್ವೀವ್​ ವಾ ಹೇಳಿದ್ದಾರೆ.

ಕ್ರಿಕೆಟ್​ ಅನ್ನು ಸೆರೆಹಿಡಿಯುವುದು ನನ್ನ ಹೃದಯಕ್ಕೆ ಬಹಳ ಹತ್ತಿರವಾದದ್ದು, ಏಕೆಂದರೆ ಕ್ರಿಕೆಟ್ ಮತ್ತು ಫೋಟೋಗ್ರಫಿ ಎರಡೂ ನನಗೆ ಉತ್ಸಾಹ ತರುತ್ತವೆ. 1986ರಲ್ಲಿ ನಾನು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದಾಗಿನಿಂದಲೂ 1999ರ ವಿಶ್ವಕಪ್​ ಗೆದ್ದ ಧರ್ಮಶಾಲ ಮತ್ತು ಮುಂಬೈನ ಓವಲ್​ ಮೈದಾನಕ್ಕೆ ತಮ್ಮ ಇತ್ತೀಚಿನ ಪ್ರವಾಸ ತಮಗೆ ಜೀವಮಾನದ ನೆನಪುಗಳನ್ನು ನೀಡಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.