ಮುಂಬೈ; ಭಾರತದ ತಂಡದಲ್ಲಿ ಸೀಮಿತ ಓವರ್ಗಳಲ್ಲಿ ಮಿಂಚುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ತಮ್ಮ ನೆಚ್ಚಿನ ಬ್ಯಾಟ್ಸ್ಮನ್ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.
ಟೆಸ್ಟ್ ತಂಡದಲ್ಲಿ ಮೊದಲು ಅವಕಾಶಗಿಟ್ಟಿಕೊಂಡಿದ್ದ ರಾಹುಲ್ ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಬಿದ್ದಿದ್ದರು. ಆದರೆ ಏಕದಿನ ಹಾಗೂ ಟಿ-20 ಯಲ್ಲಿ ಕಾಯಂ ಸದಸ್ಯರಾಗಿ ಮಿಂಚುತ್ತಿದ್ದಾರೆ.
-
I think it is got to be @ABdeVilliers17 https://t.co/tIZuSPos5A
— K L Rahul (@klrahul11) May 10, 2020 " class="align-text-top noRightClick twitterSection" data="
">I think it is got to be @ABdeVilliers17 https://t.co/tIZuSPos5A
— K L Rahul (@klrahul11) May 10, 2020I think it is got to be @ABdeVilliers17 https://t.co/tIZuSPos5A
— K L Rahul (@klrahul11) May 10, 2020
ಕೊರೊನಾ ಲಾಕ್ಡೌನ್ ಇರುವುದರಿಂದ ಮನೆಯಲ್ಲೇ ಕಾಲಕಳೆಯುತ್ತಿರುವ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇಂದು "#askkl? ಎಂಬ ಹ್ಯಾಸ್ ಟ್ಯಾಗ್ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ತಿಳಿಸಿದ್ದ ರಾಹುಲ್, ಅಭಿಮಾನಿ ಕೋರಿಕೆ ಮೇರೆಗೆ ತಮ್ಮ ನೆಚ್ಚಿನ ಬ್ಯಾಟ್ಸ್ಮನ್ ಯಾರು ಎಂದು ರಿವೀಲ್ ಮಾಡಿದ್ದಾರೆ. ರಾಹುಲ್ ಐಪಿಎಲ್ನಲ್ಲಿ ಜೊತೆಯಾಗಿ ಆರ್ಸಿಬಿಯಲ್ಲಿ ಆಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎವಿ ಡಿ ವಿಲಿಯರ್ಸ್ ಅವರನ್ನು ತಮ್ಮ ನೆಚ್ಚಿನ ಬ್ಯಾಟ್ಸ್ಮನ್ ಎಂದಿದ್ದಾರೆ.
ಇನ್ನು ಕರ್ನಾಟಕ ಪರ ಆಡಿದ 2013- 14 ರಣಜಿ ಸೀಸನ್ ಅತ್ಯಂತ ಇಷ್ಟವಾದ ಸೀಸನ್ ಎಂದಿರುವ ಅವರು, ಎಂಎಸ್ ಧೋನಿಯಿಂದ ಟೆಸ್ಟ್ ಕ್ಯಾಪ್ ಪಡೆದದ್ದು, ತಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದಿದ್ದಾರೆ.
ಇನ್ನು ರೋಜರ್ ಫೆಡರರ್ ನೆಚ್ಚಿನ ಟೆನಿಸ್ ಪ್ಲೇಯರ್, 2016 ಐಪಿಎಲ್ ಸೀಸನ್ ಬೆಸ್ಟ್ ಐಪಿಎಲ್ ಸೀಸನ್ ಹಾಗೂ ತಮ್ಮ ಬ್ಯಾಟಿಂಗ್ ಟೆಕ್ನಿಕ್ ಕಲಿಯಲು ಸಚಿನ್ ಹಾಗೂ ದ್ರಾವಿಡ್ ಅವರ ಬ್ಯಾಟಿಂಗ್ ನೋಡುತ್ತಿದ್ದೆ ಎಂದು ಅಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಕೆಎಲ್ ಉತ್ತರಿಸಿದ್ದಾರೆ.
ಇತ್ತೇಚಿಗೆ ರಾಹುಲ್ ಬಡಮಕ್ಕಳಿಗೆ ಸಹಾಯ ಮಾಡುತ್ತಿರುವ ಅವೇರ್ ಫೌಂಡೇಷನ್ಗೆ ದೇಣಿಗೆ ಸಂಗ್ರಹಿಸಲು ತಾವು ವಿಶ್ವಕಪ್ನಲ್ಲಿ ಬಳಸಿದ್ದ ಜೆರ್ಸಿ, ಬ್ಯಾಟ್, ಹೆಲ್ಮೆಟ್ ಹಾಗೂ ಗ್ಲೌಸ್ಗಳನ್ನು ಹರಾಜಿಗಿಟ್ಟಿದ್ದರು. ಎಲ್ಲರಿಂದ ಸುಮಾರು 8 ಲಕ್ಷ ಹಣ ಸಂಗ್ರಹವಾಗಿದ್ದು, ಇದರಿಂದ ಬಂದಂತಹ ಹಣವನ್ನು ಅವೇರ್ ಫೌಂಡೇಶನ್ಗೆ ನೀಡಿದ್ದರು.