ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನೂತನ ಟಿ-20 ಶ್ರೇಯಾಂಕ ಪಟ್ಟಿ ರಿಲೀಸ್ ಮಾಡಿದ್ದು, ಕನ್ನಡಿಗ ಕೆ.ಎಲ್ ರಾಹುಲ್ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಪಾಕಿಸ್ತಾನ - ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಟಿ-20 ಪಂದ್ಯಗಳ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ಐಸಿಸಿ ನೂತನ ಪಟ್ಟಿ ರಿಲೀಸ್ ಮಾಡಿದ್ದು, ಇಂಗ್ಲೆಂಡ್ ತಂಡದ ಡೇವಿಡ್ ಮಲನ್ 915 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 816 ಅಂಕ ಹೊಂದಿರುವ ಕೆ.ಎಲ್ ರಾಹುಲ್ 2ನೇ ಸ್ಥಾನ,697 ಅಂಕದೊಂದಿಗೆ ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ನಿಗದಿತ ಓವರ್ಗಳ ಕ್ಯಾಪ್ಟನ್ ಆರೊನ್ ಫಿಂಚ್ 808 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ 4ನೇ ಸ್ಥಾನದಲ್ಲಿದ್ದಾರೆ.
ಓದಿ: 286ರನ್ಗಳಿಗೆ ಟೀಂ ಇಂಡಿಯಾ ಆಲೌಟ್: ಇಂಗ್ಲೆಂಡ್ ಗೆಲುವಿಗೆ 482ರನ್ ಟಾರ್ಗೆಟ್!
ಪಾಕಿಸ್ತಾನ - ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಟಿ -20 ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಪಾಕ್ ತಂಡ 2-1 ಅಂತರದೊಂದಿಗೆ ಸರಣಿ ಕೈವಶ ಮಾಡಿಕೊಂಡಿದೆ. ತಂಡಗಳ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಾಕ್ ಒಂದು ಅಂಕ ಗಳಿಕೆ ಮಾಡಿದ್ರೆ, ಆಫ್ರಿಕಾ ತಂಡ ಒಂದು ಅಂಕ ಕಳೆದುಕೊಂಡಿದೆ. ಇಂಗ್ಲೆಂಡ್ 1ನೇ ಸ್ಥಾನ, ಆಸ್ಟ್ರೇಲಿಯಾ 2ನೇ ಹಾಗೂ ಭಾರತ 3ನೇ ಸ್ಥಾನದಲ್ಲಿದ್ದು, ಪಾಕ್ 4ನೇ ಸ್ಥಾನದಲ್ಲಿ ಮುಂದುವರೆದಿದೆ.