ಕೋಲ್ಕತ್ತಾ: ತನ್ನ ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ಟಾಪ್ ಬೌಲಿಂಗ್ ತಂಡ ಎಂದೇ ಪ್ರಸಿದ್ದವಾಗಿದ್ದ ಸನ್ರೈಸರ್ಸ್ ತಂಡವನ್ನು ರಸೆಲ್ ಹಾಗೂ ಶುಬ್ಮನ್ ಗಿಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ಗಳ ಗೆಲುವು ಸಾಧಿಸಿತ್ತು. ಕೊನೆಯ 3 ಓವರ್ಗಳಲ್ಲಿ ಈ ಜೋಡಿ 54 ರನ್ಗಳ ಸೂರ ಮಾಡುವ ಮೂಲಕ ಸನ್ರೈಸರ್ಸ್ಗೆ ಶಾಖ್ ನೀಡಿದ್ದರು.
ಬೌಲಿಂಗ್ ಮಾಡುವ ವೇಳೆ ಗಾಯಗೊಂಡಿದ್ದ ನರೈನ್ ಸಂಪೂರ್ಣ ಚೇತರಿಸಿಕೊಂಡಿದ್ದು, ಇಂದು ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ನೋಡುವುದಾದರೆ ಮೊದಲ ಪಂದ್ಯದಲ್ಲಿ ಅಶ್ವಿನ್ ಮಾಡಿದ ವಿವಾದಾತ್ಮಕ ರನ್ಔಟ್ನಿಂದ ಗೆಲುವು ಸಾಧಿಸಿತ್ತು. ಆದರೆ, ಈ ವಿವಾದ ವಿಶ್ವಮಟ್ಟದಲ್ಲಿ ಚರ್ಚೆಯಾಗಿತ್ತು. ಕೆಲವರು ಅಶ್ವಿನ್ ಮಾಡಿದ್ದು ಕ್ರಿಕೆಟ್ ನಿಯಮದ ಪ್ರಕಾರ ಸರಿ ಎಂದರೆ,ಇನ್ನು ಕೆಲವರು ಮಂಕಡ್ ಕ್ರೀಡಾ ಸ್ಪೂರ್ತಿಗೆ ದಕ್ಕೆ ತಂದಿದೆ ಎಂದು ಅಶ್ವಿನ್ ವಿರುದ್ಧ ಟೀಕೆಗಳ ಸುರಿಮಳೆ ಸುರಿಸಿದ್ದರು. ಇದೀಗ ವಿವಾದ ತಣ್ಣಗಾಗಿದ್ದು ಎರಡು ಬಲಿಷ್ಠ ತಂಡಗಳು ಇಂದು ಕಣಕ್ಕಿಳಿಯಲಿದ್ದು ರನ್ಗಳ ಪ್ರವಾಹ ಹರಿದುಬರುವ ಮುನ್ಸೂಚನೆಯಿದೆ.
ರಾಹುಲ್, ಗೇಲ್, ಅಗರ್ವಾಲ್ ಜೊತೆಗೆ ಇದೀಗ ಡೇವಿಡ್ ಮಿಲ್ಲರ್ ತಂಡವನ್ನು ಸೇರಿಕೊಳ್ಳಲಿದ್ದು ಕಿಂಗ್ಸ್ಗೆ ಆನೆ ಬಲ ಬಂದಂತಾಗಿದೆ. ಇಂದಿನ ಪಂದ್ಯದಲ್ಲಿ ಮಂದೀಪ್ ಸಿಂಗ್ ಬದಲಿಗೆ ಕರುಣ್ ನಾಯರ್ ಆಡುವ ಸಾಧ್ಯತೆ ಹೆಚ್ಚಿದ್ದು, ಬ್ಯಾಟಿಂಗ್ ಬಲ ಹೆಚ್ಚಾಗಲಿದೆ.
ಬೌಲಿಂಗ್ ವಿಭಾಗಕ್ಕೂ ಕಳೆದ ಬಾರಿಯ ಆರೆಂಜ್ ಕ್ಯಾಪ್ ವಿನ್ನರ್ ಆ್ಯಂಡ್ರ್ಯೂ ಟೈ ತಂಡ ಸೇರಿಕೊಳ್ಳುತ್ತಿದ್ದು ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್
ಆರ್. ಅಶ್ವಿನ್(ನಾಯಕ), ಮಯಾಂಕ್ ಅಗರ್ವಾಲ್ ,ಕೆ.ಎಲ್ ರಾಹುಲ್, ಮಂದೀಪ್ ಸಿಂಗ್/ಕರುಣ್ ನಾಯರ್,ಮುಜೀಬ್ ಉರ್ ರೆಹಮಾನ್,ಸಾಮ್ ಕರ್ರನ್/ಆಂಡ್ರ್ಯೂ ಟೈ, ಕ್ರಿಸ್ ಗೇಲ್, ನಿಕೋಲಸ್ ಪೂರನ್/ಡೇವಿಡ್ ಮಿಲ್ಲರ್, ಸರ್ಫರಾಜ್ ಖಾನ್,ಅಂಕಿತ್ ರಜಪೂತ್,ವರುಣ್ ಚಕ್ರವರ್ತಿ
ಕೋಲ್ಕತ್ತಾ ನೈಟ್ ರೈಡರ್ಸ್
ದಿನೇಶ್ ಕಾರ್ತಿಕ್(ನಾಯಕ) ಆ್ಯಂಡ್ರ್ಯೂ ರಸೆಲ್, ಸುನೀಲ್ ನರೈನ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ಶುಬ್ಮನ್ ಗಿಲ್, ನಿತಿಶ್ ರಾಣಾ, ಪ್ರಸಿದ್ಧ್ ಕೃಷ್ಣ, ಲೂಕಿ ಫರ್ಗ್ಯುಸನ್, ಪಿಯುಷ್ ಚಾವ್ಲಾ,ಕುಲ್ದೀಪ್ ಯಾದವ್