ನವದೆಹಲಿ: ಐಪಿಎಲ್ ನಂತರ ಕ್ರಿಕೆಟ್ ಅಭಿಮಾನಿಗಳ ಕಿಚ್ಚೆಬ್ಬಿಸುವ ಟಿ-20 ಲೀಗ್ಗಳಲ್ಲಿ ಒಂದಾದ ಕೆರಿಬಿಯನ್ ಲೀಗ್ ಸೇಂಟ್ ಲೂಸಿಯಾ ತಂಡವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕ ನೆಸ್ ವಾಡಿಯಾ ಖರೀದಿಸಿದ್ದಾರೆ.
ಈಗಾಗಲೇ ಕೆರಿಬಿಯನ್ ಲೀಗ್ನ ಅತ್ಯಂತ ಯಶಸ್ವಿ ತಂಡವಾದ ಟ್ರಿಂಬ್ಯಾಂಗೋ ನೈಟ್ ರೈಡರ್ಸ್ ಫ್ರಾಂಚೈಸಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ನ ಮಾಲೀಕ ಶಾರುಖ್ ಖಾನ್ 2015ರಲ್ಲಿ ಖರೀದಿಸಿದ್ದರು. ಇದೀಗ ನೆಸ್ ವಾಡಿಯಾ ಕೂಡ ಮತ್ತೊಂದು ತಂಡವನ್ನು ಖರೀಸುವ ಮೂಲಕ ಸಿಪಿಎಲ್ನಲ್ಲೂ ತಮ್ಮ ಖದರ್ ತೋರಿಸಲು ಹೊರಟಿದ್ದಾರೆ.
"ನಾವು ಸಿಪಿಎಲ್ನ ಸೇಂಟ್ ಲೂಸಿಯಾ ಫ್ರಾಂಚೈಸಿಯನ್ನು ಖರೀದಿಸಿದ್ದೇವೆ. ಬಿಸಿಸಿಐ ಅನುಮತಿ ನೀಡಿದ ನಂತರ ಕಂಪನಿಯ ಹೆಸರು ಹಾಗೂ ತಂಡದ ರಚನೆಯ ಬಗ್ಗೆ ತಿಳಿಸುತ್ತೇವೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ನ ಸಹ ಮಾಲೀಕ ನೆಸ್ ವಾಡಿಯಾ ಪಿಟಿಐಗೆ ಮಾಹಿತಿ ನೀಡಿದ್ದಾರೆ.
-
Photos from today! Present at the press conference were Mohit Burman, Chairman of the new ownership team, Pete Russell, COO of CPL, Hon Prime Minister of St Lucia Allen Chastanet and Dominic Fedee, St Lucian Minister of Tourism, Information and Broadcasting. #CPL20 #ZouksOnFire pic.twitter.com/BpIwnbnI8z
— St Lucia Zouks (@Zouksonfire) February 17, 2020 " class="align-text-top noRightClick twitterSection" data="
">Photos from today! Present at the press conference were Mohit Burman, Chairman of the new ownership team, Pete Russell, COO of CPL, Hon Prime Minister of St Lucia Allen Chastanet and Dominic Fedee, St Lucian Minister of Tourism, Information and Broadcasting. #CPL20 #ZouksOnFire pic.twitter.com/BpIwnbnI8z
— St Lucia Zouks (@Zouksonfire) February 17, 2020Photos from today! Present at the press conference were Mohit Burman, Chairman of the new ownership team, Pete Russell, COO of CPL, Hon Prime Minister of St Lucia Allen Chastanet and Dominic Fedee, St Lucian Minister of Tourism, Information and Broadcasting. #CPL20 #ZouksOnFire pic.twitter.com/BpIwnbnI8z
— St Lucia Zouks (@Zouksonfire) February 17, 2020
ಕೆರಿಬಿಯನ್ನ ಮೋಹಿತ್ ಬರ್ಮನ್( ಸಹ ಮಾಲೀಕ) ಸದ್ಯ ತಂಡದ ಮಾಲೀಕತ್ವದ ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಫ್ರಾಂಚೈಸಿಯನ್ನು ಖರೀದೀಸಲು ನೆರವು ನೀಡಿದ ಸೇಂಟ್ ಲೂಸಿಯಾದ ಪ್ರಧಾನಿ ಅಲನ್ ಚಾಸ್ಟನೆಟ್ ಅವರಿಗೆ ಮೊದಲು ಧನ್ಯವಾದ ಕೋರಲು ಬಯಸುತ್ತೇನೆ. ನಾವು ಈ ಪ್ರಕ್ರಿಯೆಗಾಗಿ ಹೆಚ್ಚು ಕಡಿಮೆ 9 ತಿಂಗಳು ತೆಗೆದುಕೊಂಡಿದ್ದೆವು ಎಂದು ಅವರು ತಿಳಿಸಿದ್ದಾರೆ.
ಸೇಂಟ್ ಲೂಸಿಯಾ ತಂಡವನ್ನು ಕಳೆದ ಆರು ಆವೃತ್ತಿಗಳಲ್ಲೂ ವೆಸ್ಟ್ ಇಂಡೀಸ್ ಮಾಜಿ ನಾಯಕ ಡೆರಾನ್ ಸಾಮಿ ಮುನ್ನಡೆಸಿದ್ದಾರೆ. ಶಾರುಖ್ ಖಾನ್ ಮಾಲಿಕತ್ವದ ಟಿಕೆಆರ್ 3 ಬಾರಿ ಟೈಟಲ್ ಗೆದ್ದು ಸಿಪಿಎಲ್ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.