ETV Bharat / sports

ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕೊಟ್ಟ ಶ್ರೀಲಂಕಾದ ಬೌಲರ್!

ಕಸುನ್​ ರಜಿತಾ ಆಸ್ಟ್ರೇಲಿಯಾ ವಿರುದ್ಧ 4 ಓವರ್​ಗಳಲ್ಲಿ75 ರನ್​ ಬಿಟ್ಟುಕೊಡುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಬಿಟ್ಟುಕೊಟ್ಟ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

author img

By

Published : Oct 27, 2019, 12:43 PM IST

Updated : Oct 27, 2019, 12:50 PM IST

Sri lanka against Australia

ಅಡಿಲೇಡ್ (ಆಸ್ಟ್ರೇಲಿಯಾ)​: ಶ್ರೀಲಂಕಾದ ವೇಗದ ಬೌಲರ್​ ಕಸುನ್​ ರಜಿತಾ ಆಸ್ಟ್ರೇಲಿಯಾ ವಿರುದ್ಧ 4 ಓವರ್​ಗಳಲ್ಲಿ75 ರನ್​ ಬಿಟ್ಟುಕೊಡುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಬಿಟ್ಟುಕೊಟ್ಟ ಬೌಲರ್​ ಎಂಬ ಕಳಪೆ ದಾಖಲೆಗೆ ಪಾತ್ರರಾಗಿದ್ದಾರೆ.

ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್​ ಅಬ್ಬರಕ್ಕೆ ಸಿಲುಕಿದ ಶ್ರೀಲಂಕಾ 20 ಓವರ್​ಗಳಲ್ಲಿ 232 ರನ್​ ಬಿಟ್ಟುಕೊಟ್ಟಿತು. ಆರಂಭಿಕರಾದ ವಾರ್ನರ್​ 100 , ಫಿಂಚ್​ 64 ಹಾಗೂ ಮ್ಯಾಕ್ಸ್​ವೆಲ್​ 62 ರನ್​ಗಳಿಸಿ ಲಂಕಾ ಬೌಲಿಂಗ್​ ಪುಡಿಗಟ್ಟಿದ್ದರು.

ಇದರಲ್ಲಿ ಕೇವಲ ರಜಿತಾ 4 ಓವರ್​ಗಳಲ್ಲಿ 75 ರನ್​ ಚಚ್ಚಿಸಿಕೊಂಡಿದ್ದಾರೆ. ಈ ಮೂಲಕ ಅವರು ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಬಿಟ್ಟುಕೊಟ್ಟರು. ಈ ಮೊದಲು ಟರ್ಕಿಯ ತುನಹನ್​ ತರುಣ್​ 70 ರನ್​ ಬಿಟ್ಟುಕೊಟ್ಟು ಈ ಬೇಡದ ದಾಖಲೆಗೆ ಪಾತ್ರರಾಗಿದ್ದರು.

ಇವರಿಬ್ಬರನ್ನು ಬಿಟ್ಟರೆ 4 ಓವರ್​ಗಲ್ಲಿ ಅತಿ ಹೆಚ್ಚು ರನ್​ ಬಿಟ್ಟುಕೊಟ್ಟ ಬೌಲರ್​ಗಳ ಸಾಲಿನಲ್ಲಿ ಐರ್ಲೆಂಡ್​ನ ಬರ್ರಿ ಮೆಕಾರ್ಟಿ (69), ದಕ್ಷಿಣ ಆಫ್ರಿಕಾದ ಕೈಲ್​ ಅಬಾಟ್​ (68) ಹಾಗೂ ಇಂಗ್ಲೆಂಡ್​ ಜೇಮ್ಸ್​ ಆ್ಯಂಡರ್ಸನ್​ (64) ಇದ್ದಾರೆ.

Intro:Body:Conclusion:
Last Updated : Oct 27, 2019, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.