ಬೆಂಗಳೂರು: ಕೇರಳ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೇರಳ ತಂಡ ಆರಂಭಿಕ ಆಘಾತದ ನಡುವೆ ಕೂಡ ವತ್ಸುಲ್(95) ಕ್ಯಾಪ್ಟನ್ ಸಚಿನ್ ಬೇಬಿ(54) ಹಾಗೂ ಮೊಹಮ್ಮದ್ ಅಜರುದ್ದೀನ್ ಅಜೇಯ(59)ರನ್ಗಳ ನೇರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 277ರನ್ಗಳಿಕೆ ಮಾಡಿತು.
ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ರಾಬಿನ್ ಉತ್ತಪ್ಪ(0) ಹಾಗೂ ಸಂಜು ಸ್ಯಾಮ್ಸನ್(3)ರನ್ಗಳಿಕೆ ಮಾಡಿ ನಿರಾಶೆ ಮೂಡಿಸಿದರು. ಕರ್ನಾಟಕ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮಿಥುನ್ 5 ವಿಕೆಟ್ ಪಡೆದುಕೊಂಡು ಮಿಂಚಿದ್ರೆ, ಪ್ರಸಿದ್ಧ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದುಕೊಂಡರು.
-
Karnataka Won by 9 Wicket(s) #KARvKER @paytm #VijayHazareTrophy Scorecard:https://t.co/waMaIqgvXN
— BCCI Domestic (@BCCIdomestic) February 26, 2021 " class="align-text-top noRightClick twitterSection" data="
">Karnataka Won by 9 Wicket(s) #KARvKER @paytm #VijayHazareTrophy Scorecard:https://t.co/waMaIqgvXN
— BCCI Domestic (@BCCIdomestic) February 26, 2021Karnataka Won by 9 Wicket(s) #KARvKER @paytm #VijayHazareTrophy Scorecard:https://t.co/waMaIqgvXN
— BCCI Domestic (@BCCIdomestic) February 26, 2021
ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ 'ದಾವಣಗೆರೆ ಎಕ್ಸ್ಪ್ರೆಸ್' ವಿನಯ್ ಕುಮಾರ್!
278ರನ್ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಸಮರ್ಥ್(62), ದೇವದತ್ ಪಡಿಕ್ಕಲ್ ಅಜೇಯ(126) ಹಾಗೂ ಸಿದ್ಧಾರ್ಥ್ ಅಜೇಯ(86)ರನ್ಗಳಿಕೆ ಮಾಡಿ ಕೇವಲ 45.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 279ರನ್ಗಳಿಕೆ ಮಾಡಿದ್ದು, ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದೆ.
ಈ ಹಿಂದಿನ ಪಂದ್ಯದಲ್ಲೂ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅಬ್ಬರದ ಶತಕ ಸಿಡಿಸಿ ಒಡಿಶಾ ವಿರುದ್ಧದ ಪಂದ್ಯದಲ್ಲಿ 101ರನ್ಗಳ ಜಯ ಸಾಧಿಸಿತ್ತು. ಇದೀಗ ಕೇರಳ ವಿರುದ್ಧ 9 ವಿಕೆಟ್ಗಳ ಗೆಲುವು ದಾಖಲು ಮಾಡಿದೆ.