ಬೆಂಗಳೂರು: ಬರೋಡದ ವಿರುದ್ಧ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿರುವ ಕರ್ನಾಟಕ ತಂಡ ಗೆಲುವಿನತ್ತ ಹೆಜ್ಜೆ ಇಟ್ಟಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಬರೋಡ ತಂಡವನ್ನು ಕೇವಲ 85 ರನ್ಗಳಿಗೆ ಆಲೌಟ್ ಮಾಡಿದ್ದ ಕರ್ನಾಟಕ ತಂಡ ಅದಕ್ಕುತ್ತರವಾಗಿ 233 ರನ್ಗಳಿಸಿ 148 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು.
ಉತ್ತಮ ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡವೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆದರೂ ಕರುಣ್ ನಾಯರ್ 47 ರನ್, ಅಭಿಮನ್ಯು ಮಿಥುನ್ 40 ರನ್, ಶ್ರೀನಿವಾಸ ಶರತ್ 34 ರನ್ ಹಾಗೂ ಕೆ ಗೌತಮ್ 24 ರನ್ಗಳ ಸಹಾಸದಿಂದ ಕಷ್ಟುಪಟ್ಟು ಇನ್ನಿಂಗ್ಸ್ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಬರೋಡದ ಪರ ಸೊಯೆಬ್ ಸೊಪಾರಿಯಾ 5 ವಿಕೆಟ್, ಅಭಿಮನ್ಯು ಮಿಥುನ್, ಭಾರ್ಗವ್ ಭಟ್ ತಲಾ ಎರಡು ವಿಕೆಟ್ ಕೃನಾಲ್ ಪಾಂಡ್ಯ ಒಂದುವ ವಿಕೆಟ್ ಪಡೆದರು.
148ರನ್ಗಳ ಹಿನ್ನೆಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬರೋಡ 5 ವಿಕೆಟ್ ಕಳೆದುಕೊಂಡು 208 ರನ್ಗಳಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಅಹ್ಮದ್ನೂರ್ ಪಠಾಣ್ 90 ರನ್ ಹಾಗೂ ದೀಪಕ್ ಹೂಡ 50 ರನ್ಗಳಿಸಿ ಔಟಾದರು. ಅಭಿಮನ್ಯು ರಜಪೂತ್ 31 ರನ್ ಹಾಗೂ ಪರ್ತ್ ಕೊಹ್ಲಿ ಔಟಾಗದೆ 4 ರನ್ಗಳಿಸಿ 3ನೇ ದಿನಕ್ಕೆ ತಮ್ಮ ಆಟವನ್ನು ಕಾಯ್ದಿರಿಸಿಕೊಂಡಿದ್ದಾರೆ.
ಇನ್ನು 2 ದಿನದ ಆಟ ಬಾಕಿ ಉಳಿದಿದ್ದು ಈಗಾಗಲೆ ಬರೋಡ 60 ರನ್ಗಳ ಮುನ್ನಡೆ ಸಾಧಿಸಿದೆ. ಕರ್ನಾಟಕ ತಂಡ ಬರೋಡದ 5 ವಿಕೆಟ್ ಬೇಗನೆ ಪಡೆದು 3ನೇ ದಿನವೇ ಪಂದ್ಯವನ್ನು ಮುಗಿಸುವ ಆಲೋಚನೆಯಲ್ಲಿದೆ.