ಮುಂಬೈ: ರಣಜಿ ಟ್ರೋಫಿಯ ತನ್ನ 4ನೇ ಪಂದ್ಯದಲ್ಲಿ ಕರ್ನಾಟಕ ತಂಡ 41 ಬಾರಿ ರಣಜಿ ಚಾಂಪಿಯನ್ ಮುಂಬೈ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ನಿನ್ನೆ 109 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಇಂದು ಬ್ಯಾಟಿಂಗ್ ಮುಂದುವರಿಸಿದ ಮುಂಬೈ ನಿನ್ನೆಯ ಮೊತ್ತಕ್ಕೆ 40 ರನ್ ಸೇರಿಸಿ ಆಲೌಟ್ ಆಗುವ ಮೂಲಕ ಕೇವಲ 126 ರನ್ಗಳ ಟಾರ್ಗೆಟ್ ನೀಡಿತು. 53 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಸರ್ಫರಾಜ್ ಖಾನ್ 71 ರನ್ ಗಳಿಸಿ ನಾಟೌಟ್ ಆದರು.
ಕರ್ನಾಟಕ ಪರ ಪ್ರತೀಕ್ ಜೈನ್(4) ಇಂದು ಬ್ಯಾಟಿಂಗ್ ಆಗಮಿಸಿದ ಮುಂಬೈನ ಎಲ್ಲಾ ಬ್ಯಾಟ್ಸ್ಮನ್ಗಳ ವಿಕೆಟ್ ಕಬಳಿಸಿ ಮಿಂಚಿದರು. ಪಂದ್ಯದಲ್ಲಿ ಮಿಥುನ್ 3 ಹಾಗೂ ಕೌಶಿಕ್ 2 ವಿಕೆಟ್ ಪಡೆದರು.
-
Here's the winning moments of Karnataka.
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) January 5, 2020 " class="align-text-top noRightClick twitterSection" data="
"Powerful people come from powerful places" can be overheard. 🙂
(via @subjudiced) pic.twitter.com/qslAsxvzPK
">Here's the winning moments of Karnataka.
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) January 5, 2020
"Powerful people come from powerful places" can be overheard. 🙂
(via @subjudiced) pic.twitter.com/qslAsxvzPKHere's the winning moments of Karnataka.
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) January 5, 2020
"Powerful people come from powerful places" can be overheard. 🙂
(via @subjudiced) pic.twitter.com/qslAsxvzPK
126 ರನ್ಗಳ ಟಾರ್ಗೆಟ್ ಬೆನ್ನತ್ತಿದ ಕರ್ನಾಟಕ ತಂಡ ದೇವದತ್ ಪಡಿಕ್ಕಲ್ ಅವರ ಅಬ್ಬರದ ಅರ್ಧಶತಕ ನೆರವಿನಿಂದ 5 ವಿಕೆಟ್ಗಳ ಗೆಲುವು ಸಾಧಿಸಿತು. 46 ಎಸೆತಗಳನ್ನೆದುರಿಸಿದ ಪಡಿಕ್ಕಲ್ 2 ಸಿಕ್ಸರ್ ಹಾಗೂ 5 ಬೌಂಡರಿ ನೆರವಿನಿಂದ 50 ರನ್ಗಳಿಸಿದರು. ಸಮರ್ಥ್ 34, ರೋಹನ್ ಕದಮ್ 21, ಕರುಣ್ ನಾಯರ್ 10 ರನ್ ಗಳಿಸಿ ಔಟಾದರೆ, ಗೋಪಾಲ್(5), ಶರತ್(4) ಗೆಲುವಿನ ಗಡಿ ದಾಟಿಸಿದರು.
ಅಲ್ಪಮೊತ್ತದ ಟಾರ್ಗೆಟ್ ನೀಡಿದರೂ ಮುಂಬೈ ಬೌಲರ್ಗಳು ಕರ್ನಾಟಕದ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಶಶಾಂಕ್ 4 ವಿಕೆಟ್, ಮುಲಾನಿ 1 ವಿಕೆಟ್ ಪಡೆದರು.