ಮುಂಬೈ: 2021ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದ್ದು, 8 ತಂಡಗಳ ಬದಲಾಗಿ 9 ತಂಡಗಳು ಅರ್ಹತೆಗಳಿಸಿವೆ.
ಕರ್ನಾಟಕ, ಕೇರಳ, ಗುಜರಾತ್, ಮುಂಬೈ, ಸೌರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಡೆಲ್ಲಿ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿವೆ.
ಕರ್ನಾಟಕ, ಗುಜರಾತ್, ಆಂಧ್ರ ಪ್ರದೇಶ, ಸೌರಾಷ್ಟ್ರ, ಮುಂಬೈ ತಂಡಗಳು 5 ಗುಂಪುಗಳಲ್ಲಿ ಅಗ್ರಸ್ಥಾನ ಪಡೆದು ನಾಕೌಟ್ಗೆ ಎಂಟ್ರಿ ಕೊಟ್ಟಿವೆ. ಇನ್ನು ಲೀಗ್ನಲ್ಲಿ ತಲಾ 16 ಅಂಕ ಪಡೆದು ರನ್ರೇಟ್ ಆಧಾರದ ಮೇಲೆ ಉತ್ತರ ಪ್ರದೇಶ, ಕೇರಳ ಮತ್ತು ಡೆಲ್ಲಿ ತಂಡಗಳು ಅರ್ಹತೆ ಪಡೆದರೆ, ಉತ್ತರಾಖಂಡ ತಂಡ ಪ್ಲೇಟ್ ಗುಂಪಿನಲ್ಲಿ 5ಕ್ಕೆ 5 ಜಯ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಕ್ವಾರ್ಟರ್ ಫೈನಲ್ ಪಂದ್ಯದ ವೇಳಾಪಟ್ಟಿ ಹೀಗಿದೆ..
ಮಾರ್ಚ್ 7: ಡೆಲ್ಲಿ vs ಉತ್ತರಖಂಡ (ಫ್ರೀ ಕ್ವಾರ್ಟರ್ ಫೈನಲ್)
ಮಾರ್ಚ್ 8: ಕರ್ನಾಟಕ vs ಕೇರಳ, ಗುಜರಾತ್ vs ಆಂಧ್ರ ಪ್ರದೇಶ
ಮಾರ್ಚ್ 9: ಮುಂಬೈ vs ಸೌರಾಷ್ಟ್ರ, ಉತ್ತರ ಪ್ರದೇಶ vs (ಫ್ರೀ ಕ್ವಾರ್ಟರ್ನಲ್ಲಿ ಗೆದ್ದ ತಂಡ)
ಮಾರ್ಚ್ 11: ಸೆಮಿಫೈನಲ್ಸ್ ಪಂದ್ಯಗಳು
ಮಾರ್ಚ್ 14 : ಫೈನಲ್ ಪಂದ್ಯ
ಇದನ್ನೂ ಓದಿ: ಪೂಜಾರ ಬಗ್ಗೆ ಟೀಕೆ ಸರಿಯಲ್ಲ, ಆತ ವಿಶ್ವದರ್ಜೆಯ ಬ್ಯಾಟ್ಸ್ಮನ್: ವಿರಾಟ್ ಕೊಹ್ಲಿ