ETV Bharat / sports

ಕಪಿಲ್​ ಹೊಸ ಲುಕ್​​ಗೆ ಈ ಇಬ್ಬರು ಕ್ರಿಕೆಟರ್ಸ್​ ಕಾರಣ... ಧೋನಿಯೂ ನನ್ನ ಹೀರೊ ಎಂದ ಲೆಜೆಂಡ್​ - ಎಂಎಸ್​ ಧೋನಿ

ಎಂಎಸ್​ ಧೋನಿ 2007 ರ ಟಿ20 ವಿಶ್ವಕಪ್​ ಗೆದ್ದ ಬಳಿಕ ಹೆಚ್ಚು ಪ್ರಸಿದ್ದಿ ಪಡೆದಿದ್ದ ಅವರ ಉದ್ದ ಕೂದಲಿನ ಶೈಲಿಗೆ ಕತ್ತರಿ ಹಾಕಿಸಿದ್ದರು. ನಂತರ 2011ರ ವಿಶ್ವಕಪ್ ಬಳಿಕ ಸೆಮಿ ಬ್ಲೇಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು.

ಕಪಿಲ್​ ದೇವ್​
ಕಪಿಲ್​ ದೇವ್​
author img

By

Published : Apr 26, 2020, 3:30 PM IST

ನವದೆಹಲಿ: ವಾರದ ಹಿಂದೆ ಭಾರತ ತಂಡದ ಮಾಜಿ ನಾಯಕ ಕಪಿಲ್​ ದೇವ್​ ಕೊರೊನಾ ಲಾಕ್​ಡೌನ್​ ವೇಳೆ ಕೇಶ ಮುಂಡನ ಮಾಡಿಕೊಂಡು ಗಡ್ಡಬಿಟ್ಟುಕೊಂಡು ಹೊಸ ಲುಕ್​ನಲ್ಲಿ ಕಂಗೊಳಿಸಿದ್ದರು. ಇವರನ್ನು ಅಭಿಮಾನಿಗಳು ವಿಂಡೀಸ್​ ಲೆಜೆಂಡ್​ ವಿವಿ ರಿಚರ್ಡ್ಸ್​ಗೆ ಹೋಲಿಕೆ ಮಾಡಿದ್ದರು ಇದೀಗ ಅವರ ಹೊಸ ಲುಕ್​ಗೆ ಪ್ರೇರಣೆಯಾದ ಇಬ್ಬರು ಲೆಜೆಂಡ್​ಗಳ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

ನಾನು ಸರ್​ ವಿವಿಯನ್​ ರಿಚರ್ಡ್ಸ್​ ಅವರ ಇನ್ಸ್ಟಾಗ್ರಾಮ್​ಅನ್ನು ನೋಡಿದ್ದೇನೆ. ಅವರು ನನ್ನ ಹೀರೋ, ಹೀಗಾಗಿ ನಾನು ಅವರ ಸ್ಟೈಲ್​ ಏಕೆ ಅನುಕರಣೆ ಮಾಡುಬಾರದೆಂದು ಆಲೋಚಿಸಿದೆ. ನಂತರ ನನ್ನ ಹೀರೋ ಸ್ಟೈಲ್​ ಫಾಲೋ ಮಾಡಿದೆ. ಇನ್ನು ಧೋನಿಯನ್ನು ಸಹಾ ನಾನು ನೋಡಿದ್ದೇನೆ, ಅವರೂ ಕೂಡ ನನ್ನ ಹೀರೋ ಮತ್ತು ಅವರು ವಿಶ್ವಕಪ್​ ಗೆದ್ದಬಳಿಕ ಇದೇ ರೀತಿ ಸ್ಟೈಲ್​ನಲ್ಲಿದ್ದರು. ಹೀಗಾಗಿ ನಾನು ಈ ಬಾರಿ ಆ ಚಾನ್ಸ್​ ತೆಗೆದುಕೊಂಡು, ಈ ರೀತಿ ಮಾಡಿಸಿಕೊಂಡಿದ್ದೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್​ ಟ್ವೀಟ್​ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಿಚರ್ಡ್ಸ್​, ನೀನು ಸರಿಯಾದ ಸ್ಪೂರ್ತಿ ಪಡೆದಿದ್ದೀಯ ಗೆಳೆಯಾ ಎಂದು ಟ್ವೀಟ್​ ಮಾಡಿದ್ದಾರೆ.

ಎಂಎಸ್​ ಧೋನಿ 2007 ರ ಟಿ20 ವಿಶ್ವಕಪ್​ ಗೆದ್ದ ಬಳಿಕ ಹೆಚ್ಚು ಪ್ರಸಿದ್ದಿ ಪಡೆದಿದ್ದ ಅವರ ಉದ್ದ ಕೂದಲಿನ ಸ್ಟೈಲ್​​ಗೆ ಕತ್ತರಿ ಹಾಕಿಸಿದ್ದರು. ನಂತರ 2011ರ ವಿಶ್ವಕಪ್ ಬಳಿಕ ಸೆಮಿ ಬ್ಲೇಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಕಪಿಲ್​ ದೇವ್​ರ ಬ್ಲೇಡ್​ ಲುಕ್​ ಸ್ಟೈಲ್​ ರಿಚರ್ಡ್ಸ್​ ಸ್ಟೈಲ್​ಗೆ ತುಂಬಾ ಹತ್ತಿರವಾಗಿದೆ. ರಿಚರ್ಡ್ಸ್​ ತಮ್ಮ ನಿವೃತ್ತಿ ಬಳಿಕ ಇದೇ ಸ್ಟೈಲ್​ಅನ್ನು ತಮ್ಮ ಜೀವನದ ಭಾಗವಾಗಿಸಿಕೊಂಡು ಬರುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.