ETV Bharat / sports

ಡೆಲ್ಲಿ ಪರ 8 ವರ್ಷಗಳ ಹಿಂದಿನ ದಾಖಲೆ ಬ್ರೇಕ್​ ಮಾಡಿದ ಕಗಿಸೋ ರಬಾಡ

author img

By

Published : Nov 8, 2020, 11:06 PM IST

ರಬಾಡ 2020ರ ಐಪಿಎಲ್​ನಲ್ಲಿ 16 ಪಂದ್ಯಗಳನ್ನಾಡಿದ್ದು 26 ವಿಕೆಟ್​ ಪಡೆದಿದ್ದಾರೆ. ಹಿಂದಿನ ದಾಖಲೆ ಮಾರ್ನ್​ ಮಾರ್ಕೆಲ್​ ಅವರ ಹೆಸರಿನಲ್ಲಿತ್ತು. ಮಾರ್ಕೆಲ್​ 2012ರಲ್ಲಿ ಡೆಲ್ಲಿ ಡೇರ್​ ಡೇವಿಲ್ಸ್​ ಪರ 25 ವಿಕೆಟ್​ ಪಡೆದಿದ್ದದ್ದು ಡೆಲ್ಲಿ ಬೌಲರ್​ನ ಉತ್ತಮ ಸಾಧನೆಯಾಗಿತ್ತು.

ಕಗಿಸೋ ರಬಾಡ
ಕಗಿಸೋ ರಬಾಡ

ಅಬುಧಾಬಿ: ಸನ್​ರೈಸರ್ಸ್​ ವಿರುದ್ಧದ ಕ್ವಾಲಿಫೈಯರ್​ ಪಂದ್ಯದಲ್ಲಿ ಡೇವಿಡ್​ ವಾರ್ನರ್​ರನ್ನು ಬೌಲ್ಡ್​ ಮಾಡುವ ಮೂಲಕ ಕಗಿಸೋ ರಬಾಡ ಡೆಲ್ಲಿ ಕ್ಯಾಪಿಟಲ್ಸ್​ ಪರ ಮಹತ್ವದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

ನಿರ್ಣಾಯಕ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ರಬಾಡ ತಾವೆಸೆದ ಮೊದಲ ಓವರ್​ನಲ್ಲಿ ಸ್ಫೋಟಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್ ವಿಕೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್​ ಪರ ಐಪಿಎಲ್ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ರಬಾಡ 2020ರ ಐಪಿಎಲ್​ನಲ್ಲಿ 16 ಪಂದ್ಯಗಳನ್ನಾಡಿದ್ದು 26 ವಿಕೆಟ್​ ಪಡೆದಿದ್ದಾರೆ.

ಹಿಂದಿನ ದಾಖಲೆ ಮಾರ್ನ್​ ಮಾರ್ಕೆಲ್​ ಅವರ ಹೆಸರಿನಲ್ಲಿತ್ತು. ಮಾರ್ಕೆಲ್​ 2012ರಲ್ಲಿ ಡೆಲ್ಲಿ ಡೇರ್​ ಡೇವಿಲ್ಸ್​ ಪರ 25 ವಿಕೆಟ್​ ಪಡೆದಿದ್ದದ್ದು ಡೆಲ್ಲಿ ಬೌಲರ್​ನ ಉತ್ತಮ ಸಾಧನೆಯಾಗಿತ್ತು. 3ನೇ ಸ್ಥಾನದಲ್ಲೂ ರಬಾಡ ಇದ್ದಾರೆ. 2019ರಲ್ಲಿ ರಬಾಡ 25 ವಿಕೆಟ್​ ಪಡೆದಿದ್ದರು. 4ನೇ ಸ್ಥಾನದಲ್ಲಿ ಎನ್ರಿಚ್​ ನೋಕಿಯಾ ಇದ್ದು, ಅವರು 20 ವಿಕೆಟ್​ ಪಡೆದಿದ್ದಾರೆ. ವಿಶೇಷವೆಂದರೆ ಈ ಎಲ್ಲಾ ಬೌಲರ್​ಗಳು ದಕ್ಷಿಣ ಆಫ್ರಿಕಾ ತಂಡದವರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.