ಕರಾಚಿ: ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ವೇಗಿ ಕಗಿಸೋ ರಬಾಡ ವೃತ್ತಿ ಜೀವನದಲ್ಲಿ 200 ವಿಕೆಟ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ 8ನೇ ಹಾಗೂ ವೇಗವಾಗಿ 200 ವಿಕೆಟ್ ಪಡೆದ 3ನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಪಾಕಿಸ್ತಾನದ ಹಸನ್ ಅಲಿ ವಿಕೆಟ್ ಪಡೆಯುವ ಮೂಲಕ ರಬಾಡ ಈ ವಿಶೇಷ ಮೈಲುಗಲ್ಲನ್ನು ತಲುಪಿದರು.
-
2️⃣0️⃣0️⃣ Test wickets for Kagiso Rabada
— ICC (@ICC) January 28, 2021 " class="align-text-top noRightClick twitterSection" data="
He is the third-fastest South African to reach the milestone, achieving it in his 44th Test 👏#PAKvSA pic.twitter.com/eXaZJTZCUb
">2️⃣0️⃣0️⃣ Test wickets for Kagiso Rabada
— ICC (@ICC) January 28, 2021
He is the third-fastest South African to reach the milestone, achieving it in his 44th Test 👏#PAKvSA pic.twitter.com/eXaZJTZCUb2️⃣0️⃣0️⃣ Test wickets for Kagiso Rabada
— ICC (@ICC) January 28, 2021
He is the third-fastest South African to reach the milestone, achieving it in his 44th Test 👏#PAKvSA pic.twitter.com/eXaZJTZCUb
25 ವರ್ಷದ ವೇಗಿ ರಬಾಡ ತಮ್ಮ 44ನೇ(78ನೇ ಟೆಸ್ಟ್ ಇನ್ನಿಂಗ್ಸ್) ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೊದಲು ಸ್ಟೈನ್ 39 ಪಂದ್ಯಗಳಲ್ಲಿ, ಡೊನಾಲ್ಡ್ 42 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಜೊತೆಗೆ ದಕ್ಷಿಣ ಆಫ್ರಿಕಾ ಪರ 200ಕ್ಕೂ ಹೆಚ್ಚು ವಿಕೆಟ್ ಪಡೆದ 8ನೇ ಬೌಲರ್ ಎನಿಸಿಕೊಂಡಿದ್ದಾರೆ.
ಮಾಜಿ ವೇಗಿ ಡೇಲ್ ಸ್ಟೈನ್ ಹರಿಣಗಳ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು 93 ಪಂದ್ಯಗಳಿಂದ 439 ವಿಕೆಟ್ ಪಡೆದಿದ್ದಾರೆ. ಶಾನ್ ಪೊಲಾಕ್(421), ಮಖಾಯ ಎಂಟಿನಿ(390), ಆಲನ್ ಡೊನಾಲ್ಡ್(330), ಜಾಕ್ ಕಾಲೀಸ್(291), ವೆರ್ನಾನ್ ಫಿಲಾಂಡರ್(224) ಈ ಮೊದಲು 200+ ವಿಕೆಟ್ ಪಡೆದಿದ್ದಾರೆ. ರಬಡಾ 75 ಏಕದಿನ ಪಂದ್ಯಗಳಿಂದ 117, 26 ಟಿ-20 ಪಂದ್ಯಗಳಿಂದ 31 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ vs ಭಾರತ ತಂಡ ಭಾರತ ಎದುರಿಸುವ ಮುನ್ನ ಇಂಗ್ಲೆಂಡ್ ತಂಡ ಬಗೆಹರಿಸಿಕೊಳ್ಳುವುದೇ ಟಾಪ್ 3 ಸಮಸ್ಯೆ?