ETV Bharat / sports

ಈ ಬಾರಿಯ ಐಪಿಎಲ್​​ನಲ್ಲಿ ಆಸ್ಟ್ರೇಲಿಯಾ​ ಆಟಗಾರರ ಪಾರಮ್ಯ... ಇದಕ್ಕೆ ಕಾರಣ ಏನು ಗೊತ್ತಾ!?

author img

By

Published : Dec 25, 2019, 4:32 PM IST

ಆಸ್ಟ್ರೇಲಿಯಾದ ಆಟಗಾರರು ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಕೋಟಿಗಟ್ಟಲೆ ಹಣ ಗಿಟ್ಟಿಸಿಕೊಂಡಿದ್ದಾರೆ. ಇದರ ಜೊತೆಗೆ ಐಪಿಎಲ್​ನಲ್ಲಿ ಭಾಗವಹಿಸುವುದರಿಂದ​ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್​ಗೂ ಸಹಾಕಾರಿಯಾಗಲಿದೆ ಎಂದು ಸ್ವತಃ ಆಸ್ಟ್ರೇಲಿಯಾ ಕೋಚ್​ ಜಸ್ಟಿನ್ ಲ್ಯಾಂಗರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IPL stint will help Australia players in WT20

ಮೆಲ್ಬೋರ್ನ್​: ವಿಶ್ವ ಕ್ರಿಕೆಟ್​ನಲ್ಲಿ ಅತ್ಯಂತ ಪ್ರಸಿದ್ಧ ಟಿ-20 ಲೀಗ್​ ಆದ ಐಪಿಎಲ್​ನಲ್ಲಿ ಆಡುವುದಕ್ಕೆ ಹಲವು ದೇಶಿ-ವಿದೇಶಿ ಆಟಗಾರರು ಬಯಸುತ್ತಾರೆ. ಇಲ್ಲಿ ಪಾಲ್ಗೊಂಡ ಹಲವಾರು ಆಟಗಾರರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಆಟಗಾರರು ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಕೋಟಿಗಟ್ಟಲೆ ಹಣ ಗಿಟ್ಟಿಸಿಕೊಂಡಿದ್ದಾರೆ. ಇದರ ಜೊತೆಗೆ ಐಪಿಎಲ್​ನಲ್ಲಿ ಭಾಗವಹಿಸುವುದರಿಂದ​ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್​ಗೂ ಸಹಾಕಾರಿಯಾಗಲಿದೆ ಎಂದು ಸ್ವತಃ ಆಸ್ಟ್ರೇಲಿಯಾ ಕೋಚ್​ ಜಸ್ಟಿನ್ ಲ್ಯಾಂಗರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್ ಬಳಿಕ​ ಮುಂಬರುವ ಟಿ-20 ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ತೋರಲು ನಮಗೆ ತುಂಬಾ ಅನುಕೂಲವಾಗಲಿದೆ. ಎರಡು ವರ್ಷದ ಅವಧಿಯಲ್ಲಿ ನಾವು ಆಡುವಷ್ಟು ಪಂದ್ಯಗಳನ್ನು ಐಪಿಎಲ್​ನ ಒಂದೇ ಆವೃತ್ತಿಯಲ್ಲಿ ಆಡಬಹುದು. ಈ ದೃಷ್ಠಿಕೋನದಲ್ಲಿ 2020ರ ಐಪಿಎಲ್​​ ನಮ್ಮ ತಂಡದ ಆಟಗಾರರಿಗೆ ಅತ್ಯಮೂಲ್ಯವಾಗಲಿದೆ ಎಂದಿದ್ದಾರೆ.

ಭಾರತದಲ್ಲಿನ ಐಪಿಎಲ್​ಗೆ ಮೊದಲು ಭಾಗವಹಿಸಲು ಹಿಂದೇಟು ಹಾಕುತ್ತಿದ್ದ ಆಸೀಸ್​ ಹಾಗೂ ಇಂಗ್ಲೆಂಡ್​ ಆಟಗಾರರು ಈ ಬಾರಿ ಭಾರಿ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಅವಕಾಶ ಸಿಕ್ಕಿದ್ದು ಕೆಲವರಿಗೆ ಮಾತ್ರ. ಅದರಲ್ಲೂ ಆಸೀಸ್ ಆಟಗಾರರಂತೂ ಕೋಟಿ ಕೋಟಿ ಹಣ ಪಡೆಯುವ ಮೂಲಕ ಗಮನ ಸೆಳೆದಿದ್ದರು.

ಈ ಬಾರಿ ಐಪಿಎಲ್​ನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​ 10.75 ಕೋಟಿ, ಪ್ಯಾಟ್​ ಕಮ್ಮಿನ್ಸ್​ 15.5 ಕೋಟಿ, ಕ್ರಿಸ್​ ಲಿನ್​ 2 ಕೋಟಿ, ನಥನ್​ ಕೌಲ್ಟರ್​ ನೈಲ್​ 8 ಕೋಟಿ, ಆ್ಯರೋನ್​ ಫಿಂಚ್​ 4.4 ಕೋಟಿ, ಮಿಚೆಲ್​ ಮಾರ್ಶ್​ 2 ಕೋಟಿ, ಕೇನ್​ ರಿಚರ್ಡ್ಸ್​ನ್​ 4 ಕೋಟಿ, ಹೇಜಲ್​ವುಡ್​ 2 ಕೋಟಿ, ಅಲೆಕ್ಸ್​ ಕ್ಯಾರಿ 2.4 ಕೋಟಿ, ಜೊಸ್ವ ಫಿಲಿಪ್ಪೆ 20 ಲಕ್ಷ, ಕ್ರಿಸ್​ ಗ್ರೀನ್​ 20 ಲಕ್ಷ, ಮಾರ್ಕಸ್​ ಸ್ಟೊಯ್ನಿಸ್​ 4.8 ಕೋಟಿ, ಆ್ಯಂಡ್ರ್ಯೂ ಟೈ 1 ಕೋಟಿ ಪಡೆದಿದ್ದಾರೆ. ​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.