ETV Bharat / sports

2ನೇ ಟಿ-20 ಪಂದ್ಯಕ್ಕೂ ಮುನ್ನ 'ಎಬಿಡಿ' ನೀಡಿದ್ದ ಸಲಹೆ ಬ್ಯಾಟಿಂಗ್​ ಯಶಸ್ಸಿಗೆ ನೆರವಾಯ್ತು:​ ಕೊಹ್ಲಿ

ಇಂಗ್ಲೆಂಡ್​ ವಿರುದ್ಧ ಎರಡನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ವಿರಾಟ್​ ಕೊಹ್ಲಿ ತಮ್ಮ ಯಶಸ್ಸಿಗೆ ಆರ್​ಸಿಬಿ ಸಹ ಆಟಗಾರ, ದ.ಆಫ್ರಿಕಾದ ಎಬಿ ಡಿವಿಲಿಯರ್ಸ್ ಜೊತೆಗಿನ ಮಾತುಕತೆಯು ಪ್ರೇರಣೆಯಾಯಿತು ಎಂದು ಹೇಳಿಕೊಂಡಿದ್ದಾರೆ.

Just watch the ball: AB's advice helped Kohli play match-winning knock
ಪಂದ್ಯಕ್ಕೂ ಮುನ್ನ ಎಬಿಡಿ ನೀಡಿದ್ದ ಸಲಹೆ ನೆರವಾಯ್ತು ಎಂದ​ ಕೊಹ್ಲಿ
author img

By

Published : Mar 15, 2021, 9:53 AM IST

ಅಹಮದಾಬಾದ್: ಆಂಗ್ಲರ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಅನುಭವಿಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಎರಡನೇ ಪಂದ್ಯದಲ್ಲಿ ಅಜೇಯ 73 ರನ್ ಬಾರಿಸಿದರು. ಮರಳಿ ಲಯ ಕಂಡುಕೊಳ್ಳುವಲ್ಲಿ ಪಂದ್ಯಕ್ಕೂ ಮುನ್ನ ಎಬಿ ಡಿವಿಲಿಯರ್ಸ್​ ನೀಡಿದ ಸಲಹೆ ನೆರವಾಯಿತು ಎಂದು ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಕೊಹ್ಲಿ, ತಂಡದ ಗೆಲುವಿಗೆ ಕೊಡುಗೆ ನೀಡುವುದು ಹೆಮ್ಮೆಯ ಸಂಗತಿ. 70ಕ್ಕೂ ಅಧಿಕ ರನ್​ ಗಳಿಸಿರುವುದು ಸಂತಸ ತಂದಿದೆ. ಪಂದ್ಯಕ್ಕೂ ಮುನ್ನ ಎಬಿ ಡಿವಿಲಿಯರ್ಸ್ ಜೊತೆ ಮಾತನಾಡಿದ್ದೆ, ಎಸೆತಗಳ ಮೇಲೆ ಹೆಚ್ಚು ದೃಷ್ಟಿ ಹರಿಸುವಂತೆ (just to watch the ball) ಅವರು ಸಲಹೆ ನೀಡಿದ್ದರು. ಇದು ರನ್​ ಗಳಿಸುವಲ್ಲಿ ಸಹಾಯಕವಾಯಿತು ಎಂದಿದ್ದಾರೆ.

ಇದನ್ನೂ ಓದಿ: ಇಶಾನ್​ ಕಿಶನ್​​​ ಆಟ ಮೆಚ್ಚಿಕೊಂಡ ಸೆಹ್ವಾಗ್​​​: ಧೋನಿಗೆ ಹೋಲಿಸಿದ್ದೇಕೆ?

ಕಳೆದ ಟೆಸ್ಟ್ ಸರಣಿ ಸೇರಿದಂತೆ ಇತ್ತೀಚೆಗೆ ವಿರಾಟ್​ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಮೊದಲ ಟಿ-20 ಪಂದ್ಯ ಸೇರಿದಂತೆ ಕಳೆದ 5 ಇನ್ನಿಂಗ್ಸ್​ಗಳಲ್ಲಿ 3 ಬಾರಿ ಡಕ್​ ಔಟ್​ ಆಗಿದ್ದರು. ರನ್​ ಮಷಿನ್​ ಎಂದೇ ಕರೆಸಿಕೊಳ್ಳುತ್ತಿದ್ದ ಕೊಹ್ಲಿಯ ವೈಫಲ್ಯ ತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.