ETV Bharat / sports

ರೋಹಿತ್​ ಶರ್ಮಾ ನನ್ನ ನೆಚ್ಚಿನ​​ ಬ್ಯಾಟ್ಸ್​ಮನ್​​: ಡುಮಿನಿ

ರೋಹಿತ್​ ಶರ್ಮಾ ತಮ್ಮ ನೆಚ್ಚಿನ ಬ್ಯಾಟ್ಸ್​ಮನ್​ ಎಂದು ದಕ್ಷಿಣ ಆಫ್ರಿಕಾದ ಆಲ್​ರೌಂಡರ್​​​ ಜೆಪಿ ಡುಮಿನಿ ಹೇಳಿದ್ದಾರೆ.

author img

By

Published : Jun 20, 2020, 9:26 PM IST

Rohit Sharma
Rohit Sharma

ಹೈದರಾಬಾದ್​: ಟೀಂ ಇಂಡಿಯಾ ಆರಂಭಿಕ ಸ್ಫೋಟಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ನನ್ನ ನೆಚ್ಚಿನ ಬ್ಯಾಟ್ಸ್​​ಮನ್​​ ಎಂದು ದಕ್ಷಿಣ ಆಫ್ರಿಕಾ ಆಲ್​ರೌಂಡರ್​ ಜೆಪಿ ಡುಮಿನಿ ಹೇಳಿದ್ದಾರೆ.

ಜಿಂಬಾಬ್ವೆ ಮಾಜಿ ವೇಗದ ಬೌಲರ್​​ ಪೊಮ್ಮಿ ಎಂಬಂಗ್ವಾ ಜತೆ ಇನ್​ಸ್ಟಾಗ್ರಾಂ ಲೈವ್​ ವೇಳೆ ಈ ಮಾಹಿತಿ ಹಂಚಿಕೊಂಡಿರುವ ಅವರು, ರೋಹಿತ್ ಶರ್ಮಾ ನನ್ನ ನೆಚ್ಚಿನ ಬ್ಯಾಟ್ಸ್‌ಮನ್. ಅವರ ಪಿಕ್-ಅಪ್ ಫುಲ್ ಶಾಟ್ ನನಗೆ ಇಷ್ಟವಾಗುತ್ತದೆ ಎಂದಿದ್ದಾರೆ.

JP Duminy
ಜೆಪಿ ಡುಮಿನಿ

2019ರಲ್ಲಿ ನಡೆದ ವಿಶ್ವಕಪ್​ ಟೂರ್ನಿಯಲ್ಲಿ ಕೇವಲ 9 ಪಂದ್ಯಗಳಿಂದ 81.00 ಸರಾಸರಿಯಲ್ಲಿ 648 ರನ್ ​ಗಳಿಸಿದ್ದ ರೋಹಿತ್​​ ಐದು ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಸದ್ಯ ಏಕದಿನ ಕ್ರಿಕೆಟ್​​ನಲ್ಲಿ ತಂಡದ ಉಪ ನಾಯಕನಾಗಿರುವ ರೋಹಿತ್​​ ಶರ್ಮಾ, 224 ಏಕದಿನ ಪಂದ್ಯ, 108 ಟಿ-20 ಹಾಗೂ 32 ಟೆಸ್ಟ್​​ ಪಂದ್ಯಗಳನ್ನಾಡಿದ್ದು, ಎಲ್ಲಾ ಮಾದರಿಗಳಿಂದ 14,029 ರನ್​ಗಳಿಸಿದ್ದಾರೆ.

ಏಕದಿನ ಕ್ರಿಕೆಟ್​​ನಲ್ಲಿ ಮೂರು ದ್ವಿಶತಕ ದಾಖಲು ಮಾಡಿರುವ ಏಕೈಕ ಬ್ಯಾಟ್ಸ್​ಮನ್​ ಆಗಿರುವ ರೋಹಿತ್​ ಶರ್ಮಾ, ಇದೇ ಮಾದರಿ ಕ್ರಿಕೆಟ್​​ನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್​ ಗಳಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಈಡನ್​ ಗಾರ್ಡನ್​​ನಲ್ಲಿ ನಡೆದ ಪಂದ್ಯದಲ್ಲಿ 264 ವೈಯಕ್ತಿಕ ರನ್​ ಗಳಿಸಿದ್ದಾರೆ.

Rohit Sharma
ರೋಹಿತ್​ ಶರ್ಮಾ

ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ರೋಹಿತ್​ ಶರ್ಮಾ ಮುಂಬೈ ಇಂಡಿಯನ್ಸ್​ ತಂಡವನ್ನ ಮುನ್ನಡೆಸುತ್ತಿದ್ದಾರೆ. ಜೆಪಿ ಡುಮಿನಿ ಕೂಡ ಈ ಹಿಂದೆ ಮುಂಬೈ ಇಂಡಿಯನ್ಸ್​ ತಂಡದಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.