ETV Bharat / sports

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಜೋಸ್​​ ಬಟ್ಲರ್​ ಔಟ್​ - ಆಸ್ಟ್ರೇಲಿಯಾ ಇಂಗ್ಲೆಂಡ್​ ಟಿ20 ಸರಣಿ

ಬಟ್ಲರ್​ ಎರಡನೇ ಟಿ20 ಪಂದ್ಯದಲ್ಲಿ 54 ಎಸೆತಗಳಲ್ಲಿ 77 ರನ್​ಗಳಿಸಿ ಸರಣಿ ಗೆಲ್ಲಲು ನೆರವಾಗಿದ್ದರು. ಮೊದಲ ಪಂದ್ಯದಲ್ಲಿಯೂ 44 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು..

ಜೋಸ್​​ ಬಟ್ಲರ್​
ಜೋಸ್​​ ಬಟ್ಲರ್​
author img

By

Published : Sep 7, 2020, 4:23 PM IST

ಸೌತಾಂಪ್ಟನ್ : ಮೊದಲೆರಡು ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್​ ನಡೆಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್​ ವಿಕೆಟ್​ ಕೀಪರ್ ಕಮ್‌​ ಬ್ಯಾಟ್ಸ್​ಮನ್​ ಜೋಸ್​​ ಬಟ್ಲರ್​ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಇಸಿಬಿ ಖಚಿತಪಡಿಸಿದೆ.

ಇಂಗ್ಲೆಂಡ್​ ಬ್ಯಾಟ್ಸ್​ಮನ್​ ಜೋಸ್​ ಬಟ್ಲರ್​ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದ ನಂತರ ವೈಯಕ್ತಿಕ ಕಾರಣದಿಂದ ಬಯೋ ಸೆಕ್ಯೂರ್​ ವಲಯದಿಂದ ಅವರ ಕುಟುಂಬದ ಜೊತೆ ಹೊರ ಹೋಗಿದ್ದಾರೆ. ಆದ್ದರಿಂದ 3ನೇ ಟಿ20 ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ. ಮತ್ತೆ ಏಕದಿನ ಸರಣಿಯ ವೇಳೆಗೆ ಬಯೋ ಸೆಕ್ಯೂರ್​ ವಲಯಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಪ್ರಕಟಣೆ ಹೊರಡಿಸಿದೆ.

ಬಟ್ಲರ್​ ಎರಡನೇ ಟಿ20 ಪಂದ್ಯದಲ್ಲಿ 54 ಎಸೆತಗಳಲ್ಲಿ 77 ರನ್​ಗಳಿಸಿ ಸರಣಿ ಗೆಲ್ಲಲು ನೆರವಾಗಿದ್ದರು. ಮೊದಲ ಪಂದ್ಯದಲ್ಲಿಯೂ 44 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಟ್ಲರ್‌ 3ನೇ ಪಂದ್ಯದಿಂದ ಹೊರ ಹೋಗುತ್ತಿರುವುದರಿಂದ ಯುವ ಬ್ಯಾಟ್ಸ್​ಮನ್​ ಟಾಮ್ ಬ್ಯಾಂಟನ್ ಅವರು ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಭಾನುವಾರದ ಪಂದ್ಯದಲ್ಲಿ ಬೆರಳಿನ ಗಾಯಕ್ಕೆ ತುತ್ತಾಗಿರುವ ಇಯಾನ್ ಮಾರ್ಗನ್​ ಆಡಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.