ಪುಣೆ: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಭಾರತದೆದುರಿನ ಮುಂದಿನ 2 ಏಕದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಹಾಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ತಂಡದ ನಾಯಕನಾಗಿ ನೇಮಕ ಗೊಂಡಿದ್ದಾರೆ.
ಮಂಗಳವಾರ ನಡೆದಿದ್ದ ಮೊದಲ ಪಂದ್ಯದ ವೇಳೆ ಮಾರ್ಗನ್ ಫೀಲ್ಡಿಂಗ್ ಮಾಡುವ ವೇಳೆ ಚೆಂಡು ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಬಡಿದ ಪರಿಣಾಮ ಸೀಳಿಕೊಂಡಿದ್ದು, ಈ ಗಾಯಕ್ಕೆ ನಾಲ್ಕು ಹೊಲಿಗೆಗಳು ಹಾಕಲಾಗಿದೆ. ಗುರುವಾರ ಎಂಸಿಎ ಕ್ರೀಡಾಂಗಣದಲ್ಲಿ ತರಬೇತಿಯ ಸಮಯದಲ್ಲಿ ಫೀಲ್ಡಿಂಗ್ ಮಾಡಲು ಪ್ರಯತ್ನಿಸಿದ ಮಾರ್ಗನ್ ನಂತರ ತಾವು ಮುಂದಿನ ಪಂದ್ಯಗಳಲ್ಲಿ ಆಡುವುದಕ್ಕೆ ಅನ್ಫಿಟ್ ಎಂದು ಹೇಳಿಕೊಂಡಿದ್ದಾರೆ.
-
JUST IN: Eoin Morgan has been ruled out of the #INDvENG ODI series with a hand injury.
— ICC (@ICC) March 25, 2021 " class="align-text-top noRightClick twitterSection" data="
Jos Buttler will captain the team in his absence. pic.twitter.com/aMJ4iy23I0
">JUST IN: Eoin Morgan has been ruled out of the #INDvENG ODI series with a hand injury.
— ICC (@ICC) March 25, 2021
Jos Buttler will captain the team in his absence. pic.twitter.com/aMJ4iy23I0JUST IN: Eoin Morgan has been ruled out of the #INDvENG ODI series with a hand injury.
— ICC (@ICC) March 25, 2021
Jos Buttler will captain the team in his absence. pic.twitter.com/aMJ4iy23I0
ಮೊದಲ ಪಂದ್ಯದ ಗಾಯಗೊಂಡಿದ್ದ ಮತ್ತೊಬ್ಬ ಆಟಗಾರ ಬಿಲ್ಲಿಂಗ್ಸ್ ಗುರುವಾರ ತರಬೇತಿ ನಡೆಸಲಿಲ್ಲ. ಅವರು ಎಡ ಭುಜದ ನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದ್ದು ಎರಡನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ.
ಮಾರ್ಗನ್ ಬದಲಿಗೆ ಲಿಯಾಮ್ ಲಿವಿಂಗ್ಸ್ಟೋನ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಬಿಲ್ಲಿಂಗ್ಸ್ ಬದಲಿ ರಿಸರ್ವ್ ಆಟಗಾರನಾಗಿರುವ ನಂಬರ್ 1 ಟಿ20 ಬ್ಯಾಟ್ಸ್ಮನ್ ಡೇವಿಡ್ ಮಲನ್ ತಂಡಕ್ಕೇ ಸೇರ್ಪಡೆಗೊಂಡಿದ್ದು, ನಾಳಿನ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 2ನೇ ಏಕದಿನ ಪಂದ್ಯದಲ್ಲಿ ತಿರುಗಿ ಬೀಳುವ ವಿಶ್ವಾಸವಿದೆ: ಬೆನ್ ಸ್ಟೋಕ್ಸ್