ETV Bharat / sports

ಬಟ್ಲರ್​ ಅಬ್ಬರದ ಶತಕಕ್ಕೆ ಪಾಕ್​ ಕಂಗಾಲು... ಆಂಗ್ಲರಿಗೆ 12 ರನ್​ಗಳ ರೋಚಕ ಜಯ

ಪಾಕಿಸ್ತಾನ ವಿರುದ್ಧ 2 ನೇ ಏಕದಿನ ಪಂದ್ಯದಲ್ಲಿ 12 ಅತಿಥೇಯ ಇಂಗ್ಲೆಂಡ್​ 12 ರನ್​ಗಳ ರೋಚಕ ಜಯ ಸಾಧಿಸಿ, ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ.

author img

By

Published : May 12, 2019, 9:14 AM IST

ಬಟ್ಲರ್​

ಸೌತ್​ ಆ್ಯಮ್ಟನ್​​​: ಜೋಸ್​ ಬಟ್ಲರ್(110) ಅಬ್ಬರದ ಶತಕದ ನೆರವಿನಿಂದ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್​ 12 ರನ್​ಗಳ ರೋಚಕ ಜಯ ಸಾಧಿಸಿ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ಗೆ ಆರಂಭಿಕರಾದ ಜಾಸನ್​ ರಾಯ್​ 87, ಬ್ಯಾರ್ಸ್ಟೋವ್​ 51 ರನ್​ಗಳಿಸಿ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರ ನಂತರ ಬಂದ ಜೋ ರೂಟ್​ 40 ರನ್​ಗಳಿಸಿ ಔಟಾದರು. ನಂತರ ಒಂದಾದನಾಯಕ ಇಯಾನ್​​ ಮಾರ್ಗನ್​ 48 ಎಸೆತಗಳಲ್ಲಿ 6ಬೌಂಡರಿ ಒಂದು ಸಿಕ್ಸರ್​ ಸೇರಿದಂತೆ ಔಟಾಗದೆ 71, ಹಾಗೂ ವಿಕೆಟ್​ ಕೀಪರ್​ ಜೋಸ್​ ಬಟ್ಲರ್​​ 55 ಎಸೆತಗಳಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 110ರನ್​​ ಸಿಡಿಸಿ 373 ರನ್​ಗಳ ಬೃಹತ್​ ಮೊತ್ತ ದಾಖಲಿಸಲು ನೆರವಾದರು.

  • An incredible century from Jos Buttler – his eighth in ODIs – helped England to a 12-run win over Pakistan. https://t.co/qDsywhTAMI

    — ICC (@ICC) May 12, 2019 " class="align-text-top noRightClick twitterSection" data=" ">

ಪಾಕ್​ ಪರ ಶಾಹೀನ್​ ಆಫ್ರಿದಿ, ಹಸನ್​ ಅಲಿ, ಯಾಸಿರ್​ ಶಾ ತಲಾ ಒಂದು ವಿಕೆಟ್​ ಪಡೆದರು.

374 ರನ್​ಗಳ ಗುರಿ ಬೆನ್ನೆಟ್ಟಿದ ಪಾಕ್​ ಕೂಡ ಉತ್ತಮ ಪೈಪೋಟಿ ನಡೆಸಿತು. ಆರಂಭಿಕರಾದ ಇಮಾಮ್​ ಉಲ್​ ಹಕ್​ 35, ಫಾಖರ್​ ಜಮಾನ್​ 138 ರನ್​ಗಳಿಸಿದರೆ , ಬಾಬರ್​ ಅಜಾಮ್​ 51, ಆಸಿಫ್​ ಅಲಿ 51 ಸರ್ಫರಾಜ್​ ಅಹ್ಮದ್​ 41 ರನ್​ಗಳಿಸಿ ಗೆಲುವಿಗಾಗಿ ಪ್ರತಿರೋಧ ತೋರಿದರು. ಆದರೆ ಪಾಕ್​ ತಂಡ 50 ಓವರ್​ಗಳಲ್ಲಿ 361 ರನ್​ಗಳಿಸಲಷ್ಟೇ ಶಕ್ತವಾಗಿ 12 ರನ್​ಗಳಿಂದ ರೋಚಕ ಸೋಲನುಭವಿಸಿತು.

ಭರ್ಜರಿ ಬ್ಯಾಟಿಂಗ್​ ನಡೆಸಿದ ಫಾಖರ್​ ಜಮಾನ್​ 104 ಎಸೆತಗಳಲ್ಲಿ 138 ರನ್​ಗಳಿಸಿದರು. ಇವರ ಇನಿಂಗ್ಸ್​ನಲ್ಲಿ 4 ಸಿಕ್ಸರ್​,12 ಬೌಂಡರಿಗಳಿದ್ದವು. ಕೊನೆಯಲ್ಲಿ ಅಬ್ಬರಿಸಿದ ಆಸಿಫ್​ ಅಲಿ 36 ಎಸೆತಗಳಲ್ಲಿ 4 ಸಿಕ್ಸರ್​,2 ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ಸನಿಹ ತಂದರೂ, ಗೆಲುವಿನ ಗಡಿ ದಾಟುವಲ್ಲಿ ವಿಫಲರಾದರು.

ಇಂಗ್ಲೆಂಡ್​ ಪರ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದ 2 ವಿಕೆಟ್​ ಪಡೆದರು. ಕ್ರಿಸ್​ ವೋಕ್ಸ್​ 1,ಆದಿಲ್​ ರಶೀದ್​ 1, ಲೈಮ್​ ಪ್ಲಂಕೇಟ್​ 2, ಮೊಯಿನ್​ ಅಲಿ 1 ವಿಕೆಟ್​ ಪಡೆದರೂ ದಾರಾಳವಾಗಿ ರನ್​ ಬಿಟ್ಟಕೊಟ್ಟು ದುಬಾರಿಯಾದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.