ಸೌತಾಂಪ್ಟನ್: ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ವೃತ್ತಿ ಜೀವನದ 2ನೇ ಟೆಸ್ಟ್ ಶತಕ ಸಿಡಿಸಿದ್ದಾರೆ.
87 ರನ್ಗಳಿಸಿ ಔಟಾಗದೆ ಉಳಿದಿದ್ದ ಬಟ್ಲರ್ ಪಂದ್ಯದ 2 ನೇ ದಿನವಾದ ಇಂದು ತಮ್ಮ ಶತಕ ಪೂರ್ಣಗೊಳಿಸಿಕೊಂಡಿದ್ದಾರೆ. 189 ಎಸೆತಗಳಲ್ಲಿ ಶತಕ ಪೂರೈಸಿದ ಬಟ್ಲರ್ 10 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ.
-
Jos Buttler survives a review on 99 to bring up his second Test hundred!
— ICC (@ICC) August 22, 2020 " class="align-text-top noRightClick twitterSection" data="
What an innings it has been from the England wicket-keeper batsman 🙌#ENGvPAK pic.twitter.com/6Qd1JZjNzC
">Jos Buttler survives a review on 99 to bring up his second Test hundred!
— ICC (@ICC) August 22, 2020
What an innings it has been from the England wicket-keeper batsman 🙌#ENGvPAK pic.twitter.com/6Qd1JZjNzCJos Buttler survives a review on 99 to bring up his second Test hundred!
— ICC (@ICC) August 22, 2020
What an innings it has been from the England wicket-keeper batsman 🙌#ENGvPAK pic.twitter.com/6Qd1JZjNzC
ಈಗಾಗಲೆ ಶತಕ ದಾಖಲಿಸಿ ದ್ವಿಶತಕದತ್ತ ಮುನ್ನುಗ್ಗುತ್ತಿರುವ ಯುವ ಬ್ಯಾಟ್ಸ್ಮನ್ ಜಾಕ್ ಕ್ರಾಲೆ ಜೊತೆಗೆ 5ನೇ ವಿಕೆಟ್ಗೆ 246 ರನ್ಗಳ ಜೊತೆಯಾಟ ನಡೆಸಿದ್ದಾರೆ. 3ನೇ ದಿನದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡ 4 ವಿಕೆಟ್ ನಷ್ಟಕ್ಕೆ 373 ರನ್ಗಳಿಸಿದೆ. ಕ್ರಾಲೆ 186 ರನ್ ಹಾಗೂ ಬಟ್ಲರ್ 113 ರನ್ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಬಟ್ಲರ್ ತಮ್ಮ 2ನೇ ಶತಕದ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶತಕ ದಾಖಲಿಸಿದ 3ನೇ ವಿಕೆಟ್ ಕೀಪರ್ ಎನಿಸಿಕೊಂಡರು. ಈ ಮೊದಲು ನ್ಯೂಜಿಲ್ಯಾಂಡ್ನ ಬಿಜೆ ವ್ಯಾಟ್ಲಿಂಗ್ ಶ್ರೀಲಂಕಾ ವಿರುದ್ಧ, ಕ್ವಿಂಟನ್ ಡಿಕಾಕ್ ಭಾರತದ ವಿರುದ್ಧ ಶತಕ ದಾಖಲಿಸಿದ್ದಾರೆ.