ETV Bharat / sports

ಶ್ರೀಲಂಕಾ ವಿರುದ್ಧ ಟೆಸ್ಟ್​ನಲ್ಲಿ ದ್ವಿಶತಕದ ಜೊತೆಗೆ ಎರಡು ಮಹತ್ವದ ದಾಖಲೆ ಬರೆದ ಜೋ ರೂಟ್​ - ಇಂಗ್ಲೆಂಡ್​ vs ಶ್ರೀಲಂಕಾ ಟೆಸ್ಟ್​ ಸರಣಿ

ರೂಟ್​ 8000 ರನ್​ ಬಾರಿಸಿದ ಇಂಗ್ಲೆಂಡ್​ನ 7ನೇ ಬ್ಯಾಟ್ಸ್​ಮನ್​ ಎಂಬ ದಾಖಲೆಯ ಜೊತೆಗೆ ಶ್ರೀಲಂಕಾ ನೆಲದಲ್ಲಿ ದ್ವಿಶತಕ ಸಾಧನೆ ಮಾಡಿದ ಮೊದಲ ಆಂಗ್ಲ ಬ್ಯಾಟ್ಸ್​ಮನ್​ ಎಂಬ ಖ್ಯಾತಿಗೂ ಪಾತ್ರರಾದರು. ಈ ಹಿಂದೆ 2012ರಲ್ಲಿ ಪೀಟರ್​ಸನ್​ 151 ರನ್​ಗಳಿಸಿದ್ದು, ಈ ವರೆಗಿನ ದಾಖಲೆಯಾಗಿತ್ತು.

ಜೋ ರೂಟ್​ ದ್ವಿಶತಕ
ಜೋ ರೂಟ್​ ದ್ವಿಶತಕ
author img

By

Published : Jan 16, 2021, 7:34 PM IST

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ವೇಳೆ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್ ವೇಗವಾಗಿ 8,000 ರನ್​ ಗಳಿಸಿದ 2ನೇ ಬ್ಯಾಟ್ಸ್​ಮನ್​ ಹಾಗೂ 2 ದ್ವಿಶತಕ ಸಿಡಿಸಿದ ಇಂಗ್ಲೆಂಡ್​ನ ಮೊದಲ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಜೋ ರೂಟ್ ​ ಈ ಮೈಲಿಗಲ್ಲನ್ನು ಮೊದಲ ಟೆಸ್ಟ್​ನ 2ನೇ ದಿನ ತಲುಪಿದ್ದಾರೆ ತಮ್ಮ 178ನೇ ಇನ್ನಿಂಗ್ಸ್​ನಲ್ಲಿ ತಲುಪಿದ್ದಾರೆ. ಇಂಗ್ಲೆಂಡ್​ ತಂಡದ ಮಾಜಿ ನಾಯಕ ಕೆವಿನ್ ಪೀಟರ್​ಸನ್​ 178 ಇನ್ನಿಂಗ್ಸ್​ನಲ್ಲಿ ತಲುಪಿ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಮಾಜಿ ನಾಯಕ ಅಲೈಸ್ಟರ್​ ಕುಕ್​ 181, ಗ್ರಹಂ ಗೋಚ್​ 189, ಜಿಯಾಫ್​ ಬಾಯ್ಕಾಟ್​​ 190 ಹಾಗೂ ಡೇವಿಡ್​ ಗೋವರ್​ 195 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ರೂಟ್​ 8000 ರನ್​ ಬಾರಿಸಿದ ಇಂಗ್ಲೆಂಡ್​ನ 7ನೇ ಬ್ಯಾಟ್ಸ್​ಮನ್​ ಎಂಬ ದಾಖಲೆಯ ಜೊತೆಗೆ ಶ್ರೀಲಂಕಾ ನೆಲದಲ್ಲಿ ದ್ವಿಶತಕ ಸಾಧನೆ ಮಾಡಿದ ಮೊದಲ ಆಂಗ್ಲ ಬ್ಯಾಟ್ಸ್​ಮನ್​ ಎಂಬ ಖ್ಯಾತಿಗೂ ಪಾತ್ರರಾದರು. ಈ ಹಿಂದ 2012ರಲ್ಲಿ ಪೀಟರ್​ಸನ್​ 151 ರನ್​ಗಳಿಸಿದ್ದು, ಈ ವರೆಗಿನ ದಾಖಲೆಯಾಗಿತ್ತು.

ಅಲ್ಲದೇ ಜೋ ರೂಟ್​ ಟೆಸ್ಟ್​ ಕ್ರಿಕೆಟ್​ನಲ್ಲಿ 2 ದ್ವಿಶತಕ ಸಿಡಿಸಿದ ಇಂಗ್ಲೆಂಡ್​ನ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡರು. ರೂಟ್​ಗೂ ಮೊದಲು 7 ಇಂಗ್ಲಿಷ್​​ ನಾಯಕರು ದ್ವಿಶತಕ ಸಿಡಿಸಿದ್ದಾರೆ. ವಿರಾಟ್​ ಕೊಹ್ಲಿ 7 ದ್ವಿಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದರೆ, ಲಾರಾ 5, ಡಾನ್​ ಬ್ರಾಡ್ಮನ್​ , ಗ್ರೇಮ್ ಸ್ಮಿತ್​ ಹಾಗೂ ಮೈಕಲ್ ಕ್ಲಾರ್ಕ್​ ತಲಾ 4 ದ್ವಿಶತಕ ಸಿಡಿಸಿದ್ದಾರೆ.

ಇದನ್ನು ಓದಿ:ಜೋ ರೂಟ್ ದ್ವಿಶಕತದ ನೆರವಿನಿಂದ ಇಂಗ್ಲೆಂಡ್​ ಬೃಹತ್​ ಮೊತ್ತ: ಇನ್ನಿಂಗ್ಸ್​ ಸೋಲು ತಪ್ಪಿಸಲು ತಿರಿಮನ್ನೆ ಹರಸಾಹಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.