ETV Bharat / sports

ವೈಟ್​ಬಾಲ್​ ತರಬೇತಿ ಶಿಬಿರಕ್ಕೆ ಸೇರಿಕೊಂಡ ಇಂಗ್ಲೆಂಡ್ ಟೆಸ್ಟ್​ ತಂಡದಿಂದ ಹೊರಬಿದ್ದ 5 ಆಟಗಾರರು

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ 18 ಮತ್ತು 29 ರನ್​ಗಳಿಸಿದ ನಂತರ ತಂಡದಿಂದ ಹೊರಬಿದ್ದಿದ್ದ ಜೋ ಡೆನ್ಲಿ ಹಾಗೂ ಕ್ರೈಗ್​ ಓವರ್​ಟನ್​, ಒಲ್ಲಿ ರಾಬಿನ್​ಸನ್​ಮ ಒಲ್ಲಿ ಸ್ಟೋನ್​ ಹಾಗೂ ಡಾನ್ ಲಾರೆನ್ಸ್​ ಶುಕ್ರವಾರದಿಂದ ಆರಂಭವಾಗಿರುವ ವಿಂಡೀಸ್​ ವಿರುದ್ಧದ ಟೆಸ್ಟ್​ ತಂಡದಿಂದ ಹೊರ ಬಿದ್ದಿದ್ದರು.

ಜೋ ಡೆನ್ಲಿ
ಜೋ ಡೆನ್ಲಿ
author img

By

Published : Jul 25, 2020, 3:52 PM IST

ಮ್ಯಾಂಚೆಸ್ಟರ್​: ವೆಸ್ಟ್​ ಇಂಡೀಸ್​ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಅವಕಾಶ ಪಡೆಯದ 5 ಆಟಗಾರರು ಐರ್ಲೆಂಡ್​ ವಿರುದ್ದದ ಏಕದಿನ ಸರಣಿಗಾಗಿ ನಡೆಯುತ್ತಿರುವ ತರಬೇತಿ ಶಿಬಿರ ಸೇರಿಕೊಂಡಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ 18 ಮತ್ತು 29 ರನ್​ಗಳಿಸಿದ ನಂತರ ತಂಡದಿಂದ ಹೊರಬಿದ್ದಿದ್ದ ಜೋ ಡೆನ್ಲಿ ಹಾಗೂ ಕ್ರೈಗ್​ ಓವರ್​ಟನ್​, ಒಲ್ಲಿ ರಾಬಿನ್​ಸನ್​ಮ ಒಲ್ಲಿ ಸ್ಟೋನ್​ ಹಾಗೂ ಡಾನ್ ಲಾರೆನ್ಸ್​ ಶುಕ್ರವಾರದಿಂದ ಆರಂಭವಾಗಿರುವ ವಿಂಡೀಸ್​ ವಿರುದ್ಧದ ಟೆಸ್ಟ್​ ತಂಡದಿಂದ ಹೊರ ಬಿದ್ದಿದ್ದರು.

ಇನ್ನು ಆಗಸ್ಟ್​ 1ರಿಂದ ಆರಂಭವಾಗಲಿರುವ ಕೌಂಟಿ ಕ್ರಿಕೆಟ್​ನಲ್ಲಿ ಡೆನ್ಲಿ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಐರ್ಲೆಂಡ್​ ವಿರುದ್ಧ ಇಂಗ್ಲೆಂಡ್​ ತಂಡ 3 ರಾಯಲ್​ ಲಂಡನ್​ ಏಕದಿನ ಪಂದ್ಯಗಳನ್ನಾಡಲಿದೆ. ಏಜಸ್​ ಬೌಲ್​ನಲ್ಲಿ ಜುಲೈ 30 ರಂದು ಮೊದಲ ಪಂದ್ಯ ನಡೆಯಲಿದೆ. ಶುಕ್ರವಾರ ತರಬೇತಿ ಪಡೆಯುವತ್ತಿರುವ 26 ಆಟಗಾರರನ್ನ ಎರಡು ತಂಡಗಳಾಗಿ ವಿಭಜಿಸಿ ಅಭ್ಯಾಸ ಪಂದ್ಯವನ್ನಾಡಿಸಲಾಗಿತ್ತು. ನಾಳೆ ಐರ್ಲೆಂಡ್​ ವಿರುದ್ಧವೇ ಅಭ್ಯಾಸ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಜೋ ಡೆನ್ಲಿಗೆ ಅವಕಾಶವಿಲ್ಲ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.