ಪರ್ತ್: ಮಹಿಳೆಯರ ಟಿ-20 ವಿಶ್ವಕಪ್ನ 3ನೇ ಪಂದ್ಯದಲ್ಲಿ ಹೇಲಿ ಜೆನ್ಸೆನ್ ಬೌಲಿಂಗ್ ಹಾಗೂ ನಾಯಕಿ ಸೋಫಿ ಡಿವೈನ್ರ ಭರ್ಜರಿ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬೌಲಿಂಗ್ ಆಯ್ದುಕೊಂಡಿತು. ಶ್ರೀಲಂಕಾ ತಂಡ ನಾಯಕಿ ಚಾಮರಿ ಅಟಪಟ್ಟು 41, ಹಸಿನಿ ಪೆರೆರಾ 20 ಹಾಗೂ ಹರ್ಷಿತಾ ಮಾಧವಿ ಅವರ 27 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 127 ರನ್ಗಳಿಸಲಷ್ಟೇ ಶಕ್ತವಾಯಿತು.
ಕಿವೀಸ್ ಪರ ಅದ್ಭುತ ಬೌಲಿಂಗ್ ನಡೆಸಿದ ಹೇಲಿ ಜೆನ್ಸೆನ್ 16 ರನ್ಗಳಿಗೆ ಮೂರು ವಿಕೆಟ್, ಅಮೆಲಿಯಾ ಕೆರ್ 21ಕ್ಕೆ 2 ವಿಕೆಟ್ ಪಡೆದರೆ, ಡಿವೈನ್ ಹಾಗೂ ತಹುಹು ತಲಾ ಒಂದು ವಿಕೆಟ್ ಪಡೆದರು.
-
What an innings from Sophie Devine 🙌#NZvSL | #T20WorldCup pic.twitter.com/PwRK8aPJYf
— T20 World Cup (@T20WorldCup) February 22, 2020 " class="align-text-top noRightClick twitterSection" data="
">What an innings from Sophie Devine 🙌#NZvSL | #T20WorldCup pic.twitter.com/PwRK8aPJYf
— T20 World Cup (@T20WorldCup) February 22, 2020What an innings from Sophie Devine 🙌#NZvSL | #T20WorldCup pic.twitter.com/PwRK8aPJYf
— T20 World Cup (@T20WorldCup) February 22, 2020
128 ರನ್ಗಳ ಸಾಧಾರಣ ಗುರಿ ಪಡೆದ ನ್ಯೂಜಿಲ್ಯಾಂಡ್ ಸೂಫಿ ಡಿವೈನ್ ಅಬ್ಬರದ ಅರ್ಧಶತಕದ ನೆರವಿನಿಂದ 17.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
55 ಎಸೆತೆಗಳನ್ನೆದುರಿಸಿದ ಡಿವೈನ್ 2 ಸಿಕ್ಸರ್ ಹಾಗೂ 6 ಬೌಂಡರಿ ನೆರವಿನಿಂದ 75 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ಮ್ಯಾಡಿ ಗ್ರೀನ್ 29 ರನ್ ಗಳಿಸಿದರು. ಪ್ರಿಸ್ಟ್ 6, ವಿಶ್ವದ ನಂಬರ್ ಒನ್ ಬ್ಯಾಟರ್ ಸೂಜಿ ಬೇಟ್ಸ್ 13 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಶ್ರೀಲಂಕಾ ಪರ ಅಟಪಟ್ಟು ಹಾಗೂ ಕವಿಶಾ ದಿಲ್ಹಾರಿ ತಲಾ ಒಂದು ವಿಕೆಟ್ ಪಡೆದರು.
ಫೆ. 27ರಂದು ಕಿವೀಸ್ ಭಾರತವನ್ನು, ಶ್ರೀಲಂಕಾ ಫೆ. 24ರಂದು ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿವೆ.