ETV Bharat / sports

ವಿಹಾರಿ ಶತಕ, ಬುಮ್ರಾ ಹ್ಯಾಟ್ರಿಕ್ ದಾಳಿಗೆ ವಿಂಡೀಸ್​ ವಿಲವಿಲ! - ಭಾರತ vs ವೆಸ್ಟ್​ ಇಂಡೀಸ್

ಅಂತಿಮ ಟೆಸ್ಟ್​ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ದಳಿಗೆ ನಲುಗಿದ ವೆಸ್ಟ್​ ಇಂಡೀಸ್​ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡು ಸಂಕಷ್ಟಕ್ಕೆ ಸಿಲುಕಿದೆ.

ಅಂತಿಮ ಟೆಸ್ಟ್​ ಪಂದ್ಯ
author img

By

Published : Sep 1, 2019, 8:47 AM IST

ಜಮೈಕಾ: ಟೆಸ್ಟ್​ ಚಾಂಪಿಯನ್​​ಶಿಪ್​ನ ಅಂತಿಮ ಪಂದ್ಯದಲ್ಲಿ ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರಿತ್ ಬುಮ್ರಾ ದಳಿಗೆ ನಲುಗಿದ ವೆಸ್ಟ್​ ಇಂಡೀಸ್​ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡು ಸಂಕಷ್ಟಕ್ಕೆ ಸಿಲುಕಿದೆ.

264 ರನ್​ಗಳಿಂದ ದ್ವಿತೀಯ ದಿನದ ಆಟ ಶುರು ಮಾಡಿದ ಟೀಂ ಇಂಡಿಯಾ ಆಟಗಾರರು ವಿಂಡೀಸ್​ ಬೌಲರ್​ಗಳ ಬೆವರಿಳಿಸಿದ್ರು. ಮೊದಲ ಟೆಸ್ಟ್​ ಪಂದದಲ್ಲಿ ಶತಕದಿಂದ ವಂಚಿತರಾಗಿದ್ದ ಹನುಮ ವಿಹಾರಿ ದ್ವಿತೀಯ ಟೆಸ್ಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ರು.​

ವಿಹಾರಿ ಜೊತೆ ಉತ್ತಮ ಆಟವಾಡಿದ ವೇಗಿ ಇಶಾಂತ್​ ಶರ್ಮಾ ವಿಂಡೀಸ್​ ಬೌಲರ್​ಗಳ ಬೆವರಿಳಿಸಿದ್ರು. ಭರ್ಜರಿ 7 ಬೌಡರಿಗಳ ನೆರವಿನಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಅರ್ಧಶತಕ ಗಳಿಸಿದ್ರು. ಅಂತಿಮವಾಗಿ ಟೀಂ ಇಂಡಿಯಾ 140.1 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 416 ರನ್​ ಗಳಿಸಿತು.

ಮೊದಲ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್​ ಇಂಡೀಸ್​ ತಂಡಕ್ಕೆ ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರಿತ್ ಬುಮ್ರಾ ಭಾರೀ ಆಘಾತ ನೀಡಿದ್ರು. ಬುಮ್ರಾ ದಾಳಿಗೆ ಕಕ್ಕಾಬಿಕ್ಕಿಯಾದ ಕೆರಿಬಿಯನ್​ ಆಟಗಾರರು ಪೆವಿಲಿಯನ್ ಪರೇಡ್​ ನಡೆಸಿದ್ರು. 8ನೇ ಓವರ್​ನಲ್ಲಿ ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಕ್ರೇಗ್ ಬ್ರಾಥ್‌ವೈಟ್ ವಿಕೆಟ್​ ಪಡೆದ ಬುಮ್ರಾ ಹ್ಯಾಟ್ರಿಕ್​ ಸಾಧನೆ ಮಾಡಿದ್ರು. ಹರ್ಭಜನ್​ ಸಿಂಗ್, ಇರ್ಫಾನ್​ ಪಠಾಣ್ ನಂತರ ಟೆಸ್ಟ್​ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.

ಅಂತಿಮವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ ವೆಸ್ಟ್​ ಇಂಡೀಸ್​ 33 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 87 ರನ್ ​ಗಳಿಸಿತು. ವಿಂಡೀಸ್​ ಪರ ಶಿಮ್ರಾನ್ ಹೇಟ್ಮಯರ್ 34, ಜಾಸನ್ ಹೋಲ್ಡರ್ 18 ರನ್​ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರು ಹೇಳಿಕೊಳ್ಳುವ ಪ್ರದರ್ರಶನ ತೋರಲಿಲ್ಲ. ಟೀಂ ಇಂಡಿಯಾ ಪರ ಬುಮ್ರಾ 6 ವಿಕೆಟ್​ ಗಳಿಸಿದ್ರೆ, ಮೊಹಮ್ಮದ್ ಶಮಿ 1 ವಿಕೆಟ್​ ಕಬಳಿಸಿದ್ರು.

Intro:Body:

sports

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.