ETV Bharat / sports

ದಕ್ಷಿಣ ಆಫ್ರಿಕಾ ನಂತರ ಬಾಂಗ್ಲಾ ವಿರುದ್ಧದ ಟೆಸ್ಟ್​​ ಸರಣಿಯಿಂದಲೂ ಜಸ್​ಪ್ರೀತ್​​ ಬುಮ್ರಾ ಹೊರಕ್ಕೆ!? - ಕ್ರಿಕೆಟ್​ ಟೆಸ್ಟ್​ ಸರಣಿ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ ಬಳಿಕ ಬಾಂಗ್ಲಾ ವಿರುದ್ಧ ನಡೆಯಲಿರುವ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನ​ ಟೆಸ್ಟ್​​ ಪಂದ್ಯಗಳಿಂದಲೂ ವೇಗದ ಬೌಲರ್​ ಜಸ್​​ಪ್ರೀತ್​ ಬುಮ್ರಾ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಟೀಂ ಇಂಡಿಯಾ ಕ್ರಿಕೆಟ್​​
author img

By

Published : Sep 26, 2019, 11:26 PM IST

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನ ಮೂರು ಟೆಸ್ಟ್​​ ಪಂದ್ಯಗಳಿಂದ ಟೀಂ ಇಂಡಿಯಾ ವೇಗದ ಬೌಲರ್​​ ಜಸ್​ಪ್ರೀತ್​ ಬುಮ್ರಾ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಮತ್ತೋರ್ವ ವೇಗಿ ಉಮೇಶ್​ ಯಾದವ್​ ಆಯ್ಕೆಗೊಂಡಿದ್ದಾರೆ.

ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ವರ್ಷ ಟೀಂ ಇಂಡಿಯಾ ಭಾಗಿಯಾಗಲಿರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನ ಯಾವುದೇ ಪಂದ್ಯಗಳಲ್ಲಿ ಬುಮ್ರಾ ಕಣಕ್ಕಿಳಿಯುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬೆನ್ನುನೋವಿನಿಂದ ಬಳಲುತ್ತಿರುವ ಬುಮ್ರಾ ಇದೀಗ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ದಕ್ಷಿಣ ಆಫ್ರಿಕಾ ನಂತರ ಬಾಂಗ್ಲಾ ವಿರುದ್ಧ ನಡೆಯಲಿರುವ ಟೆಸ್ಟ್​ ಸರಣಿಯಲ್ಲೂ ಟಿಂ ಇಂಡಿಯಾವನ್ನ ಪ್ರತಿನಿಧಿಸುವುದು ಬಹುತೇಕ ಅನುಮಾನವಾಗಿದೆ.

ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಬುಮ್ರಾ ಸಂಪೂರ್ಣ ಗುಣಮುಖರಾಗಿ ಮೈದಾನಕ್ಕಿಳಿಯಬೇಕಾಗಿದೆ. ಇದೇ ಉದ್ದೇಶದಿಂದ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಮುಂದಾಗಿದ್ದು, ಇದಕ್ಕೆ ಕೋಚ್​ ರವಿಶಾಸ್ತ್ರಿ ಹಾಗೂ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕೂಡ ಸಮ್ಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಕ್ರಿಕೆಟ್​ ಆಡುತ್ತಿರುವ ಕಾರಣ, ಬಾಂಗ್ಲಾ ವಿರುದ್ಧದ ಕ್ರಿಕೆಟ್​ ಸರಣಿಯಿಂದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕೂಡ ಹೊರಗುಳಿಯುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ.

Intro:Body:

ದಕ್ಷಿಣ ಆಫ್ರಿಕಾ ನಂತರ ಬಾಂಗ್ಲಾ ವಿರುದ್ಧದ ಟೆಸ್ಟ್​​ ಸರಣಿಯಿಂದಲೂ ಬುಮ್ರಾ ಹೊರಕ್ಕೆ! 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.