ಮುಂಬೈ: ಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಭಾರತದ ವೇಗಿ ಜಸ್ಪ್ರಿತ್ ತ್ ಬುಮ್ರಾ ಕಮ್ಬ್ಯಾಕ್ ಮಾಡಿದ್ದಾರೆ. ಬುಮ್ರಾ ಬಗ್ಗೆ ಇಂಡಿಯಾ ನಾಯಕ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.
ಇಂದು ತವರಿನಲ್ಲಿ ಭಾರತ ತಂಡವು ಬಲಿಷ್ಠ ಆಸೀಸ್ ತಂಡವನ್ನು ಎದುರಿಸುತ್ತಿದ್ದು, ಬುಮ್ರಾ ಮತ್ತೆ ಮ್ಯಾಜಿಕ್ ಮಾಡಲು ಸಿದ್ಧರಾಗಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮೊದಲು ಮಾತನಾಡಿದ ಕ್ಯಾಪ್ಟನ್ ಕೊಹ್ಲಿ, ಬೆನ್ನಿನ ಸ್ಟ್ರೆಸ್ ಫ್ರಾಕ್ಚರ್ನಿಂದಾಗಿ ನಮ್ಮ ಪೇಸರ್ ಬೂಮ್ರಾ ತಮ್ಮ ಸಾಮರ್ಥ್ಯವನ್ನೇನೂ ಕಳೆದುಕೊಂಡಿಲ್ಲ. ಅವರು ಮೊದಲಿನಂತೆ ಶಾರ್ಪ್ ಆಗಿದ್ದಾರೆ. ಎದುರಾಳಿ ಬ್ಯಾಟ್ಸ್ಮೆನ್ಗಳ ವಿಕೆಟ್ ಎಗರಿಸುವಲ್ಲಿ ಅವರ ಗುರಿ ತಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನನ್ನ ಪ್ರಕಾರ ಬೂಮ್ರಾ ಜಗತ್ತಿನಲ್ಲೇ ಎಲ್ಲ ಪ್ರಕಾರಗಳಲ್ಲೂ ಸಮರ್ಥವಾಗಿ ಆಡಬಲ್ಲ ಒಬ್ಬ ಚಾಣಾಕ್ಷ ಬೌಲರ್. ಅವರು ಬ್ಯಾಟ್ಸ್ಮೆನ್ಗಳ ವಿಕೆಟ್ಗೆ ಗುರಿಯಾಗಿಸಿ ಬೌಲಿಂಗ್ ಮಾಡುವುದಕ್ಕೆ ಹಿಂದೆ ಮುಂದೆ ನೋಡಲ್ಲ. ಅವರೊಂದಿಗೆ ನೆಟ್ಸ್ನಲ್ಲಿ ಆಟವಾಡೋದೇ ತುಂಬಾ ಖುಷಿ. ನಾನು ಪ್ರತಿಬಾರಿಯೂ ನನಗೆ ನಾನೇ ಸವಾಲೆಸದು ಅವರೊಂದಿಗೆ ನೆಟ್ಸ್ನಲ್ಲಿ ಆಡುತ್ತೇನೆ. ಆದರೆ ಪ್ರತಿ ಬಾರಿಯೂ ಪ್ರತಿ ಎಸೆತಕ್ಕೆ ಬೌಂಡರ್ ಬಾರಿಸೋದು ಕಷ್ಟವಾಗುತ್ತದೆ ಎಂದು ಕೊಹ್ಲಿ, ಬುಮ್ರಾ ಗುಣಗಾನ ಮಾಡಿದ್ದಾರೆ.