ದುಬೈ: ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವದಲ್ಲೇ ಅತ್ಯುತ್ತಮ ಟಿ-20 ಬೌಲರ್ ಎಂದು ಮುಂಬೈ ಇಂಡಿಯನ್ಸ್ ತಂಡದ ಸಹ ಬೌಲರ್ ಜೇಮ್ಸ್ ಪ್ಯಾಟಿನ್‌ಸನ್ ಅಭಿಪ್ರಾಯಪಟ್ಟಿದ್ದಾರೆ..
ಬುಮ್ರಾ ಮೂರು ಮಾದರಿಯಲ್ಲೂ ಭಾರತ ತಂಡಕ್ಕೆ ಅದ್ಭುತ ಬೌಲರ್ ಆಗಿದ್ದಾರೆ. ಅವರು ಹೊಸ ಚೆಂಡಿನಲ್ಲಿ ಕಣಕ್ಕಳಿದರೆ ಬೇಗ ವಿಕೆಟ್ ಪಡೆದು ತಂಡಕ್ಕೆ ಮುನ್ನಡೆ ಒದಗಿಸಿಕೊಡುತ್ತಾರೆ. ಅವರೂ ಡೆತ್ ಓವರ್ ಸ್ಪೆಸಲಿಸ್ಟ್ ಕೂಡ ಆಗಿದ್ದಾರೆ. ಅವರ ಕೊನೆಯ ಓವರ್ಗಳಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳು ರನ್ಗಳಿಸಲು ಕಷ್ಟಪಡುತ್ತಾರೆ. ಇದು ಆತನನ್ನು ಎಕಾನಾಮಿಕಲ್ ಬೌಲರ್ ಆಗಿ ಮಾಡಿದೆ ಎಂದು ಪ್ಯಾಟಿನ್‌ಸನ್ ಹೇಳಿದ್ದಾರೆ.
![ಜೇಮ್ಸ್ ಪ್ಯಾಟಿನ್‌ಸನ್](https://etvbharatimages.akamaized.net/etvbharat/prod-images/ej9mwj3u8aaw76e_1010newsroom_1602343257_1102.png)
"ಬುಮ್ರಾ ಶಾರ್ಟ್ ರನ್-ಅಪ್, ಬೌಲಿಂಗ್ ಆಕ್ಷನ್ ಹಾಗೂ ಯಾರ್ಕರ್ಗಳಿಂದ ವಿಕೆಟ್ ತೆಗೆದುಕೊಳ್ಳುವುದರಲ್ಲಿ ಅವರೂ ಮಿಸ್ ಆಗುವುದಿಲ್ಲ. ಆದರೆ, ಇದು ಅವರಲ್ಲಿ ಎಷ್ಟುಕಾಲ ಉಳಿಯುತ್ತದೆ ಎನ್ನುವುದೇ ಕಳವಳವಾಗಿದೆ. ಆದರೂ ಅವರೊಂದಿಗೆ ಬೌಲಿಂಗ್ ಪಾರ್ಟ್ನರ್ ಆಗಿರುವುದು ನಿಜಕ್ಕೂ ಖುಷಿಯಾಗುತ್ತದೆ" ಎಂದಿದ್ದಾರೆ.
ಮಾಲಿಂಗ ಸ್ಥಾನವನ್ನು ತುಂಬುತ್ತಿರುವುದು ಅದ್ಭುತವೆನಿಸುತ್ತಿದೆ
ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಶಕ್ತಿಯಾಗಿದ್ದ ಶ್ರೀಲಂಕಾದ ಲಸಿತ್ ಮಾಲಿಂಗ ಅವರ ಬದಲಿ ಆಟನಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಅವರಂತಹ ಬೌಲರ್ ಸ್ಥಾನದಲ್ಲಿ ನಾನಿರುವುದು ನಿಜಕ್ಕೂ ಅದ್ಭುತವಾಗಿದೆ ಎಂದಿರುವ ಅವರು, ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರಿತ್ ಬುಮ್ರಾ ಅವರಂತಹ ಅತ್ಯುತ್ತಮ ಆಟಗಾರರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಬೌಲರ್‌ಗಳಿಗೆ ಐಪಿಎಲ್ ಉತ್ತಮ ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.