ETV Bharat / sports

ಆಸೀಸ್​​​ ವಿರುದ್ಧ ಶತಕ ಸಿಡಿಸಿದ ಬೆನ್ನಲ್ಲೇ ಭಾರತ ಪ್ರವಾಸಕ್ಕೆ ಹರಿಣ ಪಡೆ ಸೇರಿದ ಸ್ಫೋಟಕ ಬ್ಯಾಟ್ಸ್​ಮನ್​​​

author img

By

Published : Mar 7, 2020, 8:41 PM IST

ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ ಏಕಾಂಗಿಯಾಗಿ ಶತಕ ಸಿಡಿಸಿ ದಕ್ಷಿಣ ಆಫ್ರಿಕಾಗೆ ಸರಣಿ ಗೆಲ್ಲಿಸಿಕೊಟ್ಟಿದ್ದ ಜನ್ನೆಮಾನ್​ ಮಲಾನ್​ರನ್ನು ಭಾರತದ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಘೋಷಿಸಿದೆ.

Janneman Malan included SA team
ಜೆ ಮಲಾನ್​ ಭಾರತ ಪ್ರವಾಸಕ್ಕೆ ಆಯ್ಕೆ

ಕೇಪ್​ಟೌನ್​: ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಈ ಮೊದಲು 15 ಆಟಗಾರರ ತಂಡ ಪ್ರಕಟಿಸಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಮತ್ತೊಬ್ಬ ಸ್ಫೋಟಕ ಆಟಗಾರನನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.

ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ ಏಕಾಂಗಿಯಾಗಿ ಶತಕ ಸಿಡಿಸಿ ದಕ್ಷಿಣ ಆಫ್ರಿಕಾಗೆ ಸರಣಿ ಗೆಲ್ಲಿಸಿಕೊಟ್ಟಿದ್ದ ಜನ್ನೆಮಾನ್​ ಮಲಾನ್​ರನ್ನು ಭಾರತದ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಘೋಷಿಸಿದೆ.

23 ವರ್ಷದ ಜನ್ನೆಮಾನ್​ ಮಲಾನ್​ ದಕ್ಷಿಣ ಆಫ್ರಿಕಾ ಪರ ಕೇವಲ 3 ಏಕದಿನ ಪಂದ್ಯ ಹಾಗೂ 2 ಟಿ-20 ಪಂದ್ಯವನ್ನಾಡಿದ್ದಾರೆ. ಒಟ್ಟು 152 ರನ್ ​ಗಳಿಸಿದ್ದು, ಒಂದು ಶತಕ ಸೇರಿದೆ.

ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದು, ಡುಪ್ಲೆಸಿಸ್​​ ಕೂಡ ಟೀಂ ಇಂಡಿಯಾ ವಿರುದ್ಧದ ಸರಣಿಗಾಗಿ ಆಯ್ಕೆಯಾಗಿದ್ದರು.

ಮಾರ್ಚ್​​ 12ರಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಧರ್ಮಶಾಲಾ, ತದನಂತರ ಮಾರ್ಚ್​ 12ರಂದು ಲಖನೌ ಹಾಗೂ ಕೊನೆ ಏಕದಿನ ಪಂದ್ಯ ಮಾರ್ಚ್​​ 18ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.

ತಂಡ ಇಂತಿದೆ:

ಕ್ವಿಂಟನ್ ಡಿಕಾಕ್​(ಕ್ಯಾಪ್ಟನ್​), ಟೆಂಬಾ ಬಾವುಮಾ, ರಾಸ್ಸಿ ವಾನ್​ ಡೆರ್​ ಡುಸೆನ್, ಡುಪ್ಲೆಸಿಸ್​, ಕೈಲ್​ ವೆರೆನ್ನೆ, ಹೆನ್ರಿಕ್​​ ಕ್ಲಾಸೆನ್​, ಡೇವಿಡ್​ ಮಿಲ್ಲರ್​, ಜಾನ್​-ಜಾನ್​ ಸ್ಮರ್ಟ್ಸ್​, ಆಂಡಿಲೆ ಫೆಹ್ಲುಕ್ವಾಯೋ, ಲುಂಗಿ ಎನ್​ಗಿಡಿ, ಲುಥೋ ಸಿಪಮ್ಲಾ, ಬ್ಯೂರನ್​ ಹೆಂಡ್ರಿಕ್ಸ್​, ಅನ್ರಿಕ್​ ನಾರ್ಟ್ಜೆ, ಜಾರ್ಜ್​​ ಲಿಂಡೆ, ಕೇಶ್​ ಮಹಾರಾ, ಜನ್ನೆಮಾನ್​ ಮಲಾನ್​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.