ETV Bharat / sports

ಪಾಕ್ ವಿರುದ್ಧ ಭರ್ಜರಿ ಜಯ: ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್ ಮಾಡಿದ ಕಿವೀಸ್ - ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ

362 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್​ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಕೇವಲ 186 ರನ್​ಗಳಿಗ್ ಸರ್ವಪತನ ಕಂಡು, ಇನ್ನಿಂಗ್ಸ್ ಮತ್ತು 176 ರನ್​ಗಳಿಂದ ಕಿವೀಸ್ ತಂಡಕ್ಕೆ ಶರಣಾಯಿತು.

Jamieson bowls NZ to 2nd test
ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್ ಮಾಡಿದ ಕಿವೀಸ್
author img

By

Published : Jan 6, 2021, 1:17 PM IST

ಕ್ರೈಸ್ಟ್‌ಚರ್ಚ್(ನ್ಯೂಜಿಲ್ಯಾಂಡ್): ಕಿವೀಸ್ ವೇಗಿ ಕೈಲ್ ಜಾಮಿಸನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲೆ ಅತ್ಯುತ್ತಮವಾಗಿ ಸ್ಪೆಲ್​ ಮಾಡಿ, 48 ರನ್​ಗಳಿಗೆ 6 ವಿಕೆಟ್ ಪಡೆದ ಪರಿಣಾಮ ನ್ಯೂಜಿಲ್ಯಾಂಡ್​, ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಇನ್ನಿಂಗ್ಸ್ ಮತ್ತು 176 ರನ್‌ಗಳಿಂದ ಸೋಲಿಸಿತು

362 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್​ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಕೇವಲ 186 ರನ್​ಗಳಿಗ್ ಸರ್ವಪತನ ಕಂಡು, ಇನ್ನಿಂಗ್ಸ್ ಮತ್ತು 176 ರನ್​ಗಳಿಂದ ಕಿವೀಸ್ ತಂಡಕ್ಕೆ ಶರಣಾಯಿತು.

  • New Zealand win by an innings and 176 runs 🌟

    An all-round performance has helped 🇳🇿 to a big victory over Pakistan in the second Test.

    They take the series 2-0 👏 pic.twitter.com/SuySqGLpHe

    — ICC (@ICC) January 6, 2021 " class="align-text-top noRightClick twitterSection" data=" ">

ಪಾಕಿಸ್ತಾನ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 297 ರನ್​ಗಳಿಗೆ ಸರ್ವಪತನ ಕಂಡಿತ್ತು. ನಂತರ ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್​ (238) ಮತ್ತು ಹೆನ್ರಿ ನಿಕೋಲ್ಸ್(157) ಅವರ ಅಮೋಘ ಪ್ರದರ್ಶನದಿಂದಾಗಿ ಮೊದಲ ಇನ್ನಿಂಗ್ಸ್​ನಲ್ಲಿ 6 ವಿಕೆಟ್ ಕಳೆದುಕೊಂಡು 659 ರನ್​ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

362 ರನ್​ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ದ್ವಿತೀಯ ಇನ್ನಿಂಗ್ಸ್​​ನಲ್ಲಿ 186 ರನ್​ಗಳಿಗೆ ಆಲ್​ಔಟ್​ ಆಗಿದೆ. ಕಿವೀಸ್ ಪರ ಕೈಲ್ ಜಾಮಿಸನ್ 6 ವಿಕೆಟ್ ಪಡೆದ್ರೆ, ಟ್ರಂಟ್ ಬೋಲ್ಟ್​ 3 ವಿಕೆಟ್ ಪಡೆದು ಕೊಂಡಿದ್ದಾರೆ.

ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ತಂಡವಾಗಿರುವ ನ್ಯೂಜಿಲ್ಯಾಂಡ್, ಪಾಕ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಗೆಲುವು ಸಾಧಿಸಿದ್ದು, ಈ ಟೆಸ್ಟ್ ಅನ್ನು ಗೆಲ್ಲುವ ಮೂಲಕ ಮತ್ತೊಂದು ಕ್ಲೀನ್​ಸ್ವೀಪ್ ಮಾಡಿದೆ. ಈ ಹಿಂದೆ ವೆಸ್ಟ್​ ಇಂಡೀಸ್ ವಿರುದ್ಧವು ಕಿವೀಸ್ 3-0ಯಿಂದ ಸರಣಿ ಕ್ಲೀನ್‍ಸ್ವೀಪ್ ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.