ETV Bharat / sports

ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ:​ ಉತ್ತರಾಖಂಡ್​​​ ಕೋಚ್​ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಾಫರ್​ - ವಿಜಯ್ ಹಜಾರೆ ಕ್ರಿಕೆಟ್​ ಟ್ರೋಫಿ

ಫೆಬ್ರವರಿ 20ರಂದು ನಡೆಯುವ ವಿಜಯ್ ಹಜಾರೆ ಕ್ರಿಕೆಟ್​ ಟೂರ್ನಿಗಾಗಿ ತಂಡದ ಆಯ್ಕೆ ವಿಚಾರವಾಗಿ ಆಯ್ಕೆಗಾರರ ಜೊತೆ ಮನಸ್ತಾಪ ಎದುರಾಗಿದ್ದು, ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕ್ರಿಕೆಟ್​ ಅಸೋಸಿಯೇಷನ್​ ಆಫ್ ಉತ್ತರಾಖಂಡ್ ಕೂಡ ಜಾಫರ್​ ರಾಜೀನಾಮೆಯನ್ನು ಅಂಗೀಕರಿಸಿದೆ.

ಉತ್ತರಖಂಡದ ಕೋಚ್​ ಸ್ಥಾನಕ್ಕೆ ರಾಜೀನಾಮೆ
ಉತ್ತರಖಂಡದ ಕೋಚ್​ ಸ್ಥಾನಕ್ಕೆ ರಾಜೀನಾಮೆ
author img

By

Published : Feb 9, 2021, 8:30 PM IST

ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟರ್​ ವಾಸೀಮ್ ಜಾಫರ್​ ಉತ್ತರಾಖಾಂಡ್​​ನ ಮುಖ್ಯ ಕೋಚ್​ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಫೆಬ್ರವರಿ 20ರಂದು ನಡೆಯುವ ವಿಜಯ್ ಹಜಾರೆ ಕ್ರಿಕೆಟ್​ ಟೂರ್ನಿಗಾಗಿ ತಂಡದ ಆಯ್ಕೆ ವಿಚಾರವಾಗಿ ಆಯ್ಕೆಗಾರರ ಜೊತೆ ಮನಸ್ತಾಪ ಎದುರಾಗಿದ್ದು, ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕ್ರಿಕೆಟ್​ ಅಸೋಸಿಯೇಷನ್​ ಆಫ್ ಉತ್ತರಾಖಂಡ್ ಕೂಡ ಜಾಫರ್​ ರಾಜೀನಾಮೆಯನ್ನು ಅಂಗೀಕರಿಸಿದೆ.

ತಂಡದಲ್ಲಿ ಕೆಲವು ಆಟಗಾರರಿಗೆ ಸಾಕಷ್ಟು ಸಾಮರ್ಥ್ಯವಿದೆ ಮತ್ತು ನನ್ನಿಂದ ತುಂಬಾ ಕಲಿಯಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೆ. ಆಯ್ಕೆದಾರರು ಮತ್ತು ಕಾರ್ಯದರ್ಶಿಗಳ ಮಧ್ಯಪ್ರವೇಶ ಮತ್ತು ಪಕ್ಷಪಾತದ ಕಾರಣದಿಂದ ಅರ್ಹರಲ್ಲದ ಆಟಗಾರರಿಗಾಗಿ ಮಣೆ ಹಾಕಲಾಗುತ್ತಿದೆ. ಸಾಮರ್ಥ್ಯವುಳ್ಳ ಆಟಗಾರರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ಜಾಫರ್ ಕ್ರಿಕೆಟ್​ ಸಂಸ್ಥೆಗೆ ಮಾಡಿರುವ ಇ-ಮೇಲ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ...ಘರ್ಜಿಸಲು ಸಿದ್ದರಾದ ಹಳೆಯ ಹುಲಿಗಳು.. ರೋಡ್​ ಸೇಫ್ಟಿ ವರ್ಲ್ಡ್​​​ ಸೀರೀಸ್ ಮಾ.2ರಿಂದ ಪುನಾರಂಭ

ಆದರೆ, ಜಾಫರ್​ ಆರೋಪವನ್ನು ತಳ್ಳಿಹಾಕಿರುವ ಸಿಎಯು ಕಾರ್ಯದರ್ಶಿ ಮಹಿಮ್ ವರ್ಮಾ, ಜಾಫರ್​ ಕೋಚ್​ ಆಗಿ ಆಯ್ಕೆಯಾದ ಮೇಲೆ ಅವರು ಕೇಳಿದ ಎಲ್ಲವನ್ನು ಬೋರ್ಡ್​ ಒದಗಿಸಿದೆ. ಆಯ್ಕೆ ವಿಚಾರದಲ್ಲಿ ಅವರ ಮಧ್ಯಪ್ರವೇಶ ತುಂಬಾ ಹೆಚ್ಚಾಗುತ್ತಿದೆ ಎಂದಿದ್ದಾರೆ.

ಸಯ್ಯದ್ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ತಂಡ ನಮ್ಮ ನಿರೀಕ್ಷೆಯನ್ನು ತಲುಪುವಲ್ಲಿ ವಿಫಲವಾಗಿದೆ. ಹಾಗಾಗಿ ಆಯ್ಕೆ ಸಮಿತಿ ಜಾಫರ್ ತಾವಾಗಿಯೇ ಆಯ್ಕೆ ಮಾಡಿಕೊಂಡಿದ್ದ ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಬೇರೆ ಆಟಗಾರರಿಗೆ ಅವಕಾಶ ನೀಡಲು ಬಯಸಿತ್ತು. ಆಯ್ಕೆದಾರರು ಇರುವಾಗ ಕೋಚ್​ ಆದವರು ಅವರ ಕೆಲಸ ನಿರ್ವಹಿಸುವುದನ್ನು ಬಿಟ್ಟು ಮಧ್ಯೆ ತಲೆ ಹಾಕಬಾರದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.