ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ನ ಮೂರನೇ ದಿನ ಬ್ಯಾಟಿಂಗ್ ಮಾಡುವ ವೇಳೆ ಹೆಬ್ಬೆರೆಳು ಮುರಿತಕ್ಕೊಳಗಾಗಿರುವ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಮುಂಬರುವ ಇಂಗ್ಲೆಡ್ ಟೆಸ್ಟ್ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಶನಿವಾರ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಚೆಂಡು ಜಡೇಜಾ ಕೈಗೆ ಬಡಿದಿತ್ತು. ತಕ್ಷಣ ಚಿಕಿತ್ಸೆ ಪಡೆದ ಅವರು ಬ್ಯಾಟಿಂಗ್ ಮುಂದುವರಿಸಿ ಅಜೇಯ 28 ರನ್ಗಳಿಸಿದ್ದರು. ನಂತರ ಸ್ಕ್ಯಾನಿಂಗ್ ಒಳಗಾದ ಸಂದರ್ಭದಲ್ಲಿ ಹೆಬ್ಬರಳಿನ ಮೂಳೆ ಮುರಿದಿರುವುದು ಖಚಿತವಾಗಿದ್ದರಿಂದ ಅವರಿಗೆ ಕಡಿಮೆ ಎಂದರೂ 5-6 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ತಿಳಿಸಿತ್ತು.
ಹಾಗಾಗಿ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಪಂದ್ಯವಲ್ಲದೆ ಫೆಬ್ರವರಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಲಿಗೂ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಆದರೆ ನಾಳೆ ಭಾರತ ತಂಡ ಗೆಲ್ಲಲು 309ರನ್ಗಳನ್ನು ಗಳಿಸಬೇಕಿದೆ. ಇದು ಅಸಾಧ್ಯವಾಗಿರುವುದರಿಂದ ಪಂದ್ಯವನ್ನು ಡ್ರಾ ಸಾಧಿಸುವುದಕ್ಕಾದರೂ ತಂಡದ ಎಲ್ಲಾ ಆಟಗಾರರಿಂದ 90 ಓವರ್ ಪೂರ್ಣಗೊಳಿಸಬೇಕಿದೆ. ಒಂದು ವೇಳೆ ಎಲ್ಲಾ ಬ್ಯಾಟ್ಸ್ಮನ್ಗಳು ಔಟಾದರೆ ಸೋಲಿನಿಂದ ತಂಡವನ್ನು ಪಾರು ಮಾಡಲು ಜಡೇಜಾ ನೋವು ನಿವಾರಕ ಇಂಜೆಕ್ಷನ್ ಪಡೆದು ಆಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಗಾಯದ ಕಾರಣ ಎರಡನೇ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಮಾಡದ ಲಾಭವನ್ನು ಸಂಪೂರ್ಣವಾಗಿ ಬಳಿಸಿಕೊಂಡ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ನಲ್ಲಿ ಸುಲಭವಾಗಿ 312 ರನ್ಗಳಿಸಿ ಡಿಕ್ಲೇರ್ ಘೋಷಿಸಿಜಕೊಂಡು 407 ರನ್ಗಳಿಗೆ ಬೃಹತ್ ಟಾರ್ಗೆಟ್ ನೀಡಿತ್ತು.
ಭಾರತ ತಂಡ 4ನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ಗಳಿಸಿದೆ. ರೋಹಿತ್ 52 ಹಾಗೂ ಶುಬ್ಮನ್ ಗಿಲ್ 31 ರನ್ಗಳಿಸಿ ಔಟಾದರೆ, ರಹಾನೆ 4 ಮತ್ತು ಪೂಜಾರ 9 ರನ್ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.