ETV Bharat / sports

ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಬಾಕಿಯಿರುವಂತೆಯೇ ಏಕದಿನ ಸರಣಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ - ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ ಏಕದಿನ ಸರಣಿ

ಟಿ20 ಸರಣಿಯನ್ನು 2-1ರಲ್ಲಿ ಕಳೆದುಕೊಂಡಿದ್ದ ಆಫ್ರಿಕಾ ತಂಡ ಏಕದಿನ ಸರಣಿಯಲ್ಲಿ ತಿರುಗಿ ಬಿದ್ದಿದ್ದು ,ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ಏಕದಿನ ಸರಣಿ ವಶಪಡಿಸಿಕೊಂಡಿದೆ.

South Africa beat Australia
ಆಸ್ಟ್ರೇಲಿಯಾ ವಿರದ್ಧ ಸರಣಿ ಗೆದ್ದ ದಕ್ಷಿಣ
author img

By

Published : Mar 5, 2020, 4:45 PM IST

ಬ್ಲೂಮ್‌ಫಾಂಟೈನ್(ದಕ್ಷಿಣ ಆಫ್ರಿಕಾ): ಸತತ ಸರಣಿ ಸೋಲುಗಳಿಂದ ಬಳಲಿದ್ದ ದಕ್ಷಿಣ ಆಫ್ರಿಕಾ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್​ಗಳಿಂದ ಬಗ್ಗು ಬಡಿದು ಇನ್ನೂ ಒಂದು ಪಂದ್ಯವಿರುವಂತೆಯೇ 2-0 ಮೂಲಕ ಸರಣಿ ವಶಪಡಿಸಿಕೊಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ 271 ರನ್ ​ಗಳಿಸಿತ್ತು. ನಾಯಕ ಆ್ಯರೋನ್ ಫಿಂಚ್​ 69, ಡಾರ್ಸಿ ಶಾರ್ಟ್​ 69, ಡೇವಿಡ್​ ವಾರ್ನರ್​ 35, ಮಿಚೆಲ್ ಮಾರ್ಷ್​ 36 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.

ದಕ್ಷಿಣ ಆಫ್ರಿಕಾ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ಲುಂಗಿ ಎಂಗಿಡಿ 58 ರನ್​ ನೀಡಿ 6 ವಿಕೆಟ್​ ಪಡೆದರು. ಆ್ಯನ್ರಿಚ್​ ನಾರ್ಟ್ಜ್​ 2, ಪೆಹ್ಲುಕ್ವಾಯೋ ಹಾಗೂ ತಬ್ರಾಯಿಜ್ ಶಮ್ಸಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

272 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮೊದಲ ಓವರ್​ನಲ್ಲೇ ನಾಯಕ ಡಿಕಾಕ್(0) ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಎರಡನೇ ವಿಕೆಟ್​ಗೆ ಜೊತೆಯಾದ ಜೆಜೆ ಸ್ಮಟ್ಸ್​(41) ಹಾಗೂ ಜೆನ್ನೆಮಾನ್ ಮಲಾನ್​(129) 91 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.

ಸ್ಮಟ್ಸ್​ ಔಟಾದ ನಂತರ ಬಂದ ವಿರೆಯಾನ್ನೆ ಕೇವಲ 3 ರನ್​​ಗಳಿಸಿ ಔಟಾದರು. ಆದರೆ ನಾಲ್ಕನೇ ವಿಕೆಟ್​ ಒಂದಾದ ಮಲಾನ್​-ಕ್ಲಾಸೆನ್​ ಜೋಡಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಈ ಜೋಡಿ 4ನೇ ವಿಕೆಟ್​ಗೆ 81 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹ ತಂದರು. ಕ್ಲಾಸೆನ್​ 52 ಎಸೆತಗಳಲ್ಲಿ 51 ರನ್​ಗಳಿಸಿದರು.

ಆರಂಭಿಕನಾಗಿ ಕಣಕ್ಕಿಳಿದ ಮಲಾನ್​ 139 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 7 ಬೌಂಡರಿ ನೆರವಿನಿಂದ 129 ರನ್​ಗಳಿಸಿ ಔಟಾಗದೆ ಉಳಿದರು. ಅಲ್ಲದೆ ಮಿಲ್ಲರ್(37)​ ಜೊತೆಗೆ 5ನೇ ವಿಕೆಟ್​ಗೆ ಮುರಿಯದೆ 90 ರನ್​ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲ ಪಂದ್ಯವನ್ನು 74 ರನ್​ಗಳಿಂದ ಗೆದ್ದಿದ್ದ ಹರಿಣಗಳು ಎರಡನೇ ಪಂದ್ಯವನ್ನು ಗೆದ್ದು ವರ್ಷದ ಬಳಿಕ ಮೊದಲ ಸರಣಿ ಗೆದ್ದರು. ಈ ಮಧ್ಯೆ ಶ್ರೀಲಂಕಾ ಹಾಗೂ ಭಾರತದ ವಿರುದ್ಧ ಟೆಸ್ಟ್​ ಸರಣಿ, ಇಂಗ್ಲೆಂಡ್​ ವಿರುದ್ಧ ಟಿ20 ಹಾಗೂ ಟೆಸ್ಟ್​ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಕಳೆದುಕೊಂಡಿದ್ದರು.

ಇನ್ನು ಆಸ್ಟ್ರೇಲಿಯಾ ಸತತ 2 ಏಕದಿನ ಸರಣಿಯನ್ನ ಕಳೆದುಕೊಂಡಂತಾಯಿತು. ಜನವರಿಯಲ್ಲಿ ನಡೆದಿದ್ದ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ 2-1ರಲ್ಲಿ ಸೋಲು ಕಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.