ETV Bharat / sports

ವಿಜಯ್ ಹಜಾರೆ ಸೆಮಿಫೈನಲ್ಸ್:​ ಪೃಥ್ವಿಯ ಮುಂಬೈ vs ಪಡಿಕ್ಕಲ್​ರ ಕರ್ನಾಟಕ ನಡುವೆ ಕಾದಾಟ - ಗುಜರಾತ್ vs ಉತ್ತರ ಪ್ರದೇಶ

ದೇವದತ್​ ಪಡಿಕ್ಕಲ್ ಟೂರ್ನಿಯಲ್ಲಿ ಸತತ ನಾಲ್ಕು ಶತಕಗಳನ್ನು ಸಿಡಿಸುವ ಮೂಲಕ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಡಿಕ್ಕಲ್​ 673 ರನ್​ ಸಿಡಿಸಿ ಟೂರ್ನಿಯ ಗರಿಷ್ಠ ಸ್ಕೋರರ್​ ಆಗಿದ್ದರೆ, ಮುಂಬೈ ತಂಡದ ನಾಯಕ ಪೃಥ್ವಿ ಶಾ 3 ಶತಕಗಳ(ಒಂದು ದ್ವಿಶತಕ) 589 ರನ್​ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.

ಮುಂಬೈ vs ಕರ್ನಾಟಕ
ಪೃಥ್ವಿ ಶಾ vs ದೇವದತ್ ಪಡಿಕ್ಕಲ್
author img

By

Published : Mar 10, 2021, 10:01 PM IST

ನವದೆಹಲಿ: ಗುರುವಾರ ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವೆ ವಿಜಯ ಹಜಾರೆ ಟ್ರೋಫಿ ಸೆಮಿಫೈನಲ್​ ಪಂದ್ಯ ನಡೆಯಲಿದೆ. ಈ ಪಂದ್ಯ ಟೂರ್ನಿಯ ಗರಿಷ್ಟ ರನ್​ಗಳಿಸಿದವರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ಯುವ ಆಟಗಾರರಾದ ದೇವದತ್​ ಪಡಿಕ್ಕಲ್ ಮತ್ತು ಪೃಥ್ವಿ ಶಾ ನಡುವಿನ ಹೋರಾಟ ಎಂದೇ ಬಿಂಬಿಸಲಾಗುತ್ತಿದೆ.

ದೇವದತ್​ ಪಡಿಕ್ಕಲ್ ಟೂರ್ನಿಯಲ್ಲಿ ಸತತ ನಾಲ್ಕು ಶತಕಗಳನ್ನು ಸಿಡಿಸುವ ಮೂಲಕ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಡಿಕ್ಕಲ್​ 673 ರನ್​ ಸಿಡಿಸಿ ಟೂರ್ನಿಯ ಗರಿಷ್ಠ ಸ್ಕೋರರ್​ ಆಗಿದ್ದರೆ, ಮುಂಬೈ ತಂಡದ ನಾಯಕ ಪೃಥ್ವಿ ಶಾ 3 ಶತಕಗಳ(ಒಂದು ದ್ವಿಶತಕ) 589 ರನ್​ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.

ಶಾ, ಶ್ರೇಯಸ್​ ಅಯ್ಯರ್​ ಅನುಪಸ್ಥಿತಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೆ ಬಲಗೈ ಆಟಗಾರ 227 ರನ್​ ಸಿಡಿಸುವ ಮೂಲಕ ಟೂರ್ನಿಯ ಇತಿಹಾಸದಲ್ಲೇ ವೈಯಕ್ತಿಕ ಗರಿಷ್ಠ ರನ್​ ಸಿಡಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅವರು ಪುದುಚೇರಿ ವಿರುದ್ಧ ದ್ವಿಶತಕ ದಾಖಲಿಸಿದ್ದರು. ಅಲ್ಲದೆ ಕ್ವಾರ್ಟರ್​ ಫೈನಲ್​ನಲ್ಲೂ ಅಜೇಯ 185 ರನ್​ಗಳಿಸಿ ಮುಂಬೈ ಸೆಮಿಫೈನಲ್ ಪ್ರವೇಶಿಸಲು ನೆರವಾಗಿದ್ದರು.

ಈ ಇಬ್ಬರು ಯಂಗ್ ಟೈಗರ್ಸ್​ ನಾಳಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಈ ಪಂದ್ಯದಲ್ಲಿ ರನ್​ಗಳ ಮಳೆ ಸುರಿಯಲಿದೆ ಎಂದು ನಿರೀಕ್ಷಿಸಲಾಗಿದ್ದು, ಯಾರು ಭಾನುವಾರ ನಡೆಯುವ ಫೈನಲ್ ಪಂದ್ಯಕ್ಕೆ ತಮ್ಮ ತಂಡವನ್ನು ಕೊಂಡೊಯ್ಯಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ:ಸತತ 4ನೇ ಶತಕ ಸಿಡಿಸಿ ಸಂಗಕ್ಕಾರ ದಾಖಲೆ ಸರಿಗಟ್ಟಿದ ಪಡಿಕ್ಕಲ್

ಇನ್ನು ಕರ್ನಾಟಕ ತಂಡದಲ್ಲಿ ಪಡಿಕ್ಕಲ್​ ಜೊತೆಯಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಆರ್.​ ಸಮರ್ಥ್​ ಕೂಡ ತಂಡದ ಬಲವಾಗಿದ್ದಾರೆ, ಇವರು 3 ಶತಕಗಳ ಸಹಿತ 605 ರನ್​ಗಳಿಸಿ ಗರಿಷ್ಠ ರನ್​ಗಳಿಸಿದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ಅನುಭವಿ ಮನೀಶ್ ಪಾಂಡೆ ತಂಡಕ್ಕೆ ಸೇರ್ಪಡೆಯಾಗಿರುವುದು ತಂಡದ ಬಲವನ್ನು ಹೆಚ್ಚಿಸಿದೆ.

ಮುಂಬೈ ತಂಡಕ್ಕೆ ಶಾ ಹೊರೆತುಪಡಿಸಿದರೆ, ಶಿವಂ ದುಬೆ, ಆದಿತ್ಯ ತಾರೆ, ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಬಲವಾಗಿದ್ದರೆ, ದವಳ್ ಕುಲಕರ್ಣಿ, ಮುಲಾನಿ, ಪ್ರಶಾಂತ್ ಸೋಲಂಕಿ ತಂಡದ ಬೌಲಿಂಗ್ ವಿಭಾಗದಲ್ಲಿ ಆಧಾರ ಸ್ಥಂಭವಾಗಿದ್ದಾರೆ.

ನಾಳೆ ಮುಂಬೈ -ಕರ್ನಾಟಕ ಪಂದ್ಯದ ಜೊತೆಗೆ ಗುಜರಾತ್ ತಂಡ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಎದುರಿಸುತ್ತಿದೆ.

ಇದನ್ನು ಓದಿ: ಐಸಿಸಿ ವಿಶ್ವಕಪ್​ಗಳ ನಡುವೆ​ ಅಂತರ ಕಾಯ್ದುಕೊಳ್ಳುವ ಮೂಲಕ ಅದರ ಮೋಡಿ ಕಾಪಾಡಿಕೊಳ್ಳಬೇಕು: ರೋಹಿತ್ ಶರ್ಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.