ETV Bharat / sports

’’ಇದು ಬಹುತೇಕ ಸಮಯ ಬಂದಿದೆ’’:  ಐಪಿಎಲ್​ಗೆ ಜಸ್ಪ್ರಿತ್ ಬುಮ್ರಾ ಉತ್ಸುಕ - ಜಸ್ಪ್ರಿತ್ ಬುಮ್ರಾ

ಐಪಿಎಲ್​ನ 13ನೇ ಆವೃತ್ತಿಗೆ ಉತ್ಸುಕರಾಗಿರುವುದಾಗಿ ಟೀಂ ಇಂಡಿಯಾ ವೇಗಿ ಬುಮ್ರಾ ಮತ್ತು ಭಾರತದ ಟೆಸ್ಟ್ ಉಪನಾಯಕ ಅಜಿಂಕ್ಯಾ ರಹಾನೆ ಸಂತಸ ವ್ಯಕ್ತಪಡಿಸಿದ್ದಾರೆ.

Jasprit Bumrah shares excitement ahead of IPL 13
ಐಪಿಎಲ್​ಗೆ ಜಸ್ಪ್ರಿತ್ ಬುಮ್ರಾ ಉತ್ಸುಕ
author img

By

Published : Aug 7, 2020, 12:43 PM IST

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್​ನ 13 ನೇ ಆವೃತ್ತಿ ಪ್ರಾರಂಭಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ ಎಂದು ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ ತಮ್ಮ ಉತ್ಸಾಹ ಹಂಚಿಕೊಂಡಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‌ನಿಂದ ಮುಂದೂಡಲ್ಪಟ್ಟ ನಂತರ ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುಎಇನಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ.

ಮುಂಬೈ ಇಂಡಿಯನ್ಸ್ ಜರ್ಸಿಯಲ್ಲಿ ವಿಕೆಟ್ ಪಡೆದ ನಂತರ ಸಂಭ್ರಮಿಸುತ್ತಿರುವ ಫೋಟೋದೊಂದಿಗೆ ಬುಮ್ರಾ ಟ್ವೀಟ್ ಮಾಡಿದ್ದು "ಬಹುತೇಕ ಸಮಯ ಬಂದಿದೆ" ಎಂದು ಹೇಳಿದ್ದಾರೆ. ಕಳೆದ ಸೀಸನ್​ನಲ್ಲಿ ಮುಂಬೈ ದಾಖಲೆಯ ನಾಲ್ಕನೇ ಪ್ರಶಸ್ತಿ ಗೆಲ್ಲುವಲ್ಲಿ ಬುಮ್ರಾ ನಿರ್ಣಾಯಕ ಪಾತ್ರ ವಹಿಸಿದ್ದರು.

Jasprit Bumrah shares excitement ahead of IPL 13
ಐಪಿಎಲ್​ನಲ್ಲಿ ಬುಮ್ರಾ ಸಾಧನೆ

ಬುಧವಾರ ಭಾರತದ ಟೆಸ್ಟ್ ಉಪನಾಯಕ ಅಜಿಂಕ್ಯಾ ರಹಾನೆ ಕೂಡ ಐಪಿಎಲ್ 2020 ಪರ ಸಂಭ್ರಮ ವ್ಯಕ್ತಪಡಿಸಿದ್ದರು.

ರಹಾನೆ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್​ಗೆ ಬಿಟ್ಟುಕೊಟ್ಟಿತ್ತು. "ಈ ವರ್ಷ ಐಪಿಎಲ್​ನಲ್ಲಿ ನನಗೆ ಹೊಸ ಆರಂಭ. ಈ ಸೀಸನ್​ಗಾಗಿ ಎದುರು ನೋಡುತ್ತಿದ್ದೇನೆ" ಎಂದು ರಹಾನೆ ಇನ್​ಸ್ಟಾಗ್ರಾಂ ಪೋಸ್ಟ್ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.