ETV Bharat / sports

ಪದಾರ್ಪಣೆ ಮಾಡಿದ 14 ವರ್ಷಗಳ ನಂತರ ಈ ಸಾಧನೆ ಮಾಡಿದ ಇಶಾಂತ್ ಶರ್ಮಾ!

author img

By

Published : Feb 25, 2021, 5:10 PM IST

ಇಶಾಂತ್​ ಶರ್ಮಾ 100 ಟೆಸ್ಟ್​, 80 ಏಕದಿನ ಪಂದ್ಯ ಮತ್ತು 14 ಟಿ-20 ಪಂದ್ಯಗಳನ್ನಾಡಿದ್ದಾರೆ. ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 3ನೇ ಹಾಗೂ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಜಾಕ್​ ಲೀಚ್​ ಅವರ ಬೌಲಿಂಗ್​ನಲ್ಲಿ ಸಿಕ್ಸರ್​ ಸಿಡಿಸಿದರು, ಇದು ಅವರ ಮೊದಲ ಅಂತಾರಾಷ್ಟ್ರೀಯ ಸಿಕ್ಸರ್​ ಆಗಿದೆ.

ಇಶಾಂತ್ ಶರ್ಮಾ ಮೊದಲ ಸಿಕ್ಸರ್​
ಇಶಾಂತ್ ಶರ್ಮಾ ಮೊದಲ ಸಿಕ್ಸರ್​

ಅಹ್ಮದಾಬಾದ್​: ಭಾರತ ತಂಡದ ಅನುಭವಿ ವೇಗಿ ಇಶಾಂತ್​ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ 14 ವರ್ಷಗಳಲ್ಲಿ 194 ಪಂದ್ಯಗಳನ್ನಾಡಿದ ನಂತರ ಮೊದಲ ಸಿಕ್ಸರ್​ ಸಿಡಿಸಿದ್ದಾರೆ.

ಇಶಾಂತ್​ ಶರ್ಮಾ 100 ಟೆಸ್ಟ್​, 80 ಏಕದಿನ ಪಂದ್ಯ ಮತ್ತು 14 ಟಿ-20 ಪಂದ್ಯಗಳನ್ನಾಡಿದ್ದಾರೆ. ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 3ನೇ ಹಾಗೂ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಜಾಕ್​ ಲೀಚ್​ ಅವರ ಬೌಲಿಂಗ್​ನಲ್ಲಿ ಸಿಕ್ಸರ್​ ಸಿಡಿಸಿದರು, ಇದು ಅವರ ಮೊದಲ ಅಂತಾರಾಷ್ಟ್ರೀಯ ಸಿಕ್ಸರ್​ ಆಗಿದೆ.

  • Ishant Sharma after playing 194 international matches for India (100 in Tests, 80 ODIs, 14 T20Is) has just hit his first six of his career after facing 2677 balls! #IndvEng#IndvsEng#daynightTest

    — Mohandas Menon (@mohanstatsman) February 25, 2021 " class="align-text-top noRightClick twitterSection" data=" ">

ಒಟ್ಟಾರೆ, 194 ಪಂದ್ಯಗಳಲ್ಲಿ 2,677 ಎಸೆತಗಳನ್ನೆದುರಿಸಿದ ನಂತರ ಇಶಾಂತ್ ಶರ್ಮಾ ಸಿಕ್ಸರ್ ಸಿಡಿಸಿದ್ದಾರೆ. ವಿಶೇಷವೆಂದರೆ ಸ್ಫೋಟಕ ಬ್ಯಾಟ್ಸ್​ಮನ್​​ಗಳಾದ ರೋಹಿತ್ ಶರ್ಮಾ, ರಿಷಭ್ ಪಂತ್, ಬೆನ್​ ಸ್ಟೋಕ್ಸ್​, ಬೈರ್ಸ್ಟೋವ್​ ಅಂತಹವರೆ ಈ ಪಂದ್ಯದಲ್ಲಿ ಸಿಕ್ಸರ್​ ಸಿಡಿಸುವಲ್ಲಿ ವಿಫಲರಾಗಿದ್ದರು. ಇಶಾಂತ್ ಶರ್ಮಾ ಸಿಡಿಸಿದ ಸಿಕ್ಸರ್​ ಇಡೀ ಪಂದ್ಯದ ಏಕೈಕ ಸಿಕ್ಸರ್​ ಅಗಿತ್ತು.

100ನೇ ಟೆಸ್ಟ್​ ಪಂದ್ಯವನ್ನಾಡಿ ಭಾರತದ 2ನೇ ವೇಗದ ಬೌಲರ್​ ಎಂಬ ಖ್ಯಾತಿಗೆ ಪಾತ್ರವಾಗಿರುವ ಇಶಾಂತ್ ಶರ್ಮಾ, ಪಂದ್ಯದ ಮೊದಲ ವಿಕೆಟ್​ ಪಡೆದಿದ್ದರು. ಇದೀಗ ಪಂದ್ಯ ಮೊದಲ ಸಿಕ್ಸರ್​ ಕೂಡ ಅವರ ಬ್ಯಾಟ್​ನಿಂದ ಸಿಡಿದಿದ್ದು ವಿಶೇಷವಾಗಿತ್ತು.

ಇದನ್ನು ಓದಿ:ರೂಟ್, ಜ್ಯಾಕ್​ ಲೀಚ್ ಮಾರಕ ಬೌಲಿಂಗ್​ ದಾಳಿ: 149ಕ್ಕೆ ಆಲೌಟ್ ಆದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.