ಚೆನ್ನೈ: ಭಾರತದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಸೋಮವಾರ ಟೆಸ್ಟ್ ಕ್ರಿಕೆಟ್ನಲ್ಲಿ 300ನೇ ವಿಕೆಟ್ ಪಡೆಯುವ ಮೂಲಕ ದೇಶದ ಪರ ಈ ಸಾಧನೆ ಮಾಡಿದ 3ನೇ ವೇಗಿ ಹಾಗೂ ಒಟ್ಟಾರೆ 6ನೇ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಇಂಗ್ಲೆಂಡ್ ತಂಡದ ಡಾನ್ ಲಾರೆನ್ಸ್ ವಿಕೆಟ್ ಪಡೆಯುವ ಮೂಲಕ ಇಶಾಂತ್, ಕಪಿಲ್ ದೇವ್ (434) ಮತ್ತು ಜಹೀರ್ ಖಾನ್ (311) ಅವರ ಸಾಲಿಗೆ ಸೇರಿದರು. ಇಶಾಂತ್ ತಮ್ಮ 98ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. 2007ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಇಶಾಂತ್ 11 ಬಾರಿ 5 ವಿಕೆಟ್ ಮತ್ತು 10 ಬಾರಿ 4 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಒಟ್ಟಾರೆ ಪಂದ್ಯದಲ್ಲಿ ಒಮ್ಮೆ 10 ವಿಕೆಟ್ ಪಡೆದಿದ್ದಾರೆ.
-
Ishant Sharma becomes the third India pacer after Kapil Dev and Zaheer Khan to reach the 300-wicket mark in Tests 👏
— ICC (@ICC) February 8, 2021 " class="align-text-top noRightClick twitterSection" data="
What an achievement!#INDvENG pic.twitter.com/wEUPiCKHFf
">Ishant Sharma becomes the third India pacer after Kapil Dev and Zaheer Khan to reach the 300-wicket mark in Tests 👏
— ICC (@ICC) February 8, 2021
What an achievement!#INDvENG pic.twitter.com/wEUPiCKHFfIshant Sharma becomes the third India pacer after Kapil Dev and Zaheer Khan to reach the 300-wicket mark in Tests 👏
— ICC (@ICC) February 8, 2021
What an achievement!#INDvENG pic.twitter.com/wEUPiCKHFf
ಇಶಾಂತ್ ಈ ಸಾಧನೆ ಮಾಡಲು ಇತರೆ ಬೌಲರ್ಗಳಿಗಿಂತ ಹೆಚ್ಚು ಪಂದ್ಯಗಳನ್ನಾಡಿದ್ದಾರೆ. ಅಶ್ವಿನ್ 54 ಪಂದ್ಯಗಳಲ್ಲಿ 300 ವಿಕೆಟ್ ಪಡೆದಿದ್ದಾರೆ. ಅನಿಲ್ ಕುಂಬ್ಳೆ (66), ಹರ್ಭಜನ್ ಸಿಂಗ್ (72), ಕಪಿಲ್ ದೇವ್ (83) ಮತ್ತು ಜಹೀರ್ ಖಾನ್ (80) ನಂತರದ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ:ಭಾರತ vs ಇಂಗ್ಲೆಂಡ್ : ವಾಷಿಂಗ್ಟನ್ ‘ಸುಂದರ’ ಆಟ, 337 ಕ್ಕೆ ಭಾರತ ಆಲೌಟ್