ದುಬೈ: 13ನೇ ಆವೃತ್ತಿಯ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿಗೆ 201 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟಾಸ್ ಸೋತರು ಬ್ಯಾಟಿಂಗ್ ಇಳಿದ ಮುಂಬೈ ಆರಂಭದಲ್ಲೇ ನಾಯಕ ರೋಹಿತ್ ವಿಕೆಟ್ ಕಳೆದುಕೊಂಡರು ಉಳಿದ ಬ್ಯಾಟ್ಸ್ಮನ್ಗಳ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರನ್ಗಳಿಸಿದರು.
ರೋಹಿತ್ 2ನೇ ಓವರ್ನಲ್ಲೇ ಔಟಾದರೂ ದೃತಿಗೆಡದ ಡಿಕಾಕ್ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿ ಕೇವಲ 25 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 40 ರನ್ಗಳಿಸಿದರು. ಇವರು ಸೂರ್ಯಕುಮಾರ್ ಯಾದವ್ ಜೊತೆ 62 ರನ್ಗಳ ಜೊತೆಯಾಟ ನೀಡಿದರು.
-
A fine half-century from Suryakumar Yadav & Ishan Kishan and Hardik Pandya's late blitz guide #MumbaiIndians to a mammoth total. #DelhiCapitals chasing this down?🤔#MIvDC #Dream11IPL pic.twitter.com/ttUmKx8SVu
— IndianPremierLeague (@IPL) November 5, 2020 " class="align-text-top noRightClick twitterSection" data="
">A fine half-century from Suryakumar Yadav & Ishan Kishan and Hardik Pandya's late blitz guide #MumbaiIndians to a mammoth total. #DelhiCapitals chasing this down?🤔#MIvDC #Dream11IPL pic.twitter.com/ttUmKx8SVu
— IndianPremierLeague (@IPL) November 5, 2020A fine half-century from Suryakumar Yadav & Ishan Kishan and Hardik Pandya's late blitz guide #MumbaiIndians to a mammoth total. #DelhiCapitals chasing this down?🤔#MIvDC #Dream11IPL pic.twitter.com/ttUmKx8SVu
— IndianPremierLeague (@IPL) November 5, 2020
ಡಿಕಾಕ್ ಔಟಾದ ನಂತರ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 51 ರನ್ಗಳಿಸಿದ್ದ ಯಾದವ್ ಕೂಡ ಔಟಾದರು. ನಂತರ ಬಂದ ಪೊಲಾರ್ಡ್ ಅಶ್ವಿನ್ ಬೌಲಿಂಗ್ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಕೃನಾಲ್ ಆಟ ಕೂಡ 13 ರನ್ಗಳಿಗೆ ಸೀಮಿತವಾಯಿತು.
ಆದರೆ ಕೊನೆಯ 4 ಓವರ್ಗಳಲ್ಲಿ ಅಬ್ಬರಿಸಿದ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಬೌಂಡರಿ -ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಈ ಜೋಡಿ 23 ಎಸೆತಗಳಲ್ಲಿ 60 ರನ್ ಸೂರೆಗೈದರು. ಕಿಶನ್ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 55 ರನ್ಗಳಿಸಿದರೆ, ಪಾಂಡ್ಯ ಕೇವಲ 14 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ಗಳ ಸಹಿತ ಅಜೇಯ 37 ರನ್ ಸಿಡಿಸಿ ತಂಡದ ಮೊತ್ತವನ್ನು 200ಕ್ಕೇ ಏರಿಸಿದರು.
ಡೆಲ್ಲಿ ಪರ ಅಶ್ವಿನ್ 29ಕ್ಕೆ 3 , ಎನ್ರಿಚ್ ನೋಕಿಯಾ 50ಕ್ಕೆ1, ಸ್ಟೋಯ್ನಿಸ್ 5ಕ್ಕೆ1 ವಿಕೆಟ್ ಪಡೆದರು.