ETV Bharat / sports

4 ದಿನದ ಟೆಸ್ಟ್‌ vs 5 ದಿನದ ಟೆಸ್ಟ್‌: ಸಚಿನ್​, ಕೊಹ್ಲಿ ತಿರಸ್ಕರಿಸಿದ ನಿಲುವಿಗೆ ಇರ್ಫಾನ್ ಪಠಾಣ್​ ಬೆಂಬಲ - ಇರ್ಫಾನ್ ಪಠಾಣ್​

ಎರಡು ದಿನಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಭಾರತದ ಮಾಜಿ ಆಲ್​ರೌಂಡರ್​ ಇರ್ಫಾನ್​ ಪಠಾಣ್​ 4 ದಿನಗಳ ಟೆಸ್ಟ್ ಪಂದ್ಯ​ ಉತ್ತಮ ಆಯ್ಕೆ. ಈ ಬಗ್ಗೆ ಕೆಲವು ವರ್ಷಗಳ ಹಿಂದೆಯೂ ಮಾತನಾಡಿದ್ದೆ. ಇದೀಗ ಆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ICC test championship
4 ದಿನಗಳ ಟೆಸ್ಟ್​ vs 5 ದಿನಗಳ ಟೆಸ್ಟ್​
author img

By

Published : Jan 7, 2020, 9:00 PM IST

ಮುಂಬೈ: ಭಾರತ ತಂಡದ ಮಾಜಿ ಆಲ್​ರೌಂಡರ್​ ಇರ್ಫಾನ್ ಪಠಾಣ್​, ಐಸಿಸಿ 2023 ರಿಂದ ಜಾರಿ ಮಾಡಬೇಕೆಂದಿರುವ 4 ದಿನಗಳ ಟೆಸ್ಟ್​ ಪಂದ್ಯಕ್ಕೆ ​ ​ ಬೆಂಬಲ ನೀಡಿದ್ದಾರೆ.

ಕಳೆದ ವಾರ ಐಸಿಸಿ 2023ರ ಟೆಸ್ಟ್​ ಚಾಂಪಿಯನ್​ಶಿಪ್​ನಿಂದ ಟೆಸ್ಟ್​ ಪಂದ್ಯವನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸುವ ಚಿಂತನೆ ನಡೆಸಿತ್ತು. ಇದಕ್ಕೆ ಆಸ್ಟ್ರೇಲಿಯಾ ಕ್ರಿಕೆಟರ್​ಗಳು, ಭಾರತದ ಸಚಿನ್​, ಗಂಭೀರ್​ ಹಾಗೂ ಕೊಹ್ಲಿ ಸೇರಿದಂತೆ ಹಲವು ಆಟಗಾರರು ವಿರೋಧ ವ್ಯಕ್ತಪಡಿಸಿದ್ದರು.

ಆದ್ರೆ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಇರ್ಫಾನ್​ ಪಠಾಣ್,​ 4 ದಿನಗಳ ಟೆಸ್ಟ್​ ಉತ್ತಮ ಆಯ್ಕೆ. ಇದರ ಬಗ್ಗೆ ಕೆಲವು ವರ್ಷಗಳ ಹಿಂದೆ ಮಾತನಾಡಿದ್ದೆ. ಇದೀಗ ಆ ವಿಚಾರ ಕೇಳಿಬಂದಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

irfan-pathan
4 ದಿನಗಳ ಟೆಸ್ಟ್​ vs 5 ದಿನಗಳ ಟೆಸ್ಟ್​

ನಾವು ಈಗಾಗಲೇ ರಣಜಿ ಟ್ರೋಫಿಯಲ್ಲಿ 4 ದಿನಗಳ ಪಂದ್ಯವಾಡುತ್ತಿದ್ದೇವೆ. ಅಂದಮೇಲೆ ಟೆಸ್ಟ್​ ಪಂದ್ಯದಲ್ಲಿ ಯಾಕೆ ಇದು ಸಾಧ್ಯವಿಲ್ಲ? ಎಂದು ಪಠಾಣ್​ ಪ್ರಶ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ 4 ದಿನಗಳ ಟೆಸ್ಟ್‌ ಪಂದ್ಯಗಳಲ್ಲಿ ನಿರಂತರವಾಗಿ ಫಲಿತಾಂಶ ಕಾಣುತ್ತಿದ್ದೇವೆ ಎಂದು ಪಠಾಣ್​ ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.