ದುಬೈ: ಐರ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಪಾಲ್ ಸ್ಟರ್ಲಿಂಗ್ 2019ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಪೇರಿಸಿದ ಬ್ಯಾಟ್ಸ್ಮನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಲಿಷ್ಠ ತಂಡಗಳ ಬ್ಯಾಟ್ಸ್ಮನ್ಗಳೇ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆದರೆ ಕ್ರಿಕೆಟ್ನಲ್ಲಿ ಈಗಷ್ಟೇ ಬೆಳೆಯುತ್ತಿರುವ ಐರ್ಲೆಂಡ್, ನೇಪಾಳ ನೆದರ್ಲೆಂಡ್ನತಹ ರಾಷ್ಟ್ರಗಳು ಈ ಬಾರಿ ಹೆಚ್ಚು ಟಿ20 ಪಂದ್ಯಗಳಲ್ಲಿ ಭಾಗಿಯಾಗಿದ್ದು ಬಹುಪಾಲು ಟಿ20 ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದೆ.
2019ರಲ್ಲಿ ಐರ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಪಾಳ್ ಸ್ಟರ್ಲಿಂಗ್ 20 ಪಂದ್ಯಗಳಿಂದ 41.55 ಸರಾಸರಿಯಲ್ಲಿ 748ರನ್ಗಳಿಸುವ ಮೂಲಕ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಐರ್ಲೆಂಡ್ನ ಕೆವಿನ್ ಒಬ್ರಿಯಾನ್ 729 ರನ್ಗಳಿಸಿರುವ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
-
As the year 2019 comes to a close, we share with you the top T20I performers of the year.
— ICC (@ICC) December 30, 2019 " class="align-text-top noRightClick twitterSection" data="
First up, the highest run-scorer in men's T20Is is Ireland's Paul Stirling 👏 pic.twitter.com/Mj2RqfNkG4
">As the year 2019 comes to a close, we share with you the top T20I performers of the year.
— ICC (@ICC) December 30, 2019
First up, the highest run-scorer in men's T20Is is Ireland's Paul Stirling 👏 pic.twitter.com/Mj2RqfNkG4As the year 2019 comes to a close, we share with you the top T20I performers of the year.
— ICC (@ICC) December 30, 2019
First up, the highest run-scorer in men's T20Is is Ireland's Paul Stirling 👏 pic.twitter.com/Mj2RqfNkG4
3ನೇ ಸ್ಥಾನದಲ್ಲಿ ನೆದರ್ಲೆಂಡ್ನ ಮ್ಯಾಕ್ಸ್ ಒ ಡೌಡ್(702), ಬೆನ್ ಕೂಪರ್(637), 5ನೇ ಸ್ಥಾನದಲ್ಲಿ ಐರ್ಲೆಂಡ್ನ ಆ್ಯಂಡಿ ಬಾಲ್ಬಿರ್ನಿ(601) ಇದ್ದಾರೆ.
ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ 10 ಟಿ20 ಪಂದ್ಯಗಳಲ್ಲಿ 466 ರನ್ಗಳಿಸಿ 9 ನೇಸ್ಥಾನದಲ್ಲಿದ್ದಾರೆ.
2019ರ ಕ್ಯಾಲೆಂಡರ್ ವರ್ಷದಲ್ಲಿ ಭಾರತ ರೋಹಿತ್ ಶರ್ಮಾ(1490) ಏಕದಿನ ಕ್ರಿಕೆಟ್ನಕಲ್ಲಿ ಗರಿಷ್ಠ ರನ್ ಹಾಗೂ ಆಸ್ಟ್ರೇಲಿಯಾ ಮಾರ್ನಸ್ ಲಾಬುಶೇನ್(1104) ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಸಿದ ದಾಖಲೆ ಹೊಂದಿದ್ದಾರೆ.