ETV Bharat / sports

ಐಪಿಎಲ್​ ವೇಳಾಪಟ್ಟಿ- ಕೇಂದ್ರದ ಅನುಮತಿ ಪಡೆಯಲು ಶೀಘ್ರವೇ ಸಭೆ: ಬ್ರಿಜೇಶ್ ಪಟೇಲ್​ - ಬಿಸಿಸಿಐ

ಐಸಿಸಿ ಸೋಮವಾರ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್​ ಟೂರ್ನಿಯನ್ನು ಮುಂದೂಡಿದ್ದರಿಂದ ಐಪಿಎಲ್​ ನಡೆಯುವುದು ಖಚಿತವಾಗಿದೆ. ಇದೀಗ ಬಿಸಿಸಿಐ 2020ರ ಐಪಿಎಲ್​ ಆವೃತ್ತಿಯನ್ನು ನಡೆಸಲು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯಲು ಇನ್ನು 7-10 ದಿನಗಳಲ್ಲಿ ಭೇಟಿ ಮಾಡಲಿದೆ ಎಂದು ಬ್ರಿಜೇಶ್​ ಪಟೇಲ್​​ ತಿಳಿಸಿದ್ದಾರೆ.

ಐಪಿಎಲ್​ 2020
ಐಪಿಎಲ್​ 2020
author img

By

Published : Jul 21, 2020, 2:13 PM IST

ನವದೆಹಲಿ: ಐಪಿಎಲ್​ ವೇಳಾಪಟ್ಟಿಯನ್ನು ನಿರ್ಧರಿಸಲು ಇನ್ನು 7-10 ದಿನಗಳಲ್ಲಿ ಸಭೆ ನಡೆಸಲಿದ್ದೇವೆ ಎಂದು ಐಪಿಎಲ್​ ಗವರ್ನಿಂಗ್​ ಕೌನ್ಸಿಲ್​ ಅಧ್ಯಕ್ಷ ಬ್ರಿಜೇಶ್​ ಪಟೇಲ್​ ಮಂಗಳವಾರ ಖಚಿತಪಡಿಸಿದ್ದಾರೆ.

ಐಸಿಸಿ ಸೋಮವಾರ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ - 20 ವಿಶ್ವಕಪ್​ ಟೂರ್ನಿ ಮುಂದೂಡಿದ್ದರಿಂದ ಐಪಿಎಲ್​ ನಡೆಯುವುದು ಖಚಿತವಾಗಿದೆ. ಇದೀಗ ಬಿಸಿಸಿಐ 2020ರ ಐಪಿಎಲ್​ ಆವೃತ್ತಿ ನಡೆಸಲು ಕೇಂದ್ರ ಸರ್ಕಾರದ ಅನುಮತಿ ಪಡೆಯಲು ಇನ್ನು 7-10 ದಿನಗಳಲ್ಲಿ ಭೇಟಿ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

" ಆಡಳಿತ ಮಂಡಳಿ ಸಭೆಯನ್ನು 7-10 ದಿನಗಳಲ್ಲಿ ನಡೆಸಲು ನಿರೀಕ್ಷಿಸಲಾಗಿದೆ. ಈ ವೇಳೆ, ಟೂರ್ನಮೆಂಟ್​ನ ವೇಳಾಪಟ್ಟಿ ಕುರಿತು ಚರ್ಚೆಗಳು ನಡೆಯಲಿದ್ದು, ಕಾರ್ಯಾಚರಣೆಯ ಅಂಶಗಳ ಬಗ್ಗೆಯೂ ಚರ್ಚಿಸಲಿದ್ದೇವೆ" ಎಂದು ಪಟೇಲ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಾವು ಸೆಪ್ಟೆಂಬರ್​ವರೆಗೆ ಕೊರೊನಾ ವೈರಸ್ ಪರಿಸ್ಥಿತಿಯನ್ನು ನೋಡುತ್ತೇವೆ. ನಂತರ ನಾವು ಭಾರತದಲ್ಲಿ ಅಥವಾ ಯುಎಇಯಲ್ಲಿ ಟೂರ್ನಮೆಂಟ್​ ಆಯೋಜನೆ ನಡೆಸಬೇಕಾ ಎಂಬುದರ ಬಗ್ಗೆ ನಿರ್ಧರಿಸುತ್ತೇವೆ. ಟೂರ್ನಿ ಆಯೋಜಿಸಲು ಸರ್ಕಾರದ ಅನುಮತಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಮಾರ್ಚ್​ 29 ರಿಂದ ನಡೆಯಬೇಕಿದ್ದ 13ನೇ ಅವೃತ್ತಿಯ ಐಪಿಎಲ್​ ಕೋವಿಡ್​ 19 ಭೀತಿ ಕಾರಣ ಅನಿರ್ದಾಷ್ಟವಧಿಗೆ ಮುಂದೂಡಲ್ಪಟ್ಟಿತ್ತು. ಇದೀಗ ಟಿ-20 ವಿಶ್ವಕಪ್​ ಮುಂದೂಡಲ್ಪಟ್ಟಿರುವುದರಿಂದ ಐಪಿಎಲ್​ಗೆ ಗ್ರೀನ್​ ಸಿಗ್ನಲ್​ ಸಿಕ್ಕಿದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.