ETV Bharat / sports

2012ರಿಂದ ಇಲ್ಲದ ಅನುಮಾನ ಈಗೇಕೆ?: ನರೈನ್ ಬೌಲಿಂಗ್ ಶೈಲಿಯ ವಿರುದ್ಧದ ವರದಿಗೆ ಅಚ್ಚರಿ ವ್ಯಕ್ತಪಡಿಸಿದ ಕೆಕೆಆರ್​ - , IPL 2020 latest updates

ಶನಿವಾರ ಕಿಂಗ್ಸ್​ ಇಲೆವೆನ್ ಪಂಜಾನ್​ ವಿರುದ್ಧದ ಪಂದ್ಯದ ವೇಳೆ ಪಂದ್ಯದ ಅಧಿಕಾರಿಗಳು ನರೈನ್​ ಬೌಲಿಂಗ್ ಶೈಲಿಯ ವಿರುದ್ಧ ವರದಿ ಮಾಡಿದ್ದರು. ಆದರೆ, ಅಧಿಕಾರಿಗಳ ಈ ನಿರ್ಧಾರಕ್ಕೆ ಕೆಕೆಆರ್​ ಆಶ್ಚರ್ಯ ವ್ಯಕ್ತಪಡಿಸಿದೆ.

ಸುನೀಲ್ ನರೈನ್
ಸುನೀಲ್ ನರೈನ್
author img

By

Published : Oct 12, 2020, 5:59 PM IST

Updated : Oct 12, 2020, 6:39 PM IST

ಅಬುಧಾಬಿ: ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಇತ್ತೀಚೆಗೆ ಸ್ಪಿನ್ನರ್​ ಸುನೀಲ್ ನರೈನ್ ಬೌಲಿಂಗ್ ಶೈಲಿಯನ್ನು ಅನುಮಾನಾಸ್ಪದ ಎಂದು ವರದಿ ಮಾಡಿ, ಎಚ್ಚರಿಕೆ ನೀಡಿರುವುದಕ್ಕೆ ಕೋಲ್ಕತ್ತಾ ನೈಟ್​ ಫ್ರಾಂಚೈಸಿ ಆಶ್ಚರ್ಯ ವ್ಯಕ್ತಪಡಿಸಿದೆ.

ಶನಿವಾರ ಕಿಂಗ್ಸ್​ ಇಲೆವೆನ್ ಪಂಜಾನ್​ ವಿರುದ್ಧದ ಪಂದ್ಯದ ವೇಳೆ ಪಂದ್ಯದ ಅಧಿಕಾರಿಗಳು ನರೈನ್​ ಬೌಲಿಂಗ್ ಶೈಲಿಯ ವಿರುದ್ಧ ವರದಿ ಮಾಡಿದ್ದರು. ಆದರೆ, ಅಧಿಕಾರಿಗಳ ಈ ನಿರ್ಧಾರಕ್ಕೆ ಕೆಕೆಆರ್​ ಆಶ್ಚರ್ಯವ್ಯಕ್ತಪಡಿಸಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಸುನೀಲ್ ನರೈನ್
ಸುನೀಲ್ ನರೈನ್

"ಸುನೀಲ್ ನರೈನ್​ ವಿರುದ್ಧ ನೀಡಲಾಗಿರುವ ಅನುಮಾನಸ್ಪದ ಬೌಲಿಂಗ್​ ಶೈಲಿ ವರದಿಯಿಂದ ಫ್ರಾಂಚೈಸಿಗೆ ಅಚ್ಚರಿ ಉಂಟಾಗಿದೆ. ಏಕೆಂದರೆ ನರೈನ್​ 2012ರಿಂದ ಇಲ್ಲಿಯವರೆಗೆ 112 ಐಪಿಎಲ್​ ಪಂದ್ಯಗಳನ್ನಾಡಿದ್ದಾರೆ. ಹಾಗೂ ಹಿಂದೊಮ್ಮೆ 2014ರಲ್ಲಿ ಅನುಮಾನಸ್ಪದ ಬೌಲಿಂಗ್ ಶೈಲಿ ಎಂದು ವರದಿ ಪಡೆದ ನಂತರ SRASSC ಮತ್ತು ಐಸಿಸಿ ಒಳಪಡಿಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಂತರ 2015 ರಿಂದ ಇಲ್ಲಿಯವರೆಗೆ 68 ಪಂದ್ಯಗಳನ್ನಾಡಿದ್ದಾರೆ. ಇದೀಗ ಮತ್ತೆ ಅವರ ಬೌಲಿಂಗ್​ ಶೈಲಿಯನ್ನು ಶಂಕಿಸಿರುವುದು ನಿಜಕ್ಕೂ ನರೈನ್​ಗೆ​ ಮತ್ತು ಫ್ರಾಂಚೈಸಿಗೆ ಆಶ್ಚರ್ಯವನ್ನುಂಟುಮಾಡಿದೆ" ಎಂದು ಕೆಕೆಆರ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದಲ್ಲದೆ, ಈ ಋತುವಿನಲ್ಲೂ ನರೈನ್ 6ನೇ ಪಂದ್ಯವನ್ನಾಡುತ್ತಿದ್ದಾರೆ. ಇದುವರೆಗೆ ಪಂದ್ಯದ ಅಧಿಕಾರಿಗಳು ಔಪಚಾರಿಕವಾಗಿ ಮತ್ತು ಅನೌಪಚಾರಿಕವಾಗಿ ಯಾವುದೇ ಕಳವಳ ವ್ಯಕ್ತಪಡಿಸಲಿಲ್ಲ ಎಂದು ಹೇಳಿಕೆಯಲ್ಲಿ ಸೇರಿಸಿದೆ.

32 ವರ್ಷದ ಆಟಗಾರ 2014ರ ಚಾಂಪಿಯನ್ಸ್ ಲೀಗ್ ಟಿ- 20 ವೇಳೆ ಕೆಕೆಆರ್ ಪರ ಆಡುತ್ತಿದ್ದಾಗಲೂ ಅವರು ತಮ್ಮ ಬೌಲಿಂಗ್​ ಶೈಲಿ ಅಕ್ರಮ ಎಂದು ವರದಿ ಪಡೆದಿದ್ದರು.

"ಆದರೂ, ಫ್ರ್ಯಾಂಚೈಸಿ ಐಪಿಎಲ್ ನರೈನ್ ಅವರ ಬೌಲಿಂಗ್ ಕ್ರಮ ಪರಿಶೀಲಿಸಲು ಜಾರಿಗೆ ತಂದಿರುವ ಪ್ರಕ್ರಿಯೆಯನ್ನು ಗೌರವಿಸುವುದಾಗಿ ಹೇಳಿದೆ. ಮತ್ತು ಈ ವಿಷಯದಲ್ಲಿ ಮಂಡಳಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವುದಾಗಿ" ಹೇಳಿಕೊಂಡಿದೆ.

ಪ್ರಸ್ತುತ ನರೈನ್​ಗೆ ಬೌಲಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಏನಾದರೂ 2ನೇ ಸಲ ಶಂಕಾಸ್ಪದ ಶೈಲಿ ಎಂದು ವರದಿ ಪಡೆದರೆ, ಅವರೂ ಟೂರ್ನಿಯಿಂದಲೇ ಸಸ್ಪೆಂಡ್ ಆಗಲಿದ್ದಾರೆ. ನಂತರ ಬಿಸಿಸಿಐ ಅನುಮಾನಾಸ್ಪದ​ ಬೌಲಿಂಗ್ ಆ್ಯಕ್ಷನ್​ ಕಮಿಟಿ ಪರೀಕ್ಷಿಸಿ ತೀರ್ಪು ನೀಡುವವರೆಗೆ ಅವರು ಬೌಲಿಂಗ್ ಮಾಡಲು ಅನರ್ಹರಾಗಿರುತ್ತಾರೆ. ಆದರೆ, ಪ್ರಸ್ತುತ ಸ್ಥಳದಲ್ಲಿ ಕಮಿಟಿ ಇಲ್ಲವಾದ್ದರಿಂದ ನರೈನ್​ಗೆ​ ಕೇವಲ ಎಚ್ಚರಿಕೆ ನೀಡಲಾಗಿದೆ.

Last Updated : Oct 12, 2020, 6:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.