ETV Bharat / sports

ವಿಶ್ವಕಪ್​ ಫೈನಲ್ ನಂತರ ಐಪಿಎಲ್​ ಫೈನಲ್ ಅತ್ಯಂತ ದೊಡ್ಡ ವಿಷಯ : ಪೊಲಾರ್ಡ್ - ಡೆಲ್ಲಿ vs ಮುಂಬೈ ಲೈವ್​

ಈಗಾಗಲೇ ಕ್ವಾಲಿಫೈಯರ್​ನಲ್ಲಿ ಡೆಲ್ಲಿ ಮಣಿಸಿರುವ ವಿಶ್ವಾಸದಲ್ಲಿರುವ ಮುಂಬೈ ಈ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮುಂಬೈ 2013, 2015, 2017 ಹಾಗೂ 2019ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ..

ಕೀರನ್ ಪೊಲಾರ್ಡ್​
ಕೀರನ್ ಪೊಲಾರ್ಡ್​
author img

By

Published : Nov 10, 2020, 4:15 PM IST

ಅಬುಧಾಬಿ : ಮಂಗಳವಾರ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​​ ತಂಡಗಳು 13ನೇ ಆವೃತ್ತಿಯ ಐಪಿಎಲ್​ನಲ್ಲಿ ಸೆಣೆಸಾಡಲಿವೆ. ಮುಂಬೈಗೆ ಇಂದು 6ನೇ ಫೈನಲ್​. ಆದರೆ, ಡೆಲ್ಲಿಗೆ ಇದು ಪ್ರಥಮ ಫೈನಲ್ ಪಂದ್ಯವಾಗಿದೆ.

ವಿಶ್ವದಲ್ಲೇ ಶ್ರೇಷ್ಠ ಲೀಗ್ ಎಂದು ಹೆಸರಾಗಿರುವ ಐಪಿಎಲ್​ ಕುರಿತು ಮಾತನಾಡಿರುವ ಮುಂಬೈ ತಂಡದ ಆಲ್​ರೌಂಡರ್​ ಕೀರನ್ ಪೊಲಾರ್ಡ್​, ವಿಶ್ವಕಪ್ ಫೈನಲ್ ಹೊರೆತುಪಡಿಸಿದ್ರೆ ಐಪಿಎಲ್​ ಫೈನಲ್​ ಅತ್ಯಂತ ಆಕರ್ಷಣೀಯ ಮತ್ತು ಗಮನ ಸೆಳೆಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಯಾವಾಗಲೂ ಫೈನಲ್‌ ಹೆಸರಿನ ಪಂದ್ಯಗಳು ಒತ್ತಡದಿಂದ ಕೂಡಿರುತ್ತವೆ. ಪ್ರತಿಯೊಬ್ಬರೂ ಒತ್ತಡ ಎದುರಿಸುತ್ತಾರೆ. ನೀವು ಗೆಲ್ಲಬೇಕಾದ್ರೆ ಒಂದೂ ತಪ್ಪುಗಳನ್ನು ಮಾಡಬಾರದು. ಆದರೆ, ದಿನದ ಅಂತ್ಯದಲ್ಲಿ ನೀವು ಫೈನಲ್ ​ಅನ್ನು ಕೂಡ ಸಾಮಾನ್ಯ ಪಂದ್ಯದ ರೀತಿ ತೆಗೆದುಕೊಳ್ಳಬೇಕಾಗುತ್ತದೆ.

ನೀವು ಮೈದಾನಕ್ಕೆ ಹೋಗಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ನೀವಾಗಿಯೇ ಆನಂದಿಸಬೇಕು" ಎಂದು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಟ್ವಿಟರ್​ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಪೊಲಾರ್ಡ್ ಹೇಳಿದ್ದಾರೆ.

"ನಿಸ್ಸಂಶಯವಾಗಿ, ಫೈನಲ್‌ನಲ್ಲಿ ಅಭಿಮಾನಿಗಳ ಸಮೂಹವಿರುವುದಿಲ್ಲ. ಆದರೆ, ಅದರ ಪ್ರಮಾಣವನ್ನು ಆನಂದಿಸಬೇಕು. ಯಾಕೆಂದರೆ, ಇದು ಐಪಿಎಲ್ ಫೈನಲ್, ವಿಶ್ವಕಪ್ ಫೈನಲ್ ನಂತರದ ಅತ್ಯಂತ ದೊಡ್ಡ ವಿಷಯ" ಎಂದು ಪೊಲಾರ್ಡ್​ ಹೇಳಿದ್ದಾರೆ.

ಕೀರನ್ ಪೊಲಾರ್ಡ್​
ಕೀರನ್ ಪೊಲಾರ್ಡ್​

ಈಗಾಗಲೇ ಕ್ವಾಲಿಫೈಯರ್​ನಲ್ಲಿ ಡೆಲ್ಲಿ ಮಣಿಸಿರುವ ವಿಶ್ವಾಸದಲ್ಲಿರುವ ಮುಂಬೈ ಈ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮುಂಬೈ 2013, 2015, 2017 ಹಾಗೂ 2019ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

ಡೆಲ್ಲಿ ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ್ದರೂ ಸನ್​ರೈಸರ್ಸ್​ನಂತಹ ಬಲಿಷ್ಠ ತಂಡವನ್ನು ಮಣಿಸಿರುವುದರಿಂದ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.