ETV Bharat / sports

ಸರಣಿಯುದ್ದಕ್ಕೂ ಆಟದಲ್ಲಿ ಫುಲ್ ಎನರ್ಜಿ ತೋರಿಸಿ... ಆರ್​ಸಿಬಿ ಬಾಯ್ಸ್​ಗೆ ಕೊಹ್ಲಿ ಕಿವಿಮಾತು

ತಂಡದ ವೈಫಲ್ಯವಾಗಿದ್ದ ಮಧ್ಯಮ ಕ್ರಮಾಂಕ ಈ ಬಾರಿ ದೇಶಿ ಮತ್ತು ವಿದೇಶಿ ಆಟಗಾರರಿಂದ ಭರ್ತಿಯಾಗಿದೆ. ವೇಗದ ಬೌಲಿಂಗ್ ಸ್ವಲ್ಪ ಹಿನ್ನಡೆಯಾದರೂ ಉಳಿದೆಲ್ಲಾ ವಿಭಾಗ ಯಾವುದೇ ತಂಡಕ್ಕಾದರೂ ಪೈಪೋಟಿ ನೀಡಲು ಸಮರ್ಥವಾಗಿದೆ. ಜೊತೆಗೆ ಸ್ವತಃ ಕೊಹ್ಲಿಯೇ ಆರಂಭಿಕನಾಗಿ ಕಣಕ್ಕಿಳಿಯಲಿರುವುದು ತಂಡಕ್ಕೆ ಆನೆಬಲ ತಂದಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By

Published : Apr 8, 2021, 5:25 PM IST

ನವದೆಹಲಿ: 14ನೇ ಆವೃತ್ತಿಯಲ್ಲಿ ಆರ್​ಸಿಬಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಈ ಸಂದರ್ಭದಲ್ಲಿ ಆಟಗಾರರಿಗೆ ಕೊಹ್ಲಿ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಹುರಿದುಂಬಿಸಿದ್ದಾರೆ. ಇಡೀ ಟೂರ್ನಿಯಲ್ಲಿ ತಮ್ಮ ದಕ್ಷತೆಯೊಂದಿಗೆ ಆಟವಾಡಿ ಎಂದು ಹೇಳಿದ್ದಾರೆ.

ಈ ಅದ್ಭುತ ಗುಂಪಿಗೆ ನಮ್ಮೊಂದಿಗೆ ಸೇರಿಕೊಂಡ ಎಲ್ಲಾ ಹೊಸಬರಿಗೆ ಸ್ವಾಗತ. ಈ ಹಿಂದೆ ಇಲ್ಲಿ ಆಡಿರುವ ಹುಡುಗರಿಂದ ನಿಮಗೆ ತಿಳಿದಿರುವಂತೆ ವಾತಾವರಣ ಋತುವಿನ ಉದ್ದಕ್ಕೂ ಅದ್ಭುತವಾಗಿರುತ್ತದೆ. ಈ ವೇಳೆ ನಿಮ್ಮಿಂದ ಸಂಪೂರ್ಣ ಎನರ್ಜಿ ನಿರೀಕ್ಷಿಸುತ್ತೇನೆ. ಅದು ಮೈದಾನದಲ್ಲಿ ಅಥವಾ ಅಭ್ಯಾಸ ಸೆಷನ್​ಗಳಲ್ಲಿ ಎನ್ನುವುದ ಅನವಶ್ಯಕ. ಎಲ್ಲಾ ಹುಡುಗರೂ ನಾವು ಯಾವಾಗಲೂ ಆಡುವ ರೀತಿಯಂತೆ ತೀವ್ರತೆಯಿಂದ ಆಡಬೇಕೆಂದು ನಾನು ನಿರೀಕ್ಷಿಸುತ್ತೇನೆ ಎಂದು ಆರ್​ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕೊಹ್ಲಿ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು
ರಾಯಲ್ ಚಾಲೆಂಜರ್ಸ್​ ಬೆಂಗಳೂರು

ಕಳೆದ ವರ್ಷ ನಾವು ಉತ್ತಮ ದಿಕ್ಕಿನಲ್ಲಿ ಸಾಗಿ ಪ್ಲೇ ಆಫ್ ತಲುಪಿದ್ದೆವು. ಈ ಬಾರಿ ಕಳೆದ ಆವೃತ್ತಿಗಿಂತ ಬಲಿಷ್ಠ ತಂಡವನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಕಳೆದ ಬಾರಿಗಿಂತಲೂ ಒಳ್ಳೆಯ ಸಂಗತಿಯನ್ನು ನಿರೀಕ್ಷಿಸುವುದಾಗಿ ಕೊಹ್ಲಿ ಹೇಳಿದ್ದಾರೆ.

ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರಿ ಅಗ್ರಸ್ಥಾನ ಪಡೆದುಕೊಂಡಿತ್ತು. ಆದರೆ ಕೊನೆಯ 4 ಲೀಗ್ ಪಂದ್ಯಗಳಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿತ್ತು. ಆದರೂ ಪ್ಲೇ ಆಫ್ ತಲುಪಲು ಯಶಸ್ವಿಯಾಗಿದ್ದ ಕೊಹ್ಲಿ ಬಳಗ ಎಲಿಮಿನೇಟರ್​ನಲ್ಲಿ ಹೈದರಾಬಾದ್ ತಂಡದ ವಿರುದ್ಧ ರೋಚಕ ಸೋಲುಂಡು 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

ತಂಡದ ವೈಫಲ್ಯವಾಗಿದ್ದ ಮಧ್ಯಮ ಕ್ರಮಾಂಕ ಈ ಬಾರಿ ದೇಶಿ ಮತ್ತು ವಿದೇಶಿ ಆಟಗಾರರಿಂದ ಭರ್ತಿಯಾಗಿದೆ. ವೇಗದ ಬೌಲಿಂಗ್ ಸ್ವಲ್ಪ ಹಿನ್ನಡೆಯಾದರೂ ಉಳಿದೆಲ್ಲಾ ವಿಭಾಗ ಯಾವುದೇ ತಂಡಕ್ಕಾದರೂ ಪೈಪೋಟಿ ನೀಡಲು ಸಮರ್ಥವಾಗಿದೆ. ಜೊತೆಗೆ ಸ್ವತಃ ಕೊಹ್ಲಿಯೇ ಆರಂಭಿಕನಾಗಿ ಕಣಕ್ಕಿಳಿಯಲಿರುವುದು ತಂಡಕ್ಕೆ ಆನೆಬಲ ತಂದಿದೆ.

ಇದನ್ನು ಓದಿ:ಭಾರತದ ಪರ ಗರಿಷ್ಠ ವಿಕೆಟ್ ಪಡೆಯಬೇಕೆಂಬುದು ನನ್ನ ಕನಸು: ಮೊಹಮ್ಮದ್ ಸಿರಾಜ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.