ETV Bharat / sports

ಐಪಿಎಲ್ 2021.. ಮುಂಬೈಗೆ ಬಂದಿಳಿದು ಕ್ವಾರಂಟೈನ್​ಗೊಳಗಾದ ಕೆಕೆಆರ್ ಆಟಗಾರರು - ಆ್ಯಂಡ್ರೆ ರಸೆಲ್

ವಿದೇಶಿ ಆಟಗಾರರಾದ ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ಕೂಡ ಈಗಾಗಲೇ ಭಾರತಕ್ಕೆ ಆಗಮಿಸಲು ಫ್ಲೈಟ್ ಏರಿದ್ದಾರೆ ಎಂದು ಕೆಕೆಆರ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿಕೊಂಡಿದೆ..

ಐಪಿಎಲ್ 2021
ಕೋಲ್ಕತ್ತಾ ನೈಟ್ ರೈಡರ್ಸ್​
author img

By

Published : Mar 22, 2021, 9:12 PM IST

ನವದೆಹಲಿ : ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರರ ಮತ್ತು ಸಹಾಯಕ ಸಿಬ್ಬಂದಿ 14ನೇ ಆವೃತ್ತಿಯ ಐಪಿಎಲ್​ಗಾಗಿ ಮುಂಬೈಗೆ ಬಂದಿಳಿದಿದ್ದಾರೆ. ತರಬೇತಿಗೂ ಮುನ್ನ 7 ದಿನಗಳ ಕಾಲ ಕ್ವಾರಂಟೈನ್ ಮುಗಿಸಲಿದ್ದಾರೆ.

ದಿನೇಶ್ ಕಾರ್ತಿಕ್, ವರುಣ್ ಚಕ್ರವರ್ತಿ, ರಾಹುಲ್ ತ್ರಿಪಾಠಿ, ಕಮಲೇಶ್ ನಾಗರಕೋಟಿ, ಸಂದೀಪ್ ವಾರಿಯರ್​, ವೈಭವ್​ ಅರೋರ ಮತ್ತು ಸಹಾಯಕ ಕೋಚ್​ಗಳಾದ​ ಅಭಿಷೇಕ್ ನಾಯರ್, ಬೌಲಿಂಗ್ ಕೋಚ್ ಓಂಕಾರ್ ಸಲ್ವಿ ಸೇರಿ ಸಹಾಯಕ ಸಿಬ್ಬಂದಿ ಶನಿವಾರ ಮುಂಬೈಗೆ ಬಂದಿಳಿದು ಹೋಟೆಲ್ ಸೇರಿದ್ದಾರೆ.

ವಿದೇಶಿ ಆಟಗಾರರಾದ ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ಕೂಡ ಈಗಾಗಲೇ ಭಾರತಕ್ಕೆ ಆಗಮಿಸಲು ಫ್ಲೈಟ್ ಏರಿದ್ದಾರೆ ಎಂದು ಕೆಕೆಆರ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿಕೊಂಡಿದೆ.

ಏಪ್ರಿಲ್ 11ರಂದು ಕೋಲ್ಕತಾ ನೈಟ್ ರೈಡರ್ಸ್​ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ತನ್ನ ಅಭಿಯಾನ ಆರಂಭಿಸಲಿದೆ. ಕೋವಿಡ್-19 ಕಾರಣ ದೆಹಲಿ, ಮುಂಬೈ, ಬೆಂಗಳೂರು, ಅಹ್ಮದಾಬಾದ್​ ಮತ್ತು ಕೋಲ್ಕತಾದ ಮುಚ್ಚಿದ ಕ್ರೀಡಾಂಗಣಗಳಲ್ಲಿ ಈ ಬಾರಿಯ ಐಪಿಎಲ್ ನಡೆಯಲಿದೆ. ಆದರೆ, ಯಾವುದೇ ತಂಡ ತನ್ನ ತವರಿನ ಅಂಗಳದಲ್ಲಿ ಆಡುವುದಕ್ಕೆ ಅವಕಾಶ ನೀಡಿಲ್ಲ. ಪ್ಲೇ ಆಫ್ ಪಂದ್ಯಗಳು ನೂತನ ಅಹ್ಮದಾಬಾದ್​ನಲ್ಲಿ ನಡೆಯಲಿವೆ.

ಇದನ್ನು ಓದಿ:ಗಂಗೂಲಿ, ಲಕ್ಷ್ಮಣ್ ನಂತರ ಈ ಪ್ರತಿಷ್ಠಿತ ಕೌಂಟಿ ತಂಡದ ಪರ ಆಡಲಿದ್ದಾರೆ ಶ್ರೇಯಸ್​ ಅಯ್ಯರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.