ETV Bharat / sports

ಕನ್ನಡಿಗನಿಗೆ ಒಲಿದ ಅದೃಷ್ಟ ಲಕ್ಷ್ಮಿ: ಬರೋಬ್ಬರಿ 9.75 ಕೋಟಿ ರೂ.ಗೆ ಸೇಲ್​ ಆದ ಕೆ. ಗೌತಮ್​

author img

By

Published : Feb 18, 2021, 6:28 PM IST

ಕರ್ನಾಟಕ ತಂಡದ ಆಲ್​ರೌಂಡರ್ ಕೃಷ್ಣಪ್ಪ ಗೌತಮ್​ಗೆ ಈ ಸಲದ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಜಾಕ್​​ಪಾಟ್​ ಹೊಡೆದಿದ್ದು, ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿರುವ ಅನ್​ಕ್ಯಾಪ್ಡ್​ ಪ್ಲೇಯರ್ ಆಗಿದ್ದಾರೆ.

K Gowtham
K Gowtham

ಚೆನ್ನೈ: 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಆವೃತ್ತಿಯಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್​ಗೆ ಜಾಕ್​ಪಾಟ್ ಹೊಡೆದಿದ್ದು, ಬರೋಬ್ಬರಿ 9.75 ಕೋಟಿ ರೂಗೆ ಬಿಕರಿಯಾಗಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ ಹರಾಜಿನಲ್ಲಿ ಬೆಂಗಳೂರು ಪ್ಲೇಯರ್ಸ್​ಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ.

ಕೇವಲ 20 ಲಕ್ಷ ಮೂಲ ಬೆಲೆ ಹೊಂದಿದ್ದ ಅನ್​ಕ್ಯಾಪ್ಡ್​ ಪ್ಲೇಯರ್ ಕೆ. ಗೌತಮ್​ ಈ ಹಿಂದೆ 2018ರಲ್ಲಿ ಬರೋಬ್ಬರಿ 8.8 ಕೋಟಿ ರೂ.ಗೆ ಸೇಲ್ ಆಗಿದ್ದರು. ಇದೀಗ ಅವರಿಗೆ ಮತ್ತೊಮ್ಮೆ ಜಾಕ್​ಪಾಟ್ ಹೊಡೆದಿದೆ.

ಅನ್​ಕ್ಯಾಪ್ಡ್​ ಪ್ಲೇಯರ್ ಗೌತಮ್​ಗೆ ಜಾಕ್​ಪಾಟ್​

ಮೂಲತಃ ಬೆಂಗಳೂರಿನವರು:

ಪ್ರಸಕ್ತ ಸಾಲಿನ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​, ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್​ ಕಿಂಗ್ಸ್ ಕನ್ನಡಿಗನ ಖರೀದಿ ಮಾಡಲು ಮುಗಿಬಿದ್ದಿದ್ದವು. ಕೊನೆಯದಾಗಿ ಚೆನ್ನೈ ಸೂಪರ್ ಕಿಂಗ್ಸ್​ 9.75 ಕೋಟಿ ರೂ ನೀಡಿ ಖರೀದಿ ಮಾಡಿವೆ. ಆಫ್​ಸ್ಪಿನ್ನರ್​ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್​ ಆಗಿರುವ ಗೌತಮ್​ ಮೂಲತಃ ಬೆಂಗಳೂರಿನವರಾಗಿದ್ದಾರೆ.

ಓದಿ: ಐಪಿಎಲ್​ ಹರಾಜಿನಲ್ಲಿ ವಿದೇಶಿ ಪ್ಲೇಯರ್ಸ್​ಗೆ ಬಂಪರ್​... ಕೋಟಿ ಕೋಟಿ ರೂ.ಗೆ ಬಿಕರಿ!

ಸದ್ಯ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯಕ್ಕಾಗಿ ನೆಟ್​ ಬೌಲರ್ ಆಗಿ ಗೌತಮ್​ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನದಲ್ಲಿ ಭಾಗಿಯಾಗಿ 24 ಪಂದ್ಯಗಳನ್ನಾಡಿರುವ ಈ ಪ್ಲೇಯರ್​ 186 ರನ್​ ಗಳಿಸಿದ್ದು, 13 ವಿಕೆಟ್ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.