ETV Bharat / sports

ಆರ್​ಸಿಬಿ ಕೈಬಿಟ್ಟ ಮೋರಿಸ್​ಗೆ ಜಾಕ್​ಪಾಟ್​.. 16. 25 ಕೋಟಿ ರೂ. ನೀಡಿ ಖರೀದಿ ಮಾಡಿದ ಆರ್​ಆರ್! - ಕ್ರಿಸ್ ಮೋರಿಸ್ ಆರ್​ಆರ್

ಇಂಡಿಯನ್​ ಪ್ರೀಮಿಯುರ್ ಲೀಗ್ ಹರಾಜು ಇತಿಹಾಸದಲ್ಲೇ ಅತಿ ಹೆಚ್ಚಿನ ಮೊತ್ತಕ್ಕೆ ದಕ್ಷಿಣ ಆಫ್ರಿಕಾದ ಆಲ್​ರೌಂಡರ್ ಕ್ರಿಸ್ ಮೋರಿಸ್ ಬಿಕರಿಯಾಗುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.

Chris Morris
Chris Morris
author img

By

Published : Feb 18, 2021, 4:25 PM IST

ಚೆನ್ನೈ: ಕಳೆದ ಆವೃತ್ತಿಯಲ್ಲಿ 10 ಕೋಟಿ ರೂ.ಗೆ ಆರ್​ಸಿಬಿಯಿಂದ ಖರೀದಿಯಾಗಿದ್ದ ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಕ್ರಿಸ್ ಮೋರಿಸ್​ ಈ ಸಲದ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಜಾಕ್​ಪಾಟ್ ಹೊಡೆದಿದ್ದು, ಬರೋಬ್ಬರಿ 16.25 ಕೋಟಿ ರೂ.ಗೆ ಸೇಲ್​ ಆಗಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎಂಬ ಖ್ಯಾತಿ ಗಳಿಸಿದ್ದ ಯುವರಾಜ್​ ಸಿಂಗ್ ದಾಖಲೆ ಬ್ರೆಕ್​ ಮಾಡಿರುವ ಮೋರಿಸ್ ಇದೀಗ ಹೆಚ್ಚಿನ ಹಣಕ್ಕೆ ಸೇಲ್​ ಆಗಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್​ ಬರೋಬ್ಬರಿ 16 ಕೋಟಿ ರೂಗೆ ಸೇಲ್​ ಆಗಿದ್ದರು.

ಓದಿ: ಸಿಎಸ್​ಕೆ - ಆರ್​ಸಿಬಿ ನಡುವೆ ಫೈಟ್​: 14.25 ಕೋಟಿ ರೂ. ನೀಡಿ ಮ್ಯಾಕ್ಸ್​ವೆಲ್​ ಖರೀದಿ ಮಾಡಿದ ಬೆಂಗಳೂರು!

ಕ್ರಿಸ್ ಮೋರಿಸ್​ ಖರೀದಿ ಮಾಡಲು ಮುಂಬೈ, ರಾಜಸ್ಥಾನ ರಾಯಲ್ಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಆರ್​ಆರ್​ ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಉನ್ನು 4.40 ಕೋಟಿ ರೂ. ನೀಡಿ ಶಿವಂ ದುಬೆಗೆ ರಾಜಸ್ಥಾನ ಖರೀದಿ ಮಾಡಿದ್ದಾರೆ. ಈ ಹಿಂದೆ ಈ ಇಬ್ಬರು ಪ್ಲೇಯರ್ಸ್​ ಆರ್​ಸಿಬಿ ತಂಡದಲ್ಲಿದ್ದರು ಎಂಬುದು ಗಮನಾರ್ಹ ವಿಷಯವಾಗಿದೆ. ಉಳಿದಂತೆ 7 ಕೋಟಿ ರೂ. ನೀಡಿ ಮೊಯಿನ್ ಅಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿ ಮಾಡಿದೆ. ಮೋರಿಸ್ ಮೂಲ ಬೆಲೆ 75 ಲಕ್ಷ ರೂ ಘೋಷಣೆ ಮಾಡಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.