ಹೈದರಾಬಾದ್: 2021ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲು ಈಗಿನಿಂದಲೇ ತಯಾರಿ ಆರಂಭಗೊಂಡಿದ್ದು, ಫೆ.18ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಸಲದ ಹರಾಜು ಪ್ರಕ್ರಿಯೆಯಲ್ಲಿ 1097 ಆಟಗಾರರು ಭಾಗಿಯಾಗಲಿದ್ದಾರೆ.
1097 ಪ್ಲೇಯರ್ಸ್ಗಳ ಪೈಕಿ 11 ಆಟಗಾರರು ತಮ್ಮ ಮೂಲ ಬೆಲೆ 2 ಕೋಟಿ ರೂ. ಘೋಷಣೆ ಮಾಡಿಕೊಂಡಿದ್ದಾರೆ. ಅದರಲ್ಲಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್, ಜೆಸನ್ ರಾಯ್, ಭಾರತದ ಹರ್ಭಜನ್ ಸಿಂಗ್ ಸೇರಿಕೊಂಡಿದ್ದಾರೆ.
ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಜೋ ನಡೆದಿದ್ದೇ 'ರೂಟ್' : ವಿಶೇಷ ದಾಖಲೆ ಬರೆದ ಇಂಗ್ಲೆಂಡ್ ಕ್ಯಾಪ್ಟನ್
ಯಾವೆಲ್ಲ ಪ್ಲೇಯರ್ಸ್ 2 ಕೋಟಿ ಘೋಷಣೆ
- ಗ್ಲೆನ್ ಮ್ಯಾಕ್ಸ್ವೆಲ್(ಆಸ್ಟ್ರೇಲಿಯಾ)
- ಸ್ಟೀವ್ ಸ್ಮಿತ್(ಆಸ್ಟ್ರೇಲಿಯಾ)
- ಕೇದಾರ್ ಜಾಧವ್(ಭಾರತ)
- ಹರ್ಭಜನ್ ಸಿಂಗ್(ಭಾರತ)
- ಶಕೀಬ್ ಅಲ್ ಹಸನ್(ಬಾಂಗ್ಲಾದೇಶ)
- ಮೊಯಿನ್ಲಿ(ಇಂಗ್ಲೆಂಡ್)
- ಸ್ಯಾಮ್ ಬಿಲ್ಲಿಂಗ್ಸ್(ಇಂಗ್ಲೆಂಡ್)
- ಲಿಯಾಮ್ ಪ್ಲಂಕ್ಕಟ್(ಇಂಗ್ಲೆಂಡ್)
- ಜೆಸನ್ ರಾಯ್(ಇಂಗ್ಲೆಂಡ್)
- ಮಾರ್ಕ್ ವುಡ್(ಇಂಗ್ಲೆಂಡ್)
- ಕಾಲಿನ್ ಇನ್ಗ್ರಾಮ್(ದಕ್ಷಿಣ ಆಫ್ರಿಕಾ)
2020ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಜಾಧವ್(7.8 ಕೋಟಿ) ಹಾಗೂ ಮ್ಯಾಕ್ಸ್ವೆಲ್(10.75 ಕೋಟಿ) ಕ್ರಮವಾಗಿ ಹೆಚ್ಚಿನ ಹಣಕ್ಕೆ ಬಿಡ್ಡಿಂಗ್ ಆಗಿದ್ದರು.