ಅಬುಧಾಬಿ: ಜಾನಿ ಬೈರ್ಸ್ಟೋವ್ ಅರ್ಧಶತಕ ಹಾಗೂ ವಿಲಿಯಮ್ಸನ್ 41 , ವಾರ್ನರ್ ಅವರ 45 ರನ್ಗಳ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿಕ್ಯಾಪಿಟಲ್ಗೆ 163 ರನ್ಗಳ ಸ್ಪರ್ಧಾತ್ಮಕ ರನ್ಗಳ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್(45) ಹಾಗೂ ಬೈರ್ಸ್ಟೋವ್ ಮೊದಲ ವಿಕೆಟ್ಗೆ 77 ರನ್ಗಳ ಜೊತೆಯಾಟ ನೀಡಿದರು. 33 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 45 ರನ್ಗಳಿಸಿ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮನೀಶ್ ಪಾಂಡೆ 3 ರನ್ಗಳಿಸಿ ಮಿಶ್ರಾಗೆ ಎರಡನೇ ಬಲಿಯಾದರು.
-
Innings Break!@SunRisers post a total of 162/4 on the board.
— IndianPremierLeague (@IPL) September 29, 2020 " class="align-text-top noRightClick twitterSection" data="
Will @DelhiCapitals chase this down?#Dream11IPL #DCvSRH pic.twitter.com/IlpOhRwBOM
">Innings Break!@SunRisers post a total of 162/4 on the board.
— IndianPremierLeague (@IPL) September 29, 2020
Will @DelhiCapitals chase this down?#Dream11IPL #DCvSRH pic.twitter.com/IlpOhRwBOMInnings Break!@SunRisers post a total of 162/4 on the board.
— IndianPremierLeague (@IPL) September 29, 2020
Will @DelhiCapitals chase this down?#Dream11IPL #DCvSRH pic.twitter.com/IlpOhRwBOM
ಆದರೆ ಇಂದೇ ಮೊದಲ ಪಂದ್ಯವಾಡಿದ ಕೇನ್ ವಿಲಿಯಮ್ಸನ್ ಹಾಗೂ ಬೈರ್ಸ್ಟೋವ್ 3ನೇ ವಿಕೆಟ್ಗೆ 52 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಬೈರ್ಸ್ಟೋವ್ 48 ಎಸೆತಗಳಲ್ಲಿ 53, ಹಾಗೂ ವಿಲಿಯಮ್ಸನ್ 26 ಎಸೆತಗಳಲ್ಲಿ 41 ರನ್ಗಳಿಸಿದರು. ಜಮ್ಮುಕಾಶ್ಮೀರದ ಯುವ ಪ್ರತಿಭೆ ಅಬ್ಧುಲ್ ಸಮದ್ 7 ಎಸೆತಗಳಲ್ಲಿ 12 ರನ್ಗಳಿಸಿದರು.
ಹೈದರಾಬಾದ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ಗಳಿಸಿತು. ಡೆಲ್ಲಿಪರ ಅಮಿತ್ ಮಿಶ್ರಾ 35ಕ್ಕೆ 2 ಹಾಗೂ ರಬಾಡ 21 ರನ್ ನೀಡಿ 2 ವಿಕೆಟ್ ಪಡೆದು ಹೈದರಾಬಾದ್ ತಂಡದ ರನ್ಗತಿಗೆ ಕಡಿವಾಣ ಹಾಕಿದರು.