ಅಬುಧಾಬಿ: ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದಂಕಿ ರನ್ಗಳಿಕೆ ಮಾಡಿ, ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಪೃಥ್ವಿ ಶಾಗೆ ಇಂದಿನ ಕೋಲ್ಕತ್ತಾ ವಿರುದ್ಧದ ಪಂದ್ಯದಿಂದ ಕೈಬಿಡಲಾಗಿದೆ.
ಆರಂಭಿಕ ಪಂದ್ಯಗಳಲ್ಲಿ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಅವರಿಂದ ಮೆಚ್ಚುಗೆಗೊಳಗಾಗಿದ್ದ ಪೃಥ್ವಿ ಶಾ ಇದೀಗ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದು, ಕಳೆದ ಐದು ಇನ್ನಿಂಗ್ಸ್ಗಳಲ್ಲಿ 20ರ ಗಡಿ ದಾಟಲು ವಿಫಲರಾಗಿದ್ದಾರೆ.
ಇನ್ನು ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಒಂದಕ್ಕಿ ಸ್ಕೋರ್ ಮಾತ್ರ ಮಾಡಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪೃಥ್ವಿ ಶಾ ಬದಲಿಗೆ ಅನುಭವಿ ರಹಾನೆಗೆ ಅವಕಾಶ ನೀಡಲಾಗಿದೆ. ಆರಂಭಿಕ ಪಂದ್ಯಗಳಲ್ಲಿ 60 ಮತ್ತು 42ರನ್ಗಳಿಕೆ ಮಾಡಿದ್ದರಿಂದ ಪಾಂಟಿಂಗ್ರಿಂದ ಶ್ಲಾಘನೆಗೊಳಗಾಗಿದ್ದರು. ಆದರೆ ತದನಂತರ ಅವರು ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದಾರೆ.