ETV Bharat / sports

ಕೋವಿಡ್​ 19 ​ಹೋರಾಟಗಾರರಿಗೆ ಗೌರವ ಸೂಚಿಸಲು ವಿಶೇಷ ಜರ್ಸಿ ತೊಡಲಿದ್ದಾರೆ ಕೊಹ್ಲಿ ಬಾಯ್ಸ್​ - ಆರ್​ಸಿಬಿಯಿಂದ ಕೋವಿಡ್​ ಹೋರಾಟಗಾರರಿಗೆ ಗೌರವ

ಜೊತೆಗೆ ಈ ಋತುವಿನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಆಟಗಾರರು ಧರಿಸಿರುವ ಜರ್ಸಿಗಳ ಹರಾಜಿಗಿಡಲಿದ್ದು, ಅದರಿಂದ ಬರುವ ಹಣವನ್ನು ಕೋವಿಡ್​ ವಿರುದ್ಧ ಹೋರಾಡುತ್ತಿರುವ ಫೌಂಡೇಶನ್‌ಗೆ ದೇಣಿಗೆಯಾಗಿ ನೀಡಲಿದೆ ಎಂದು ತಿಳಿದುಬಂದಿದೆ.

ಮೈ ಕೋವಿಡ್​ ಹೀರೋಸ್​ ಜರ್ಸಿ
ಮೈ ಕೋವಿಡ್​ ಹೀರೋಸ್​ ಜರ್ಸಿ
author img

By

Published : Sep 17, 2020, 11:08 PM IST

ಬೆಂಗಳೂರು: ಕೋವಿಡ್​ 19 ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸೂಚಿಸಲು ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 2020ರ ಐಪಿಎಲ್ ಟೂರ್ನಿಯಲ್ಲಿ ‘ಮೈ ಕೋವಿಡ್​ ಹೀರೋಸ್​ ‘ ಎಂದು ಬರೆದಿರುವ ಜರ್ಸಿಯನ್ನು ತೊಟ್ಟು ಆಡಲಿದ್ದಾರೆ.

ಇಡೀ ಪಂದ್ಯವಾಳಿಯಲ್ಲಿ ತರಬೇತಿ ಮತ್ತು ಪಂದ್ಯಗಳ ವೇಳೆ ಆರ್​ಸಿಬಿ ಮೈ ಕೋವಿಡ್ ಹೀರೋಸ್​ ಸಂದೇಶ ಮುದ್ರಿತಗೊಂಡಿರುವ ಜರ್ಸಿಯನ್ನ ತನ್ನ ಆಟಗಾರರಿಗೆ ನೀಡಲಿದೆ. ಸಂಪೂರ್ಣ ಟೂರ್ನಿಯಲ್ಲಿ ಆಡಗಾರರು ಇದೇ ಜರ್ಸಿಗಳನ್ನು ತೊಟ್ಟು ಆಡಲಿದ್ದಾರೆ.

ಜೊತೆಗೆ ಈ ಋತುವಿನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಆಟಗಾರರು ಧರಿಸಿರುವ ಜರ್ಸಿಗಳ ಹರಾಜಿಗಿಡಲಿದ್ದು, ಅದರಿಂದ ಬರುವ ಹಣವನ್ನು ಕೋವಿಡ್​ ವಿರುದ್ಧ ಹೋರಾಡುತ್ತಿರುವ ಫೌಂಡೇಶನ್‌ಗೆ ದೇಣಿಗೆಯಾಗಿ ನೀಡಲಿದೆ ಎಂದು ತಿಳಿದುಬಂದಿದೆ.

ಜೊತೆಗೆ ಆರ್​ಸಿಬಿ ಆವೃತ್ತಿಯುದ್ದಕ್ಕೂ ಆಟಗಾರರು ಸಾಮಾಜಿಕ ಜಾಲಾತಾಣಗಳಲ್ಲಿ ಕೋವಿಡ್​ ಹೀರೋಗಳಿಗೆ ಸಂಬಂಧಿಸಿದ ಕೆಲವು ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ಲಕ್ಷಾಂತರ ಆರ್​ಸಿಬಿ ಅಭಿಮಾನಿಗಳಿಗೆ ನೀವು ಹೀರೋಗಳಾಗುವಂತೆ ಪ್ರೇರೇಪಿಸಲಿದೆ.

ಈ ಜರ್ಸಿ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಕೊಹ್ಲಿ, ಕಳೆದ ಕೆಲವು ತಿಂಗಳಿನಿಂದ ಕೋವಿಡ್​ ಹೀರೋಸ್​ಗಳ ಬಗ್ಗೆ ಕೇಳಿದಾಗಲೆಲ್ಲಾ ನನಗೆ ಅಕ್ಷರಶಃ ರೋಮಾಂಚನಗೊಳ್ಳುತ್ತೇನೆ. ಈ ನೈಜ ಸವಾಲುಗಳು ದೇಶವನ್ನು ಹೆಮ್ಮೆ ಪಡುವಂತೆ ಮಾಡಿದೆ. ನಾಳೆಗಳನ್ನು ನಿರ್ಮಿಸು ನಮ್ಜ ಪ್ರಯತ್ನಗಳಿಗೆ ಹೆಚ್ಚು ನಿರಂತರವಾಗಿ ಮತ್ತು ಸಮರ್ಪಕವಾಗಿರಲು ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.

ಆರ್​ಸಿಬಿ ‘ಮೈ ಕೋವಿಡ್​ ಹೀರೋಸ್‘​ ಜರ್ಸಿಯನ್ನು ಒಗ್ಗಟ್ಟಿನಿಂದ ಮತ್ತು ಕೃತಜ್ಞತೆಯ ಸಂಕೇತವಾಗಿ ಧರಿಸಲು ನಾನು ನಿಜವಾಗಿಯೂ ಹೆಮ್ಮ ಪಡುತ್ತೇನೆ. ಸಂಕಷ್ಟದಲ್ಲಿರುವ ಸಮೂದಾಯವನ್ನು ಬೆಂಬಲಿಸಲು ಹಗಲು-ರಾತ್ರಿ ದುಡಿಯುತ್ತಿರುವ ಪ್ರತಿಯೊಬ್ಬರನ್ನು ನನ್ನ ನಾಯಕ ಎಂದು ಕರೆಯಲು ನನಗೆ ಗೌರವವಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ತಂಡದ ಸಹಾ ಆಟಗಾರರಾದ ಪಾರ್ಥೀವ್ ಪಟೇಲ್​ ಹಾಗೂ ಯುವ ಆಟಗಾರ ದೇವದತ್​ ಪಡಿಕ್ಕಲ್​ ಕೂಡ ಭಾಗವಹಿಸಿದ್ದರು.

ಆರ್​ಸಿಬಿ ಈಗಾಗಲೆ ಕೆಲವು ಕೋವಿಡ್​ ಹೋರಾಟಗಾರರ ಸ್ಪೂರ್ತಿದಾಯಕ ಸ್ಟೋರಿಗಳನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.